ಅಂತಾರಾಷ್ಟ್ರೀಯ ಹಾಕಿ`ಗೆ ಸ್ಟಾರ್ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ನಿವೃತ್ತಿ: 2024ರ ‘ಪ್ಯಾರಿಸ್ ಒಲಿಂಪಿಕ್ಸ್’ ಕೊನೆಯ ಪಂದ್ಯ
PR Sreejesh Retirement: ಸಹೋದ್ಯೋಗಿಗಳ ಬಗ್ಗೆಯೂ ಬರೆದುಕೊಂಡಿರುವ ಅವರು, `ನನ್ನ ಸಹೋದ್ಯೋಗಿಗಳು ಕಷ್ಟದ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನಾವೆಲ್ಲರೂ ಇಲ್ಲಿ ಪ್ಯಾರಿಸ್ʼನಲ್ಲಿ ನಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಬಯಸುತ್ತೇವೆ. ಪದಕ ಗೆಲ್ಲಲು ಬಯಸುತ್ತೇವೆ`: ಎಂದಿದ್ದಾರೆ.
PR Sreejesh Retirement: 2024ರ ಟಿ20 ವಿಶ್ವಕಪ್ ನಂತರ ವಿರಾಟ್-ರೋಹಿತ್ ಟಿ20ಗೆ ವಿದಾಯ ಹೇಳಿದ್ದರು. ಇದಾದ ಬಳಿಕ 2024ರ ಪ್ಯಾರಿಸ್ ಒಲಿಂಪಿಕ್ಸ್ʼಗೂ ಮುನ್ನ ಮತ್ತೊಬ್ಬ ಆಟಗಾರ ನಿವೃತ್ತಿ ಘೋಷಿಸಿದ್ದಾರೆ. ಸುಮಾರು 14 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ಟೀಂ ಇಂಡಿಯಾಗೆ ದೊಡ್ಡ ಕೊಡುಗೆ ನೀಡಿದ ಭಾರತೀಯ ಹಾಕಿ ತಂಡದ ಮಾಜಿ ನಾಯಕ ಮತ್ತು ಗೋಲ್ ಕೀಪರ್ ಪಿಆರ್ ಶ್ರೀಜೇಶ್ ನಿವೃತ್ತಿ ಘೋಷಿಸಿದ್ದಾರೆ.
"ನಾನು ಪ್ಯಾರಿಸ್ʼನಲ್ಲಿ ನನ್ನ ಕೊನೆಯ ಆಟವನ್ನು ಆಡಲಿದ್ದೇನೆ. ಇದುವರೆಗಿನ ಈ ಪ್ರಯಾಣವು ಅಸಾಧಾರಣವಾಗಿತ್ತು. ನನ್ನ ಕುಟುಂಬ, ತಂಡದ ಸಹ ಆಟಗಾರರು, ತರಬೇತುದಾರರು, ಅಭಿಮಾನಿಗಳು ಮತ್ತು ಹಾಕಿ ಇಂಡಿಯಾದಿಂದ ನಾನು ಪಡೆದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು" ಎನ್ನುತ್ತಾ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಸಹೋದ್ಯೋಗಿಗಳ ಬಗ್ಗೆಯೂ ಬರೆದುಕೊಂಡಿರುವ ಅವರು, "ನನ್ನ ಸಹೋದ್ಯೋಗಿಗಳು ಕಷ್ಟದ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನಾವೆಲ್ಲರೂ ಇಲ್ಲಿ ಪ್ಯಾರಿಸ್ʼನಲ್ಲಿ ನಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಬಯಸುತ್ತೇವೆ. ಪದಕ ಗೆಲ್ಲಲು ಬಯಸುತ್ತೇವೆ": ಎಂದಿದ್ದಾರೆ.
ಇದನ್ನೂ ಓದಿ: "ಆತ 3 ಮದುವೆ ವಿಚಾರ ಮುಚ್ಚಿಟ್ಟು ನನ್ನನ್ನು ಗರ್ಭಿಣಿ ಮಾಡಿದ"- ಖ್ಯಾತ ನಟಿ ಸೆನ್ಸೇಷನಲ್ ಹೇಳಿಕೆ
ಶ್ರೀಜೇಶ್ 2010 ರಲ್ಲಿ ಹಾಕಿ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ ತಮ್ಮ ವೃತ್ತಿಜೀವನದಲ್ಲಿ ಮೂರು ಬಾರಿ ಒಲಿಂಪಿಕ್ಸ್ʼನಲ್ಲಿ ಟೀಮ್ ಇಂಡಿಯಾಕ್ಕೆ ಕೊಡುಗೆ ನೀಡಿದ್ದಾರೆ. ಇದೀಗ ನಾಲ್ಕನೇ ಹಾಗೂ ಕೊನೆಯ ಬಾರಿಗೆ ಶ್ರೀಜೇಶ್ ಇಳಿಯಲಿದ್ದಾರೆ. 2014 ರ ಏಷ್ಯನ್ ಗೇಮ್ಸ್ʼನಲ್ಲಿ ಚಿನ್ನದ ಪದಕ ಮತ್ತು ಜಕಾರ್ತ-ಪಾಲೆಂಬಾಂಗ್‌ನಲ್ಲಿ ನಡೆದ 2018 ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಸೇರಿದಂತೆ ಪ್ರಮುಖ ಸಂದರ್ಭಗಳಲ್ಲಿ ಅವರು ಭಾರತವನ್ನು ಹಲವು ಬಾರಿ ವಿಜಯದತ್ತ ಮುನ್ನಡೆಸಿದ್ದಾರೆ. ಶ್ರೀಜೇಶ್ 2018 ರಲ್ಲಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮತ್ತು 2019 ರಲ್ಲಿ ಭುವನೇಶ್ವರದಲ್ಲಿ ನಡೆದ ಎಫ್‌ಐಹೆಚ್ ಪುರುಷರ ಸರಣಿ ಫೈನಲ್ʼನಲ್ಲಿ ಗೆದ್ದ ತಂಡದಲ್ಲಿ ಪ್ರಮುಖ ಆಟಗಾರರಾಗಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.