ಹುಚ್ಚರಂರೆ ಏನೇನೋ ಮಾತಾಡಬೇಡಿ: ಮೋದಿ ಸುಳ್ಳಿನ ಕ್ರಾಂತಿ ಎಂದ ಕಾಂಗ್ರೆಸ್ ಹೇಳಿಕೆಗೆ ಪ್ರಹ್ಲಾದ ಜೋಶಿ ತಿರುಗೇಟು
ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಮುಖಗಳು. ಇವರು ಸತ್ಯ ಹರೀಶ್ಚಂದ್ರರಾಗಿದ್ದಾರೆ ದೇಶದ ಜನ ನಿಮ್ಮನ್ನೇಕೆ ಮೂಲೆಗುಂಪು ಮಾಡುತ್ತಿದ್ದರು? ಎಂದು ಜೋಶಿ ಪ್ರಶ್ನಿಸಿದರು.
ಹುಬ್ಬಳ್ಳಿ: ಹುಚ್ಚು ಹುಚ್ಚರ ಹಾಗೆ ಏನೇನೋ ಮಾತಾಡಬೇಡಿ. ಆಗಲೇ ಜನ ನಿಮ್ಮನ್ನು ದೇಶದಲ್ಲಿ ಮೂಲೆಗುಂಪು ಮಾಡಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದರು.
ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಮುಖಗಳು. ಇವರು ಸತ್ಯ ಹರೀಶ್ಚಂದ್ರರಾಗಿದ್ದಾರೆ ದೇಶದ ಜನ ನಿಮ್ಮನ್ನೇಕೆ ಮೂಲೆಗುಂಪು ಮಾಡುತ್ತಿದ್ದರು? ಎಂದು ಜೋಶಿ ಪ್ರಶ್ನಿಸಿದರು.
ಇದನ್ನೂ ಓದಿ: ಜಸ್ಟ್ ಕೂದಲು ಕಟ್ ಮಾಡಿದ್ದಕ್ಕೆ ವಿರಾಟ್ ಕೊಹ್ಲಿ ಖರ್ಚು ಮಾಡೋ ಹಣವೆಷ್ಟು ಗೊತ್ತಾ?
ಕಾಂಗ್ರೆಸ್ ನಾಯಕರು ಮೋದಿ ಅವರನ್ನು ಸುಳ್ಳಿನ ಸರದಾರ, ಸುಳ್ಳಿನ ಕ್ರಾಂತಿಕಾರ ಎನ್ನುತ್ತಿದ್ದಾರಲ್ಲ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ಕಾಂಗ್ರೆಸ್ಸೇ ಒಂದು ಸುಳ್ಳು. ಪ್ರಧಾನಿ ಮೋದಿ ಮತ್ತು ಬಿಜೆಪಿ ಮೇಲೆ ಸುಳ್ಳು ಪದ ಪ್ರಯೋಗಿಸುತ್ತಿಯೇ? ಅಯ್ಯೋ ರಾಮಾ..! ಎಂದು ಉದ್ಘರಿಸಿದರು.
ಅರೇಳು ದಶಕಗಳ ಕಾಲ ಗರೀಭಿ ಹಠಾವೋ ಎಂದು ಸುಳ್ಳು ಹೇಳಿದವರು ಯಾರು? ಇವತ್ತು ಗರೀಭಿ ಹಠಾವೋ ಆಗಿದ್ದಿದ್ರೆ ಫ್ರೀ ಕೊಡುವ ಪರಿಸ್ಥಿತಿ ಏಕೆ ಬರುತ್ತಿತ್ತು? ಶ್ರೀಮಂತರಿಗೆ ಫ್ರೀ ಕೊಡುತ್ತಿದ್ದೀರಾ ಹಾಗಾದರೆ? ಎಂದು ಪ್ರಶ್ನಿಸಿದರು.
ಬ್ಯಾಂಕಿಂಗ್ ವಂಚನೆ ಮಾಡಿದ್ರಿ ಸುಳ್ಳು ಹೇಳಿದ್ರಿ, ಕಲ್ಲಿದ್ದಲು ಹಗರಣ ಮಾಡಿದ್ರಿ, 34000 ಚ. ಕಿ.ಮೀ. ಭೂಮಿ ಚೀನಾ ಪಾಲು ಮಾಡಿದ್ರಿ. ಈಗ ಚೀನಾ ಆಕ್ರಮಣ ಬಗ್ಗೆ ಮಾತಾಡುತ್ತಿದ್ದೀರಿ. ನಾಚಿಕೆ ಆಗುವುದಿಲ್ಲವೇ ಕಾಂಗ್ರೆಸ್ಸಿಗರಿಗೆ? ಎಂದು ತರಾಟೆಗೆ ತೆಗೆಗುಕೊಂಡರು.
ಒಂದು ಕಾಲದಲ್ಲಿ ಉತ್ತರಪ್ರದೇಶದವರೇ ಪ್ರಧಾನಿ, ಲಕ್ನೋ ಸೇರಿದಂತೆ ಸಣ್ಣ ಮುನ್ಸಿಪಾಲ್ಟಿಯಲ್ಲೂ ಕಾಂಗ್ರೆಸ್ ಆಡಳಿತವಿತ್ತು. ಆದರೆ ಇವತ್ತು 2-3 ಸಿಟಿಗೆ ಭಿಕ್ಷೆ ಬೇಡುತ್ತಿದ್ದೀರಿ. ನಿಮ್ಮ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ? ಜನ ನಿಮ್ಮನ್ನು ಯಾವ ಮಟ್ಟಕ್ಕೆ ಒಯ್ದಿದ್ದಾರೆ ನೋಡಿಕೊಳ್ಳಿ ಎಂದು ಸಚಿವ ಜೋಶಿ ತಿರುಗೇಟು ನೀಡಿದರು.
ಉತ್ತರ ಪ್ರದೇಶದಲ್ಲಿ ರಾಬರ್ಟ್ ವಾದ್ರಾ ಅವರನ್ನು ನಿಲ್ಲಿಸಿದ್ದಾರೆ. ಅವ್ರು ಸೋಲ್ತಾರೆ. ಅಲ್ಲಿ ಕಾಂಗ್ರೆಸ್’ಗೆ ಶೂನ್ಯ. ಇನ್ನು ಮಹಾರಾಷ್ಟ್ರದಲ್ಲಿ 2-3 ಸೀಟು ಗೆಲ್ಲೋದು ಕಷ್ಟ. ಉತ್ತರಾಕಖಂಡದಂತಹ ಸಣ್ಣ ರಾಜ್ಯದಲ್ಲೂ ಅಸ್ತಿತ್ವವಿಲ್ಲ. ಇಂಥ ಸ್ಥಿತಿ ತಲುಪಿದ್ದೀರಿ ಎಂದು ಹೇಳಿದರು.
ಇದನ್ನೂ ಓದಿ: ಮನುಷ್ಯರು ತಿನ್ನೋದಲ್ಲ, ನಾಯಿ ತಿನ್ನುವ ಈ ಆಹಾರವೇ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಫೇವರೇಟ್!
ಈಗ ಬಿಜೆಪಿ ಬಗ್ಗೆ ಸುಳ್ಳಿನ ಕ್ರಾಂತಿ ಎನ್ನುತ್ತಿದ್ದೀರಿ. ಹೀಗೆ ಹುಚ್ಚ ಹುಚ್ಚರ ಹಾಗೆ ಆಡುವುದಕ್ಕೆ ಇಂದು ಜನ ನಿಮ್ಮನ್ನ ಈ ಸ್ಥಿತಿಗೆ ತಂದಿದ್ದಾರೆ ಎಂದು ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ಸಿಗರ ವಿರುದ್ಧ ಹರಿಹಾಯ್ದರು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ