Cricketer Rishabh Pant Car Accident: ತಮ್ಮ ಬ್ಯಾಟಿಂಗ್ ಮೂಲಕ ವಿಶ್ವದಾದ್ಯಂತ ಜನರ ಮನ ಗೆದ್ದಿರುವ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ರೂರ್ಕಿ ಬಳಿ ಕಾರು ಅಪಘಾತವಾಗಿದ್ದು, ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಂತರ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತದಲ್ಲಿ, ಅವರ ಕಾರು ಸುಟ್ಟು ಬೂದಿಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಅವರು ಕಾರಿನ ಗಾಜು ಒಡೆದು ಹೊರಗೆ ಜಿಗಿದಿದ್ದು, ಇದರಿಂದ ಅವರ ಪ್ರಾಣ ಉಳಿದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ರಿಷಭ್ ಪಂತ್ ಬದುಕುಳಿದದ್ದೇ ಪವಾಡ”: ಭೀಕರ ಅಪಘಾತ ಕಂಡ ಸಾರಿಗೆ ತಜ್ಞ ಹೇಳಿದ್ದೇನು ಗೊತ್ತಾ?


ಪಂತ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ನರೇಂದ್ರ ಮೋದಿ ಅವರು, ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಈ ಬಳಿಕ ಪಂತ್ ಅವರ ತಾಯಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮಗನ ಸ್ಥಿತಿಗತಿಯ ಬಗ್ಗೆ ತಿಳಿದುಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮೋದಿ, 'ಖ್ಯಾತ ಕ್ರಿಕೆಟಿಗ ರಿಷಭ್ ಪಂತ್ ಅಪಘಾತದಿಂದ ನನಗೆ ನೋವಾಗಿದೆ. ಅವರ ಉತ್ತಮ ಆರೋಗ್ಯ ಮತ್ತು ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.


ಪಂತ್ ತಲೆ, ಬೆನ್ನು ಮತ್ತು ಕಾಲಿಗೆ ಗಾಯಗಳಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ವರದಿಗಳ ಪ್ರಕಾರ, MRI ಪರೀಕ್ಷೆಯಲ್ಲಿ ಪಂತ್ ಅವರ ಮೆದುಳು ಮತ್ತು ಬೆನ್ನುಹುರಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಕಂಡುಬಂದಿದೆ. ಆದರೆ, ದೇಹ ಮತ್ತು ಮುಖದ ಮೇಲಿನ ಗಾಯಗಳನ್ನು ಸರಿಪಡಿಸಲು ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಸದ್ಯ ಪಂತ್ ಸ್ಥಿತಿ ಸ್ಥಿರವಾಗಿದೆ.


ರಿಷಬ್ ಪಂತ್ ಅವರ ಬಲ ಮೊಣಕಾಲಿನ ಅಸ್ಥಿರಜ್ಜು ಮುರಿದಿದ್ದು, ಈ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಕೂಡ ಚಿಂತಿಸಿದೆ. ಮಾಹಿತಿಯ ಪ್ರಕಾರ, ಬಿಸಿಸಿಐನ ವೈದ್ಯಕೀಯ ತಂಡವು ಪಂತ್ ಅವರ ಅಸ್ಥಿರಜ್ಜುಗೆ ಚಿಕಿತ್ಸೆ ನೀಡಬಹುದು, ಇದಕ್ಕಾಗಿ ಪಂತ್ ಅನ್ನು ವಿದೇಶಕ್ಕೂ ಕಳುಹಿಸಬಹುದು.


ಇದನ್ನೂ ಓದಿ: ಇಂದು ಈ ರಾಶಿಯ ಜನರು ತಮ್ಮ ಸ್ವಾರ್ಥಕ್ಕಾಗಿ ಬೇರೆಯವರನ್ನು ನಾಶಪಡಿಸುತ್ತಾರೆ!


ಅಪಘಾತದ ಬಳಿಕ ಪಂತ್ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಪಕ್ಕದಲ್ಲೇ ಕಾರು ಹೊತ್ತಿ ಉರಿಯುತ್ತಿತ್ತು. ಆಗ ಅಲ್ಲಿ ಹಾದು ಹೋಗುತ್ತಿದ್ದ ಹರ್ಯಾಣ ರೋಡ್ ಲೈನ್ಸ್ ಡ್ರೈವರ್ ಬಂದು ರಿಷಬ್ ಪಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೀಗಾಗಿ ತಕ್ಷಣ ಚಿಕಿತ್ಸೆ ಪಡೆದು ಜೀವ ಉಳಿಸಲು ಸಾಧ್ಯವಾಯಿತು. ಜೀವ ಉಳಿಸಿದ ಚಾಲಕ ಸುಶೀಲ್ ಕುಮಾರ್ ಮತ್ತು ಕಂಡಕ್ಟರ್ ಪರಮಜಿತ್ ಅವರನ್ನು ಸನ್ಮಾನಿಸಲಾಯಿತು. ಹರಿಯಾಣ ರಾಜ್ಯ ಸಾರಿಗೆ ಸಂಸ್ಥೆಯ ಪಾಣಿಪತ್ ಡಿಪೋ ಅವರನ್ನು ಗೌರವಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.