ಬೆಂಗಳೂರು : ರೋಚಕವಾಗಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ತಂಡ ಯುಪಿ ಯೋಧಾಸ್‌ ವಿರುದ್ಧ 44-42 ಅಂತರದಲ್ಲಿ ಜಯ ಗಳಿಸಿ ಅಜೇಯವಾಗಿ ಮುನ್ನಡೆದಿದೆ. ಆಡಿದ ಸತತ ಮೂರು ಪಂದ್ಯಗಳನ್ನೂ ಡೆಲ್ಲಿ ಜಯ ಗಳಿಸಿ ಹ್ಯಾಟ್ರಿಕ್‌ ಸಾಧನೆ ಮಾಡಿದೆ.


COMMERCIAL BREAK
SCROLL TO CONTINUE READING

ನಾಯಕ ನವೀನ್‌ ಕುಮಾರ್‌ (13) ಹಾಗೂ ಮಂಜಿತ್‌ (12)ಅವರ ಸೂಪರ್‌ 10 ಸಾಧನೆಯ ನೆರವಿನಿಂದ ದಬಾಂಗ್‌ ಡೆಲ್ಲಿ 44-42 ಅಂತರದಲ್ಲಿ ಜಯ ಗಳಿಸಿ ನೈಜ ಚಾಂಪಿಯನ್‌ ಎಂಬುದನ್ನು ಸಾಬೀತುಪಡಿಸಿತು. ಇಲ್ಲಿ ಮಂಜಿತ್‌ ನಿಜವಾದ ಗೇಮ್‌ ಚೇಂಜರ್‌ ಆದರು. ಯುಪಿ ಯೋಧಾಸ್ ಪರ ಸುರಿಂದರ್ ಗಿಲ್‌ 21 ರೈಡಿಂಗ್‌ ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಆದರೆ ಪ್ರಸಕ್ತ ಋತುವಿನಲ್ಲಿ ಪಂದ್ಯವೊಂದರಲ್ಲೇ ಅತಿ ಹೆಚ್ಚು ರೈಡಿಂಗ್‌ ಅಂಕ ಗಳಿಸಿದ ಗೌರವಕ್ಕೆ ಸುರಿಂದರ್‌ ಗಿಲ್‌  ಪಾತ್ರರಾದರು. 


ಇದನ್ನೂ ಓದಿ : Pro Kabaddi 2022 : ಬುಲ್ಸ್‌ ಓಟಕ್ಕೆ ವಾರಿಯರ್ಸ್ ಬ್ರೇಕ್ : ಬೆಂಗಳೂರು ವಿರುದ್ಧ ಬೆಂಗಾಲ್‌ಗೆ ಜಯ


ದಬಾಂಗ್‌ ಡೆಲ್ಲಿ ತಂಡದ ನಾಯಕ ನವೀನ್‌ ಕುಮಾರ್‌ ಪ್ರೋ ಕಬಡ್ಡಿ ಲೀಗ್‌ ಇತಿಹಾಸಲ್ಲಿ 45ನೇ ಬಾರಿಗೆ ಸೂಪರ್‌ 10 ಸಾಧನೆ ಮಾಡಿದ ಕೀರ್ತಿಗೆ ಪಾತ್ರರಾದರು. 


ಪ್ರಥಮಾರ್ಧದಲ್ಲಿ ಯೋಧಾಸ್‌ ಮುನ್ನಡೆ


ಸುರೇಂದರ್‌ ಗಿಲ್‌ (10) ಅವರ ಸೂಪರ್‌ 10 ನೆರವಿನಿಂದ ಯೋಪಿ ಯೋಧಾಸ್‌ ತಂಡ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 25-19 ಅಂತರದಲ್ಲಿ ಮುನ್ನಡೆ ಸಾಧಿಸಿದೆ.


ಯುಪಿ ಯೋಧಾಸ್‌ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆರಂಭದಲ್ಲೇ ದಬಾಂಗ್‌ ಡೆಲ್ಲಿಯ ನಾಯಕ ನವೀನ್‌ ಎಕ್ಸ್‌ಪ್ರೆಸ್‌ ಅವರನ್ನು ನಿಯಂತ್ರಿಸುವಲ್ಲಿ ಯೋಧಾಸ್‌ ಯಶಸ್ವಿಯಾಯಿತು. ಈ ನಿಯಂತ್ರಣವೇ ಯೋಧಾಸ್‌ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಪ್ರದೀಪ್‌ ನರ್ವಾಲ್‌ 5 ಅಂಕಗಳನ್ನು ಗಳಿಸಿ ತಂಡದ ಬೃಹತ್‌ ಮುನ್ನಡೆಗೆ ನೆರವಾದರು. 


ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ಪ್ರಥಮಾರ್ಧದ ಕೊನೆಯ ಕ್ಷಣದ ವರಗೆಗೂ ಬೃಹತ್‌ ಅಂತರದಲ್ಲಿ ಹಿನ್ನಡೆ ಕಂಡಿತ್ತು. ಆದರೆ ಯುವ ಆಟಗಾರ ಮಂಜೀರ್‌ ರೈಡಿಂಗ್‌ನಲ್ಲಿ 4 ಅಂಕಗಳನ್ನು ಗಳಿಸಿ ಡೆಲ್ಲಿ ತಂಡ ಚೇತರಿಸಿಕೊಳ್ಳುವಂತೆ ಮಾಡಿದರು. ನಾಯಕ ನವೀನ್‌ ಎಕ್ಸ್‌ಪೆಸ್‌ ಕೊನೆಯ ಕ್ಷಣದಲ್ಲಿ ತಂಡಕ್ಕೆ ನೆರವಾಗಿ 8 ಅಂಕಗಳನ್ನು ಗಳಿಸಿ ನಾಯಕನ ಜವಾಬ್ದಾರಿ ಮೆರೆದರು.


ಇದನ್ನೂ ಓದಿ : ಕುಸ್ತಿಪಟು ಸುಶೀಲ್ ಕುಮಾರ್ ಮೇಲೆ ಕೊಲೆ ಆರೋಪ ಪ್ರಕರಣ ದಾಖಲು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.