Pro Kabaddi League Season 10: ಪ್ರೊ ಕಬಡ್ಡಿ ಲೀಗ್‌ನ ಆಯೋಜಕ ಸಂಸ್ಥೆ ಮಶಾಲ್‌ ಸ್ಪೋರ್ಟ್ಸ್ 10ನೇ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪ್ರೊ ಕಬಡ್ಡಿ ಲೀಗ್‌ 2023 ರ ಡಿಸೆಂಬರ್‌ 2 ರಂದು ಅಹಮದಾಬಾದ್‌ನ ಅರೆನಾ ಬೈ ಟ್ರಾನ್ಸ್‌ಸ್ಟೇಡಿಯಾ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ನಂತರ ಫ್ರಾಂಚೈಸಿಯ ತವರು ನಗರಗಳಲ್ಲಿ ಪಂದ್ಯಗಳು ನಡೆಯವಲಿವೆ. ಲೀಗ್‌ ಹಂತವು 2023 ಡಿಸೆಂಬರ್‌ 2 ರಿಂದ 2024ರ ಫೆಬ್ರವರಿ 21 ರವರೆಗೆ ನಡೆಯಲಿದೆ. ಪ್ಲೇಆಫ್‌ಗಳ ವೇಳಾ ಪಟ್ಟಿ ನಂತರ ಪ್ರಕಟಗೊಳ್ಳಲಿದೆ.


COMMERCIAL BREAK
SCROLL TO CONTINUE READING

ಅಹಮದಾಬಾದ್‌ ನಲ್ಲಿ 2023ರ ಡಿಸೆಂಬರ್‌ 2ರಿಂದ 7ರವರೆಗೆ ಪಂದ್ಯಗಳು ನಡೆಯಲಿದೆ. ನಂತರ ಬೆಂಗಳೂರು (8-13 ಡಿಸೆಂಬರ್‌ 2023), ಪುಣೆ (15-20 ಡಿಸೆಂಬರ್‌ 2023), ಚೆನ್ನೈ (22-27 ಡಿಸೆಂಬರ್‌ 2023), ನೋಯ್ಡಾ (29 ಡಿಸೆಂಬರ್‌ 2023 - 3 ಜನವರಿ 2024), ಮುಂಬೈ (5-10 ಜನವರಿ 2024), ಜೈಪುರ (12-17 ಜನವರಿ 2024), ಹೈದರಾಬಾದ್‌ (19-24 ಜನವರಿ 2024), ಪಟನಾ (26-31 ಜನವರಿ 2024), ಡೆಲ್ಲಿ(2-7 ಫೆಬ್ರವರಿ 2024), ಕೋಲ್ಕೊತಾ (9-14 ಫೆಬ್ರವರಿ 2024) ಮತ್ತು ಪಂಚಕುಲ (16-21 ಫೆಬ್ರವರಿ 2024) ಗುಜರಾತ್‌ ಜಯಂಟ್ಸ್‌ ಹಾಗೂ ತೆಲುಗು ಟೈಟನ್ಸ್‌ ತಂಡಗಳು ಮುಖಾಮುಖಿಯೊಂದಿಗೆ 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ನಡೆಯಲಿದೆ. ಪವನ್‌ ಶೆರಾವತ್‌, ಫಜೆಲ್‌ ಅತ್ರಾಚಲಿ, ಅಜಿಂಕ್ಯ ಪವಾರ್‌ ಮತ್ತು ನವೀನ್‌ ಕುಮಾರ್‌ ಅವರಂತಹ ಸ್ಟಾರ್‌ಗಳು ವಾರಾಂತ್ಯದ ಹೈವೋಲ್ಟೇಜ್‌ ಪಂದ್ಯಗಳ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ.


ಇದನ್ನೂ ಓದಿ:  4 ರನ್’ಗೆ 2 ವಿಕೆಟ್ ಕಿತ್ತ ಕಿಲಾಡಿ! ಮಾವನ ದಾಖಲೆಯನ್ನೇ ಮುರಿದು ವಿಶ್ವದಾಖಲೆ ಬರೆದ ಸ್ಟಾರ್ ವೇಗಿ


ಪಿಕೆಎಲ್‌ 10ನೇ ಆವೃತ್ತಿಯ ವೇಳಾಪಟ್ಟಿಯ (Pro Kabaddi League Season 10) ಬಗ್ಗೆ ಮಾಹಿತಿ ನೀಡಿರುವ ಮಶಾಲ್‌ ಸ್ಪೋರ್ಟ್ಸ್ ಮತ್ತು ಪ್ರೊ ಕಬಡ್ಡಿ ಲೀಗ್‌ನ ಲೀಗ್‌ ಮುಖ್ಯಸ್ಥ ಅನುಪಮ್‌ ಗೋಸ್ವಾಮಿ, ‘‘ ಪ್ರೊ ಕಬಡ್ಡಿ 10ನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲು ಮಶಾಲ್‌ ಸ್ಪೋರ್ಟ್ಸ್ ಸಂತಸ ವ್ಯಕ್ತಪಡಿಸುತ್ತದೆ. ಹಿಂದಿನ ಆವೃತ್ತಿಗಳಂತೆ ಈ ವೇಳಾ ಪಟ್ಟಿಯು ಮೂಲಕ ಪ್ರೇಕ್ಷರನ್ನು ರಂಜಿಸಿ ಗುಣಮಟ್ಟದ ಕಬಡ್ಡಿ ಆಟವನ್ನು ನೀರಿಕ್ಷಿಸುತ್ತಿದ್ದೇವೆ ಎಂದರು. ಅದೆನೇ ಇರ್ಲಿ ಈ ಬಾರಿಯ ಪ್ರೋ ಕಬಡ್ಡಿ ಸಹ ಪ್ರತಿ ಬಾರಿಯಂತೆ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.