ವಿಶ್ವಕಪ್ ಸೋಲಿನ ಬಳಿಕ ಪ್ರೊ ಕಬ್ಬಡ್ಡಿ ಲೀಗ್ ನಲ್ಲಿ ಆಡುತ್ತಾರೆಯಂತೆ ಈ ಫಾಸ್ಟ್ ಬೌಲರ್ !
Pro Kabaddi League:ಇದೀಗ ಎಲ್ಲರ ಚಿತ್ತ ಪ್ರೊ ಕಬ್ಬಡ್ಡಿ ಲೀಗ್ ನತ್ತ ನೆಟ್ಟಿದೆ. ಪ್ರೊ ಕಬ್ಬಡ್ಡಿ ಲೀಗ್ ಡಿಸೆಂಬರ್ 2 ರಿಂದ ಪ್ರಾರಂಭವಾಗಲಿದೆ. ಇದೀಗ ನ್ಯೂಜಿಲೆಂಡ್‌ನ ಫಾಸ್ಟ್ ಬೌಲರ್ ಟ್ರೆಂಟ್ ಬೌಲ್ಟ್ ತಮ್ಮ ಹೇಳಿಕೆಯಿಂದ ಕ್ರೀಡಾ ಲೋಕದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.
Pro Kabaddi League : ವಿಶ್ವಕಪ್ ಕ್ರಿಕೆಟ್ ಮುಕ್ತಾಯವಾಗಿದೆ. ವಿಶ್ವಕಪ್ ಬಳಿಕ ಇದೀಗ ಎಲ್ಲರ ಚಿತ್ತ ಪ್ರೊ ಕಬ್ಬಡ್ಡಿ ಲೀಗ್ ನತ್ತ ನೆಟ್ಟಿದೆ. ಪ್ರೊ ಕಬ್ಬಡ್ಡಿ ಲೀಗ್ ಡಿಸೆಂಬರ್ 2 ರಿಂದ ಪ್ರಾರಂಭವಾಗಲಿದೆ. ಇದೀಗ ನ್ಯೂಜಿಲೆಂಡ್‌ನ ಫಾಸ್ಟ್ ಬೌಲರ್ ಟ್ರೆಂಟ್ ಬೌಲ್ಟ್ ತಮ್ಮ ಹೇಳಿಕೆಯಿಂದ ಕ್ರೀಡಾ ಲೋಕದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ. ಅವರು ತಮ್ಮ ತಂಡದ ಆಟಗಾರರಾದ ಡೇರಿಲ್ ಮಿಚೆಲ್ ಮತ್ತು ಟಿಮ್ ಸೌಥಿ ಅವರೊಂದಿಗೆ ಕಬಡ್ಡಿ ಆಡುವುದನ್ನು ಸಮರ್ಥಿಸಿದ್ದಾರೆ. ಐಸಿಸಿ ಕ್ರಿಕೆಟ್ ವಿಶ್ವಕಪ್‌ಗಾಗಿ ಭಾರತದಲ್ಲಿ ತಂಗಿದ್ದ ವೇಳೆ, ಪ್ರೊ ಕಬಡ್ಡಿ ಲೀಗ್‌ನ ಕೆಲವು ದೃಶ್ಯಗಳನ್ನು ತೋರಿಸಿದಾಗ ಕಬಡ್ಡಿ ಆಟ ಬಹಳ ಆಸಕ್ತಿದಾಯಕ ಎನ್ನುವುದನ್ನು ನ್ಯೂಜಿಲೆಂಡ್ ಕ್ರಿಕೆಟಿಗರು ಅರಿತುಕೊಂಡಿದ್ದಾರೆಯಂತೆ.
ಕಾಲುಗಳು ಸದೃಢವಾಗಿರಬೇಕು :
ಈ ಮಧ್ಯೆ, ಕಬಡ್ಡಿ ಆಟವನ್ನು ಪ್ರಯತ್ನಿಸುವ ತನ್ನ ತಂಡದ ಆಟಗಾರರಾದ ಮಿಚೆಲ್ ಮತ್ತು ಸೌಥಿಯನ್ನು ಟ್ರೆಂಟ್ ಬೌಲ್ಟ್ ಸಮರ್ಥಿಸಿದ್ದಾರೆ. ಈ ಆಟಕ್ಕೆ ಬಲವಾದ ಕಾಲುಗಳು ಬೇಕು ಎನ್ನುವುದನ್ನು ನಾನು ಗಮನಿಸಿದ್ದೇನೆ. ಈ ಆಟಕ್ಕೆ ಡ್ಯಾರಿಲ್ ಮಿಚೆಲ್ ಮತ್ತು ಟಿಮ್ ಸೌಥಿ ಹೆಸರನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೆ, ಕಬಡ್ಡಿಯಲ್ಲಿ ಗ್ಲೆನ್ ಫಿಲಿಪ್ಸ್ ಅವರನ್ನು ನೋಡುವ ಸಾಧ್ಯತೆಯ ಬಗ್ಗೆ ಕೂಡಾ ಆಸಕ್ತಿ ತೋರಿದ್ದಾರೆ.
ಇದನ್ನೂ ಓದಿ : ಟೀಂ ಇಂಡಿಯಾದ ಈ 4 ಆಟಗಾರರಿಗೆ ಇದೇ ಕೊನೆಯ ವಿಶ್ವಕಪ್! ರಾಹುಲ್ ದ್ರಾವಿಡ್ ಜೊತೆ ಅಂತ್ಯವಾಯ್ತು ಇವರ ಕ್ರಿಕೆಟ್ ಬದುಕು
'ರಗ್ಬಿಯಂತೆ ಕಾಣುತ್ತಿದೆ'
ಇಷ್ಟೇ ಅಲ್ಲ, ಬಹುಶಃ ನನ್ನಲ್ಲಿ ಆಟದ ಚಾಣಾಕ್ಷತೆ ಇದೆ, ಆದರೆ ಶಕ್ತಿ ಇಲ್ಲ ಎಂದಿದ್ದಾರೆ. ಕಬಡ್ಡಿ ಆಟಕ್ಕೆ ಚಾಣಾಕ್ಯತೆ ಮತ್ತು ಬಲ ಎರಡೂ ಬೇಕು. ಲಾಕಿ ಫರ್ಗುಸನ್ ಚೆನ್ನಾಗಿ ಆಡಬಲ್ಲರು ಎಂದಿದ್ದಾರೆ. ಇನ್ನು ಆಟದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಲ್ಯಾಥಮ್, ಈ ಆಟಕ್ಕೆ ಸಾಕಷ್ಟು ದೈಹಿಕ ಶ್ರಮ ಬೇಕು. ಇದು ರಗ್ಬಿಯಂತೆಯೇ ಕಾಣುತ್ತದೆ ಎಂದಿದ್ದಾರೆ.
ಈ ಆಟಕ್ಕೆ ನಾನು ಗ್ಲೆನ್ ಫಿಲಿಪ್ಸ್ ಹೆಸರನ್ನು ತೆಗೆದುಕೊಳ್ಳುತ್ತೇನೆ ಎಂದು ಅವರು ಹೇಳಿದರು. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಮುಕ್ತಾಯದ ನಂತರ, ಇದೀಗ ಎಲ್ಲರ ಗಮನ ಡಿಸೆಂಬರ್ 2 ರಿಂದ ಪ್ರಾರಂಭವಾಗುವ ಪ್ರೊ ಕಬಡ್ಡಿ ಲೀಗ್‌ನ ಹತ್ತನೇ ಸೀಸನ್ ನಗತ್ತ ನೆಟ್ಟಿದೆ.
ಇದನ್ನೂ ಓದಿ : 2024ರ ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾ ಪ್ರಕಟ: ಈ ಆಟಗಾರನೇ ನಾಯಕ- ರೋಹಿತ್, ಕೊಹ್ಲಿಗಿಲ್ಲ ಸ್ಥಾನ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ