Singapore Open 2022: ಶುಕ್ರವಾರ ನಡೆದ ಸಿಂಗಾಪುರ ಓಪನ್‌ 2022ರಲ್ಲಿ ಭಾರತದ ಅಗ್ರಮಾನ್ಯ ಆಟಗಾರ್ತಿ ಪಿ.ವಿ.ಸಿಂಧು ಅವರು ಜಪಾನ್‌ನ ಸೈನಾ ಕವಾಕಮಿ ಅವರನ್ನು 21-15, 21-7 ಸೆಟ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ. ಇದು ಎರಡು ಬಾರಿ ಒಲಿಂಪಿಕ್ ಪದಕ ವಿಜೇತರ ಮೊದಲ ಸೂಪರ್ 500 ಮತ್ತು ವರ್ಷದ ಫೈನಲ್ ಆಗಿದೆ. ಸಿಂಗಾಪುರ ಓಪನ್‌ನಲ್ಲಿ ಇದು ಅವರ ಚೊಚ್ಚಲ ಫೈನಲ್ ಆಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಲೆಜೆಂಡ್ಸ್ ಲೀಗ್ ಕ್ರಿಕೆಟ್: ಮತ್ತೆ ಮೈದಾನಕ್ಕಿಳಿಯಲಿದ್ದಾರೆ ನಿಮ್ಮ ನೆಚ್ಚಿನ ಈ ಆಟಗಾರ!


ಪಿ.ವಿ.ಸಿಂಧು ಶನಿವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್‌ನ ಸೈನಾ ಕವಾಕಮಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇದಕ್ಕೂ ಮೊದಲು, ಅವರು ಕ್ವಾರ್ಟರ್ ಫೈನಲ್‌ನಲ್ಲಿ ಚೀನದ ಹಾನ್‌ ಯುವೆ ಯನ್ನು 17-21, 21-11, 21-19 ಸೆಟ್‌ಗಳಿಂದ ರೋಚಕ ಜಯಗಳಿಸಿದರು. 


ಇಂದು ಪಂದ್ಯದ ಆರಂಭದಿಂದಲೇ ಎದುರಾಳಿ ವಿರುದ್ಧ ಹಿಡಿತ ಸಾಧಿಸಿದ ಸಿಂಧು, ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಲಂಡನ್ 2012 ರ ಕಂಚಿನ ಪದಕ ವಿಜೇತೆ ಸೈನಾ ಸೆಮಿಫೈನಲ್‌ನಲ್ಲಿ ವಿಫಲರಾದ ನಂತರ ಸಿಂಧು ಸಿಂಗಾಪುರ ಓಪನ್‌ನಲ್ಲಿ ಭಾರತದ ಏಕೈಕ ಭರವಸೆಯಾಗಿದ್ದಾರೆ. 


ಇದೇ ತಿಂಗಳು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೂ ಮುನ್ನ ನಡೆಯುತ್ತಿರುವ ಸಿಂಗಪುರ ಟೂರ್ನಿ ಬ್ಯಾಡ್ಮಿಂಟನ್ ಆಟಗಾರರಿಗೆ ಪೂರ್ವಾಭ್ಯಾಸದ ವೇದಿಕೆಯಾಗಿದೆ. 


ಇದನ್ನೂ ಓದಿ:3ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯದಲ್ಲಿ ಭಾರೀ ಬದಲಾವಣೆ: ಮತ್ತೆ ಕಣಕ್ಕಿಳಿಯಲಿದ್ದಾರೆ ಈ ಸ್ಟಾರ್‌ ಆಟಗಾರ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.