ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್ : ಫೈನಲ್ ಗೆ ತಲುಪಿದ ಪಿ.ವಿ.ಸಿಂಧು
ಭಾರತದ ಪಿವಿ ಸಿಂಧು ಚೀನಾದ ಚೆನ್ ಯು ಫೀ ಅವರನ್ನು 21-7, 21-14ರಿಂದ ಹಿಂದಿಕ್ಕಿ ಸತತ ಮೂರನೇ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸಿದರು.
ನವದೆಹಲಿ: ಭಾರತದ ಪಿವಿ ಸಿಂಧು ಚೀನಾದ ಚೆನ್ ಯು ಫೀ ಅವರನ್ನು 21-7, 21-14ರಿಂದ ಹಿಂದಿಕ್ಕಿ ಸತತ ಮೂರನೇ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸಿದರು.
ಈ ಹಿಂದೆ ಅವರು ಎರಡು ಆವೃತ್ತಿಗಳಲ್ಲಿ ಅಂತಿಮ ಘಟ್ಟಕ್ಕೆ ಬಂದು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದರು. 2018 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪೇನ್‌ನ ಕೆರೊಲಿನಾ ಮರಿನ್ ವಿರುದ್ಧ ಸೋಲನ್ನು ಅನುಭವಿಸಿದರೆ ಅದಕ್ಕೂ ಮೊದಲು ಅವರು ಹಿಂದೆ ಜಪಾನ್‌ನ ನೊಜೋಮಿ ಒಕುಹರಾ ವಿರುದ್ಧ ಸೋತಿದ್ದರು. ಪಿವಿ ಸಿಂಧು ಅವರು ಭಾನುವಾರ ನಡೆಯಲಿರುವ 2019 ರ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಥೈಲ್ಯಾಂಡ್‌ನ ರಾಚನೋಕ್ ಇಂಟಾನಾನ್ ಅಥವಾ ಒಕುಹರಾ ಅವರನ್ನು ಎದುರಿಸಲಿದ್ದಾರೆ.
ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್ ಶಿಪ್ ಫೈನಲ್ ತಲುಪಿದ ನಂತರ ಪ್ರತಿಕ್ರಿಯಿಸಿದ ಪಿ.ವಿ ಸಿಂಧು ' ಸಂತಸವಾಗಿ ಆದರೆ ನನಗೆ ಇನ್ನು ತೃಪ್ತಿ ಇಲ್ಲ. ಇನ್ನು ಒಂದು ಪಂದ್ಯವನ್ನು ನಾನು ಆಡಬೇಕಾಗಿದೆ. ನನಗೆ ಚಿನ್ನದ ಪದವನ್ನು ಗೆಲ್ಲಬೇಕಾಗಿದೆ,ಆದರೆ ಅದು ಅಷ್ಟು ಸುಲಭವಲ್ಲ. ರಚಾನೋಕ್ ಹಾಗೂ ಒಕುಹರಾ ಇಬ್ಬರು ಜೊತೆಯೂ ನಾಡು ಆಡಿದ್ದೇನೆ. ಯಾರಾದರೂ ಪರವಾಗಿಲ್ಲ. ಆದರೆ ಪಂದ್ಯದಲ್ಲಿ ಏನು ಬೇಕಾದರೂ ಆಗಬಹುದು, ಆದ್ದರಿಂದ ನಾನು ಈಗ ಫೋಕಸ್ ಆಗಿರುವುದರ ಜೊತೆಗೆ ನಾಳೆ ಪಂದ್ಯದಲ್ಲಿ ನನ್ನು ಅತ್ಯುತ್ತಮ ಪ್ರದರ್ಶನವನ್ನು ನೀಡಬೇಕಷ್ಟೇ ಎಂದು ಹೇಳಿದರು.