Indian Cricket Team: 2023 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 1-2 ಸೋಲು ಕಂಡ ನಂತರ, ಏಕಾಏಕಿ ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿ ವಿರಾಟ್ ಕೊಹ್ಲಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದರು. ವಿರಾಟ್ ಕೊಹ್ಲಿ ಟ್ವಿಟರ್‌ ನಲ್ಲಿ ಸಂದೇಶ ನೀಡುವ ಮೂಲಕ ಈ ವಿಷಯವನ್ನು ಪ್ರಕಟಿಸಿದ್ದರು. ವಿರಾಟ್ ನಂತರ, ಭಾರತದ ಆಯ್ಕೆದಾರರು ಟೆಸ್ಟ್ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾಗೆ ಹಸ್ತಾಂತರಿಸಿದರು. ನಾಯಕ ಸ್ಥಾನಕ್ಕೆ ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಮತ್ತು ರಿಷಬ್ ಪಂತ್ ಹೆಸರು ಕೂಡ ಚರ್ಚೆಯಾಗಿತ್ತು. ಆದರೆ ತಂಡದ ಹಿರಿಯ ಆಟಗಾರನನ್ನು ನಾಯಕನನ್ನಾಗಿ ಮಾಡಲು ಪರಿಗಣಿಸಲಾಗಿತ್ತು. ಈ ಆಟಗಾರ ಈಗ ಟೆಸ್ಟ್ ನಾಯಕತ್ವದ ಬಗ್ಗೆ ತನ್ನ ನಿಲುವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ಅವರು ಬರಲಿ, ಆಮೇಲೆ ನಾವು ಬರುತ್ತೇವೆ…”: ಟೀಂ ಇಂಡಿಯಾ ವಿರುದ್ಧ ಮತ್ತೆ ಕಿಡಿಕಾರಿದ ಪಾಕ್ ಮಾಜಿ ನಾಯಕ!


ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23 ಫೈನಲ್‌ ನಲ್ಲಿ ಪ್ಲೇಯಿಂಗ್ 11 ರ ಭಾಗವಾಗದ ಆರ್ ಅಶ್ವಿನ್ ಇತ್ತೀಚೆಗೆ ಅನೇಕ ದೊಡ್ಡ ಹೇಳಿಕೆಗಳನ್ನು ನೀಡುತ್ತಿದ್ದಾರೆ. 36 ವರ್ಷದ ಅಶ್ವಿನ್ ಟೆಸ್ಟ್ ನಾಯಕತ್ವದ ಬಗ್ಗೆ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅಶ್ವಿನ್ ಇಂಡಿಯನ್ ಎಕ್ಸ್‌ಪ್ರೆಸ್‌ ಗೆ ನೀಡಿದ ಸಂದರ್ಶನದಲ್ಲಿ, “ನನ್ನ ಬಗ್ಗೆ ಅನೇಕರು ನಾನು ಅತಿಯಾಗಿ ಯೋಚಿಸುವವನು ಎಂದು ಹೇಳಿದ್ದಾರೆ. ಸತತ 15-20 ಪಂದ್ಯಗಳನ್ನು ಆಡುವ ಆಟಗಾರನು ಅತಿಯಾಗಿ ಯೋಚಿಸುವ ಅಗತ್ಯವಿಲ್ಲ. ತನಗೆ ಎರಡು ಪಂದ್ಯಗಳು ಮಾತ್ರ ಸಿಗುತ್ತವೆ ಎಂದು ತಿಳಿದ ವ್ಯಕ್ತಿಯು ಆಘಾತಕ್ಕೊಳಗಾಗುತ್ತಾನೆ ಮತ್ತು ಅತಿಯಾಗಿ ಯೋಚಿಸುತ್ತಾನೆ. ಇದು ನನ್ನ ಪ್ರಯಾಣ. ಯಾರಾದರೂ ಬಂದು ಹೇಳಿದರೆ 15 ಪಂದ್ಯ ಆಡುತ್ತೇನೆ, ಆಟಗಾರರ ಜವಾಬ್ದಾರಿ ನಿಮ್ಮದಾಗಿರುತ್ತದೆ” ಎಂದು ಹೇಳಿದರು.


ಇದನ್ನೂ ಓದಿ: 7 ವರ್ಷದಿಂದ ಒಂದೇ ಒಂದು ಟೆಸ್ಟ್ ಆಡಲು ಸಿಕ್ಕಿಲ್ಲ ಅವಕಾಶ! ಹಂಬಲಿಸುತ್ತಾ ನೋವು ತೋಡಿಕೊಂಡ ಸ್ಟಾರ್ ಕ್ರಿಕೆಟಿಗ


ಓವರ್ ಥಿಂಕರ್ ಎಂಬ ಟ್ಯಾಗ್ ಬಗ್ಗೆ ಕೇಳಿದಾಗ ಆರ್ ಅಶ್ವಿನ್, “ಈ ಟ್ಯಾಗ್ ಅನ್ನು ನನ್ನ ವಿರುದ್ಧ ಬಳಿಸಿದ್ದರು. ನಾಯಕತ್ವದ ವಿಷಯ ನನ್ನ ಬಳಿ ಬಂದಾಗ ಕೆಲವರು ನನ್ನ ವಿರುದ್ಧ ಈ ವಿಷಯಗಳನ್ನು ಬಳಸಿಕೊಂಡರು. ಭಾರತ ತಂಡ ವಿದೇಶಿ ಪ್ರವಾಸಕ್ಕೆ ಹೋದಾಗ ಮೊದಲ ಪಟ್ಟಿಯಲ್ಲಿ ನನ್ನ ಹೆಸರಿರಲಿಲ್ಲ ಎಂದು ಇನ್ನೂ ಕೆಲವರು ಹೇಳಿದ್ದರು” ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ