ನವದೆಹಲಿ: ರವಿಚಂದ್ರನ್ ಅಶ್ವಿನ್ ಅವರು ಭಾನುವಾರದಂದು 350 ಟೆಸ್ಟ್ ವಿಕೆಟ್ ಪಡೆಯುವ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ಮುತ್ತಯ್ಯ ಮುರಳೀಧರನ್ ಅವರ ದಾಖಲೆಯನ್ನು ಸರಿಗಟ್ಟಿದರು.


COMMERCIAL BREAK
SCROLL TO CONTINUE READING

ದಕ್ಷಿಣ ಆಫ್ರಿಕಾ ವಿರುದ್ಧ ವಿಶಾಖ್ ಪಟ್ಟಣದಲ್ಲಿ ನಡೆದ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದ 5 ನೇ ದಿನದಂದು ಈ ಸಾಧನೆ ಮಾಡಿದ್ದಾರೆ. 33 ವರ್ಷದ ಆಫ್ ಸ್ಪಿನ್ನರ್ ಕೊನೆಯ ಬಾರಿಗೆ 2018 ರ ಡಿಸೆಂಬರ್‌ನಲ್ಲಿ ಭಾರತ ಪರ ಟೆಸ್ಟ್ ಪಂದ್ಯವೊಂದನ್ನು ಆಡಿದ್ದರು.ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಅವರು ಸ್ಥಾನ ಪಡೆಯಲು ವಿಫಲರಾಗಿದ್ದರು.



ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್‌ಗಳನ್ನು ಪಡೆದ ನಂತರ, ರವಿಚಂದ್ರನ್ ಅಶ್ವಿನ್ ರಾತ್ರಿ ಕಾವಲುಗಾರ ಥ್ಯೂನಿಸ್ ಡಿ ಬ್ರೂಯಿನ್‌ರನ್ನು ಬೆಳಿಗ್ಗೆ ಔಟ್ ಮಾಡುವ ಮೂಲಕ ತಮ್ಮ 66ನೇ ಟೆಸ್ಟ್‌ ಪಂದ್ಯದಲ್ಲಿ ಈ ಅಪರೂಪದ ಸಾಧನೆಯನ್ನು ಮಾಡಿದರು. 



2010 ರಲ್ಲಿ ನಿವೃತ್ತರಾದ ಶ್ರೀಲಂಕಾದ ಸ್ಪಿನ್ನರ್ ಮುರಳೀಧರನ್ 66 ಟೆಸ್ಟ್ ಪಂದ್ಯಗಳಲ್ಲಿ 350 ವಿಕೆಟ್ ಪಡೆದಿದ್ದರು.ಈಗ ಆರ್ ಅಶ್ವಿನ್ ಅವರ ಈ ಸಾಧನೆಗೆ ಅನುಭವಿ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ಅಭಿನಂದಿಸಿದದ್ದಾರೆ.


ಇದಕ್ಕೂ ಮೊದಲು, ಅವರು ತಮ್ಮ 300 ನೇ ಟೆಸ್ಟ್ ವಿಕೆಟ್ ಪಡೆದಾಗ, ಆಸ್ಟ್ರೇಲಿಯಾದ ಮಾಜಿ ವೇಗಿ ಆಟಗಾರ ಡೆನ್ನಿಸ್ ಲಿಲ್ಲೆ ಅವರ 54 ಟೆಸ್ಟ್ ಪಂದ್ಯದ ದಾಖಲೆಯನ್ನು ಮುರಿದಿದ್ದರು.