Ravichandran Ashwin Records: ಆರ್ ಅಶ್ವಿನ್...  ಟೀಂ ಇಂಡಿಯಾದ ಅದ್ಭುತ ಬೌಲರ್. ಎದುರಾಳಿ ತಂಡಗಳನ್ನು ಎದುರಿಸಲು ಹಗಲು ರಾತ್ರಿ ಯೋಜನೆಗಳನ್ನು ಸಿದ್ಧಪಡಿಸುವ ಸ್ಪಿನ್ನರ್.‌ ಇದೀಗ ಈ ಮಾತಿಗೆ ಸ್ಪಷ್ಟವಾಗಿ ನಿಂತ ಅಶ್ವಿನ್‌ ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಹೊಕ್ಕುಳಿಗೆ ಈ ಎಣ್ಣೆ ಹಚ್ಚಿ: ಕೇವಲ 5 ದಿನಗಳಲ್ಲಿ... ಎಷ್ಟೇ ಬಿಳುಪಾಗಾಗಿದ್ದರೂ ಸಹ ಮರಳಿ ಬಾರದಂತೆ ಕಡುಕಪ್ಪಾಗುತ್ತೆ ಕೂದಲು


ಈ ಸ್ಪಿನ್ ಮಾಸ್ಟರ್ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಬೇಕೆಂದು ಬಯಸಿದ್ದರಂತೆ. ಈ ಬಗ್ಗೆ ಸ್ವತಃ ಅವರೇ ಪಂದ್ಯ ಆರಂಭಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು. ಆದರೆ ಇದೀಗ ಚೆಪಾಕ್‌ ಮೈದಾನದಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.


ಬಾಂಗ್ಲಾದೇಶ ವಿರುದ್ಧ ಅಶ್ವಿನ್ 108 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಟೀಂ ಇಂಡಿಯಾದ ಮಹಾನ್ ಮಾಸ್ಟರ್ʼಗಳ ಬ್ಯಾಟ್ʼಗಳು ಸೈಲೆಂಟ್ ಆಗಿ ಕಾಣಿಸಿಕೊಂಡಾಗ ಅಶ್ವಿನ್ ಅಬ್ಬರಿಸಿ ತಂಡಕ್ಕೆ ಬೆನ್ನೆಲುಬಾಗಿ ನಿಂತರು. ಅಷ್ಟೇ ಅಲ್ಲದೆ, ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಆರನೇ ಶತಕವನ್ನು ಗಳಿಸಿದರು. ದು ಭಾರತದ ನೆಲದಲ್ಲಿ ಅಶ್ವಿನ್ ಅವರ ನಾಲ್ಕನೇ ಶತಕವಾಗಿದೆ. 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ʼಗೆ ಬಂದ ಅಶ್ವಿನ್ ಕೊನೆಯ ಸೆಷನ್ʼನಲ್ಲಿ ಪಂದ್ಯವನ್ನು ತಲೆಕೆಳಗಾಗಿಸಿದರು. ಟೀಂ ಇಂಡಿಯಾ 250 ರನ್ ತಲುಪುವುದು ಕಷ್ಟ ಎನಿಸಿದ್ದಾಗ,  ಅದ್ಭುತ ಪಂದ್ಯವನ್ನಾಡಿದ ಅಶ್ವಿನ್‌ ತಂಡವನ್ನು 339 ಸ್ಕೋರ್ ಗೆ ಕೊಂಡೊಯ್ದರು.


ನ್ಯೂಜಿಲೆಂಡ್‌ʼನ ದಂತಕಥೆ ಡೇನಿಯಲ್ ವೆಟ್ಟೋರಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ವೆಟ್ಟೋರಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಟೆಸ್ಟ್‌ʼನಲ್ಲಿ ಗರಿಷ್ಠ 4 ಶತಕಗಳನ್ನು ಗಳಿಸಿದ್ದರು. ಇದೀಗ ಅಶ್ವಿನ್ ಕೂಡ ಈ ಸ್ಥಾನವನ್ನು ಸಾಧಿಸಿದ್ದಾರೆ. ಮತ್ತೊಂದು ಶತಕ ಸಿಡಿಸಿದರೆ ಈ ದಾಖಲೆ ಮುರಿದು ಅಶ್ವಿನ್ ಒಂದು ಹೆಜ್ಜೆ ಮುಂದೆ ಸಾಗಲಿದ್ದಾರೆ.


ಇದನ್ನೂ ಓದಿ: ಮಹಿಳಾ ಉದ್ಯೋಗಿಗಳಿಗೆ ಸಿಹಿಸುದ್ದಿ...ವೇತನ ಸಹಿತ ಮುಟ್ಟಿನ ರಜೆ ನೀಡಲು ಸರ್ಕಾರ ತೀರ್ಮಾನ! ಒಂದಲ್ಲ, ಎರಡಲ್ಲ... ಇನ್ಮುಂದೆ ಸಿಗಲಿದೆ 6 ದಿನಗಳ ಪೀರಿಯಡ್ಸ್ ರಜೆ!


ಇನ್ನು ಈ ಪಂದ್ಯದಲ್ಲಿ ಅಶ್ವಿನ್ ಗೆ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಬೆಂಬಲ ಕೂಡ ಸಿಕ್ಕಿತ್ತು. ಇನ್ನೊಂದು ತುದಿಯಿಂದ ಜಡೇಜಾ ಅದ್ಭುತ ಬ್ಯಾಟಿಂಗ್ ಮಾಡಿದ್ದರೆ. ದಿನದಾಟದ ಅಂತ್ಯಕ್ಕೆ ಇಬ್ಬರ ನಡುವೆ 195 ರನ್‌ʼಗಳ ಜತೆಯಾಟವಿತ್ತು. ಜಡೇಜಾ 86 ರನ್ ಗಳಿಸಿ ಕ್ರೀಸ್‌ʼನಲ್ಲಿದ್ದರೆ, ಅಶ್ವಿನ್ 102 ರನ್ ಗಳಿಸಿ ಅಜೇಯರಾಗಿದ್ದಾರೆ. ಈ ಜೊತೆಯಾಟ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸಹ ಬ್ರೇಕ್‌ ಮಾಡಿದೆ. ಬಾಂಗ್ಲಾದೇಶದ ವಿರುದ್ಧ 7ನೇ ಕ್ರಮಾಂಕದ ಅತಿ ದೊಡ್ಡ ಟೆಸ್ಟ್ ಜೊತೆಯಾಟ ಎನಿಸಿಕೊಂಡಿದ್ದು, ಈ ಹಿಂದೆ ಸಚಿನ್ ಮತ್ತು ಜಹೀರ್ ಖಾನ್ ನಡುವೆ 133 ರನ್‌ʼಗಳ ಜೊತೆಯಾಟ ಕಂಡುಬಂದಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.