ದಿಢೀರ್ ನಿವೃತ್ತಿಯ ಹಿಂದಿನ ಕಾರಣದ ಬಗ್ಗೆ ಕೊನೆಗೂ ಮೌನ ಮುರಿದ ರವಿಚಂದ್ರನ್ ಅಶಿನ್! ರೀಸನ್ ಕೇಳಿ ಫ್ಯಾನ್ಸ್ ಶಾಕ್!!
R Ashwin: ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ನಡುವೆಯೇ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಟೀಂ ಇಂಡಿಯಾ ಆಟಗಾರ ದಿಡೀರನೇ ನಿವೃತ್ತಿ ಘೋಷಿಸಲು ಕಾರಣ ಏನು ಎಂದು ಇಷ್ಟು ದಿನ ಅಭಿಮಾನಿಗಳು ಚಡಪಡಿಸುತ್ತಿದ್ದರು. ಆದರೆ, ಇದೀಗ ಈ ಪ್ರಶ್ನೆಗಳಿಗೆ ಹಾಗೂ ಅನುಮಾನಗಳಿಗೆ ಸ್ವತಃ ತಾವೇ ಉತ್ತರ ಕೊಡುವ ಮೂಲಕ ಅಶ್ವಿನ್ ಅವರು ಎಲ್ಲಾ ಊಹಾ ಪೋಹಗಳಿಗೆ ತೆರೆ ಎಳೆದಿದ್ದಾರೆ.
R Ashwin: ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ನಡುವೆಯೇ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಟೀಂ ಇಂಡಿಯಾ ಆಟಗಾರ ದಿಡೀರನೇ ನಿವೃತ್ತಿ ಘೋಷಿಸಲು ಕಾರಣ ಏನು ಎಂದು ಇಷ್ಟು ದಿನ ಅಭಿಮಾನಿಗಳು ಚಡಪಡಿಸುತ್ತಿದ್ದರು. ಆದರೆ, ಇದೀಗ ಈ ಪ್ರಶ್ನೆಗಳಿಗೆ ಹಾಗೂ ಅನುಮಾನಗಳಿಗೆ ಸ್ವತಃ ತಾವೇ ಉತ್ತರ ಕೊಡುವ ಮೂಲಕ ಅಶ್ವಿನ್ ಅವರು ಎಲ್ಲಾ ಊಹಾ ಪೋಹಗಳಿಗೆ ತೆರೆ ಎಳೆದಿದ್ದಾರೆ.
ಐದು ಟೆಸ್ಟ್‌ಗಳ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಟೀಮ್ ಇಂಡಿಯಾದೊಂದಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದ ಅಶ್ವಿನ್, ಗಬ್ಬಾದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ನಂತರ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದರು. ಇದೀಗ ಇದಕ್ಕೆ ಕಾರಣ ಏನು ಎಂಬುದನ್ನು ಅಶ್ವಿನ್ ತಿಳಿಸಿದ್ದಾರೆ. ತಮ್ಮ ಸೃಜನಶೀಲತೆಗೆ ಭವಿಷ್ಯವಿಲ್ಲ ಎಂಬ ಭಾವನೆಯಿಂದ ನಿವೃತ್ತಿ ಘೋಷಿಸಿದ್ದೇನೆ ಎಂದು ಹೇಳಿದ್ದು, ಅಶ್ವಿನ್ ಅವರು ಈ ರೀತಿ ಹೇಳಲು ಕಾರಣ ಏನಿರಬಹುದು ಎಂದು ಅಭಿಮಾನಿಗಳು ಚಿಂತಿರರಾಗಿದ್ದಾರೆ.
ಆರ್ ಅಶ್ವಿನ್ ಅವರು ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದಂತೆ, ಅಭಿಮಾನಿಗಳು ನಾನಾ ರೀತಿಯ ಅನುಮಾನಗಳನ್ನು ವ್ಯಕ್ತ ಪಡಸಿದ್ದರು. ಟೀಂ ಇಂಡಿಯಾದಲ್ಲಿ ಅತೃಪ್ತಿಯ ಕಾರಣದಿಂದ ಅಶ್ವಿನ್ ನಿವೃತ್ತಿ ಘೋಷಿಸಿದ್ದಾರೆ ಎಂದು ಹಲವರು ಮಾತನಾಡಿಕೊಂಡರೆ, ಇನ್ನೂ ಕೆಲವರು ಟೀಂ ಇಂಡಿಯಾ ತಂಡದಲ್ಲಿ ಅವರು ಸಾಕಷ್ಟು ಅವಮಾನಗಳನ್ನು ಎದುರಿಸಬೇಕಾಯಿತು ಇದೇ ಕಾರಣದಿಂದಾಗಿ ಅವರು ನಿವೃತ್ತಿ ಘೋಷಿಸುವ ಪರಿಸ್ಥಿತಿ ಎದುರಾಯಿತು ಎಂದು ಅಭಿಮಾನಿಗಳು ಮಾತಾನಡಿಕೊಳ್ಳಲು ಆರಂಭಿಸಿದ್ದರು. ಇದೀಗ ಇದರ ಬೆನ್ನಲ್ಲೆ ಆರ್ ಅಶ್ವಿನ್ ಅವರು ಕ್ಲಾರಿಟಿ ಕೊಟ್ಟಿದ್ದಾರೆ.
ಇನ್ನೂ, ತಮ್ಮ ನಿವೃತ್ತಿಯ ಕುರಿತು ಮುಕ್ತವಾಗಿ ಮಾತನಾಡಿದ ರವಿಚಂದ್ರನ್ ಅಶ್ವಿನ್ "ನಾನು ಟೀಂ ಇಂಡಿಯಾದಲ್ಲಿ ಆಡಿದ ಇಷ್ಟು ವರ್ಷಗಳಲ್ಲಿ ಆಟಕ್ಕಾಗಿ ನನ್ನ ಸರ್ವಸ್ವವನ್ನೆ ನೀಡಿದ್ದೇನೆ. ನಾನು ತಂಡದಲ್ಲಿ ಇಂದಿನವರೆಗೂ ಆಡಿರುವ ಆಟದ ಬಗ್ಗೆ ಗೌರವವಿದೆ. ಜೀವನದಲ್ಲಿ ನನಗೆ ಒಂದು ದಿನವೂ ಕೂಡ ಅಭದ್ರತೆಯ ಭಾವನೆ ಎದುರಾಗಿಲ್ಲ. ಈ ಮುಂಚೆಯೂ ಕೂಡ ನಾನು ನಿವೃತ್ತಿಯ ಬಗ್ಗೆ ಸಾಕಷ್ಟು ಭಾರಿ ಯೋಚನೆ ಮಾಡಿದ್ದೆ, ಸೂಕ್ತ ಸಮಯದಲ್ಲಿ ನನಗೆ ಅನಿಸಿದಾಗ ನಿವೃತ್ತಿ ಘೋಷಿಸಬೇಕು ಎಂದು ನಿರ್ಧರಿಸಿದ್ದೆ. ಆ ದಿನ ಆ ಕ್ಷನ ನನಗೆ ನಿವೃತ್ತಿ ಘೋಷಿಸಬೇಕು ಎಂಬ ಯೋಚನೆ ನನಗೆ ಬಂದಿತ್ತು. ಆದ ಕಾರಣದಿಂದ ನಾನು ನಿವೃತ್ತಿ ಘೋಷಿಸಿದ್ದೇನೆ". ಎಂದು ಆರ್. ಅಶ್ವಿನ್ ತಮ್ಮ ನಿವೃತ್ತಿಯ ಹಿಂದಿನ ಕಾರಣವನ್ನು ತಿಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.