ನವದೆಹಲಿ: ಇಂದೋರ್‌ನಲ್ಲಿ ನಡೆಯಲಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐತಿಹಾಸಿಕ ಸಾಧನೆ ಮಾಡಲಿದ್ದಾರೆ. ಟೀಂ ಇಂಡಿಯಾದ ಅಪಾಯಕಾರಿ ಆಫ್ ಸ್ಪಿನ್ನರ್ ಅಶ್ವಿನ್ ಅವರು ಭಾರತದ ಶ್ರೇಷ್ಠ ಕ್ರಿಕೆಟಿಗ ಕಪಿಲ್ ದೇವ್ ದಾಖಲೆ ಮುರಿಯಲಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯ 3ನೇ ಪಂದ್ಯ ಮಾರ್ಚ್ 1 ರಿಂದ 5ರವರೆಗೆ ಇಂದೋರ್‌ನ ಹೋಲ್ಕರ್ ಮೈದಾನದಲ್ಲಿ ನಡೆಯಲಿದೆ.


COMMERCIAL BREAK
SCROLL TO CONTINUE READING

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯ ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ. ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ. ಇಂದೋರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯ ಗೆದ್ದರೆ ಟೀಂ ಇಂಡಿಯಾ ಕೇವಲ ಟೆಸ್ಟ್ ಸರಣಿ ಕೈವಶಮಾಡಿಕೊಳ್ಳುವುದಿಲ್ಲ. ವಿಶೇಷ ದಾಖಲೆಗೂ ಈ ಪಂದ್ಯ ಸಾಕ್ಷಿಯಾಗಲಿದೆ.   


ಕಪಿಲ್ ದೇವ್ ದಾಖಲೆ ಮುರಿಯಲಿರುವ ಅಶ್ವಿನ್


ಒಂದು ವೇಳೆ ಟೀಂ ಇಂಡಿಯಾದ ಶ್ರೇಷ್ಠ ಆಫ್ ಸ್ಪಿನ್ನರ್ ಆರ್.ಅಶ್ವಿನ್ 3ನೇ ಟೆಸ್ಟ್ ಪಂದ್ಯದಲ್ಲಿ 2 ವಿಕೆಟ್ ಪಡೆದರೆ ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರ 687 ಅಂತಾರಾಷ್ಟ್ರೀಯ ವಿಕೆಟ್‌ಗಳ ದಾಖಲೆಯನ್ನು ಮುರಿಯಲಿದ್ದಾರೆ. ಇದಲ್ಲದೆ ಎಲ್ಲಾ ಸ್ವರೂಪಗಳಲ್ಲಿ ಭಾರತದ ಪರ ಅತಿಹೆಚ್ಚು ವಿಕೆಟ್ ಪಡೆದ 3ನೇ ಬೌಲರ್ ಆಗಲಿದ್ದಾರೆ. ಅನಿಲ್ ಕುಂಬ್ಳೆ ಭಾರತದ ಪರ ಗರಿಷ್ಠ 956 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. 711 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಕಬಳಿಸಿದ ಹರ್ಭಜನ್ ಸಿಂಗ್ 2ನೇ ಸ್ಥಾನದಲ್ಲಿದೆ. ಅಶ್ವಿನ್ ಕೇವಲ 2 ವಿಕೆಟ್ ಪಡೆದರೆ 3ನೇ ಯಶಸ್ವಿ ಬೌಲರ್ ಆಗಲಿದ್ದಾರೆ. ಕಪಿಲ್ ದೇವ್ 687 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದರೆ, ಅಶ್ವಿನ್ 686 ಅಂತಾರಾಷ್ಟ್ರೀಯ ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ.


ಇದನ್ನೂ ಓದಿ: T20 World Cup 2023: ವನಿತಾ ವಿಶ್ವಕಪ್ ಕನಸಿಗೆ ಭಗ್ನ: ಆಸೀಸ್ ವಿರುದ್ಧ ಸೋಲುಂಡ ಟೀಂ ಇಂಡಿಯಾ


ಅತಿಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‍ಗಳು


1. ಅನಿಲ್ ಕುಂಬ್ಳೆ - 956 ವಿಕೆಟ್


2. ಹರ್ಭಜನ್ ಸಿಂಗ್ - 711 ವಿಕೆಟ್


3. ಕಪಿಲ್ ದೇವ್ - 687 ವಿಕೆಟ್


4. ರವಿಚಂದ್ರನ್ ಅಶ್ವಿನ್ - 686 ವಿಕೆಟ್


ಅನಿಲ್ ಕುಂಬ್ಳೆ ದಾಖಲೆ ಮುರಿಯಲಿರುವ ಅಶ್ವಿನ್


ಆರ್.ಅಶ್ವಿನ್ ಇಂದೋರ್‌ನ ಹೋಲ್ಕರ್ ಮೈದಾನದಲ್ಲಿ ನಡೆಯಲಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆಯವರ ದಾಖಲೆಯನ್ನೂ ಮುರಿಯುವ ಸಾಧ‍್ಯತೆ ಇದೆ. ಟೀಂ ಇಂಡಿಯಾದ ಶ್ರೇಷ್ಠ ಆಫ್ ಸ್ಪಿನ್ನರ್ ಅಶ್ವಿನ್ ಈ ಪಂದ್ಯದಲ್ಲಿ 9 ವಿಕೆಟ್ ಪಡೆದರೆ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ 112 ವಿಕೆಟ್ ಪಡೆದ ಭಾರತೀಯ ಬೌಲರ್ ಆಗಲಿದ್ದಾರೆ. ಲೆಜೆಂಡರಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಆಸ್ಟ್ರೇಲಿಯಾ ವಿರುದ್ಧ ಭಾರತದ ಪರ ಅತಿಹೆಚ್ಚು ಟೆಸ್ಟ್ ವಿಕೆಟ್(111 ಟೆಸ್ಟ್ ವಿಕೆಟ್) ಪಡೆದ ಸಾಧನೆ ಮಾಡಿದ್ದಾರೆ.  


ಆಸ್ಟ್ರೇಲಿಯಾ ವಿರುದ್ಧ ಅತಿಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯರು


1. ಅನಿಲ್ ಕುಂಬ್ಳೆ - 111 ಟೆಸ್ಟ್ ವಿಕೆಟ್


2. ರವಿಚಂದ್ರನ್ ಅಶ್ವಿನ್ - 103 ಟೆಸ್ಟ್ ವಿಕೆಟ್


3. ಹರ್ಭಜನ್ ಸಿಂಗ್ - 95 ಟೆಸ್ಟ್ ವಿಕೆಟ್


ಅಶ್ವಿನ್ 5 ವಿಕೆಟ್ ಪಡೆದ್ರೆ ಇತಿಹಾಸ ನಿರ್ಮಿಸಲಿದ್ದಾರೆ


ಆರ್.ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ 5 ವಿಕೆಟ್ ಕಬಳಿಸಿದ್ರೆ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿಯಲಿದ್ದಾರೆ. ಭಾರತದಲ್ಲಿ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 25 ಬಾರಿ 5 ವಿಕೆಟ್ ಪಡೆದಿದ್ದಾರೆ. ಈ ವಿಚಾರದಲ್ಲಿ ಅಶ್ವಿನ್ ಈಗಲೂ ಅನಿಲ್ ಕುಂಬ್ಳೆಗೆ ಸಮಬಲದ ಪೈಪೋಟಿ ನೀಡುತ್ತಿದ್ದಾರೆ. ಅನಿಲ್ ಕುಂಬ್ಳೆ ಒಟ್ಟು 25 ಬಾರಿ 5 ವಿಕೆಟ್ ಪಡೆದಿದ್ದಾರೆ. ಇಂದೋರ್‌ನಲ್ಲಿ ಅಶ್ವಿನ್ ಮತ್ತೊಮ್ಮೆ 5 ವಿಕೆಟ್ ಕಬಳಿಸಿದ್ರೆ ಇತಿಹಾಸ ಸೃಷ್ಟಿಸಲಿದ್ದಾರೆ. ಈ ಮೂಲಕ ಅಶ್ವಿನ್ 26 ಬಾರಿ 5 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನಿಸಿಕೊಳ್ಳಲಿದ್ದಾರೆ. ಅಶ್ವಿನ್ ಇದುವರೆಗೆ 90 ಟೆಸ್ಟ್‌ಗಳ 170 ಇನ್ನಿಂಗ್ಸ್‌ಗಳಲ್ಲಿ 463 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೆ 113 ಏಕದಿನ ಪಂದ್ಯಗಳಲ್ಲಿ 151 ವಿಕೆಟ್ ಪಡೆದರೆ, 65 ಟಿ-20ಗಳಲ್ಲಿ 72 ವಿಕೆಟ್ ಮತ್ತು ಐಪಿಎಲ್‌ನ 184 ಪಂದ್ಯಗಳಲ್ಲಿ 157 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.


ಇದನ್ನೂ ಓದಿ: Team India: ಜಡೇಜಾರಿಂದಾಗಿ ಟೀಂ ಇಂಡಿಯಾದ ಈ ಆಟಗಾರನ ಕೆರಿಯರ್ ಅಂತ್ಯ!?


ಸ್ವದೇಶದಲ್ಲಿ ಅತಿಹೆಚ್ಚು 5 ವಿಕೆಟ್ ಪಡೆದ ಬೌಲರ್‍ಗಳು (ಟೆಸ್ಟ್)


1. ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ) - 45 ಬಾರಿ 5 ವಿಕೆಟ್ ಪಡೆದಿದ್ದಾರೆ


2. ರಂಗನಾ ಹೆರಾತ್ (ಶ್ರೀಲಂಕಾ) - 26 ಬಾರಿ 5 ವಿಕೆಟ್ ಪಡೆದಿದ್ದಾರೆ


3. ಅನಿಲ್ ಕುಂಬ್ಳೆ (ಭಾರತ) - 25 ಬಾರಿ 5 ವಿಕೆಟ್


4. ರವಿಚಂದ್ರನ್ ಅಶ್ವಿನ್ (ಭಾರತ) - 25 ಬಾರಿ 5 ವಿಕೆಟ್


5. ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್) - 24 ಬಾರಿ 5 ವಿಕೆಟ್


 


ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಆಟಗಾರರು


1. ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ) - 800 ಟೆಸ್ಟ್ ವಿಕೆಟ್‌ಗಳು


2. ಶೇನ್ ವಾರ್ನ್ (ಆಸ್ಟ್ರೇಲಿಯಾ) - 708 ಟೆಸ್ಟ್ ವಿಕೆಟ್


3. ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್) - 682 ಟೆಸ್ಟ್ ವಿಕೆಟ್


4. ಅನಿಲ್ ಕುಂಬ್ಳೆ (ಭಾರತ) - 619 ಟೆಸ್ಟ್ ವಿಕೆಟ್‌ಗಳು


5. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್) - 571 ಟೆಸ್ಟ್ ವಿಕೆಟ್


6. ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ) - 563 ಟೆಸ್ಟ್ ವಿಕೆಟ್‌ಗಳು


7. ಕರ್ಟ್ನಿ ವಾಲ್ಷ್ (ವೆಸ್ಟ್ ಇಂಡೀಸ್) - 519 ಟೆಸ್ಟ್ ವಿಕೆಟ್


8. ನಾಥನ್ ಲಿಯಾನ್ (ಆಸ್ಟ್ರೇಲಿಯಾ) - 468 ಟೆಸ್ಟ್ ವಿಕೆಟ್


9. ರವಿಚಂದ್ರನ್ ಅಶ್ವಿನ್ (ಭಾರತ) - 463 ಟೆಸ್ಟ್ ವಿಕೆಟ್


 


ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‍ಗಳು


1. ಅನಿಲ್ ಕುಂಬ್ಳೆ - 619 ಟೆಸ್ಟ್ ವಿಕೆಟ್


2. ರವಿಚಂದ್ರನ್ ಅಶ್ವಿನ್ - 463 ಟೆಸ್ಟ್ ವಿಕೆಟ್


3. ಕಪಿಲ್ ದೇವ್ - 434 ಟೆಸ್ಟ್ ವಿಕೆಟ್


4. ಹರ್ಭಜನ್ ಸಿಂಗ್ - 417 ಟೆಸ್ಟ್ ವಿಕೆಟ್


5. ಇಶಾಂತ್ ಶರ್ಮಾ/ಜಹೀರ್ ಖಾನ್ - 311 ಟೆಸ್ಟ್ ವಿಕೆಟ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.