ಭಾರತದ ಆರ್ ಪ್ರಜ್ಞಾನಂದ ಈಗ ವಿಶ್ವದ 2ನೇ ಅತಿ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ !
ಚೆನ್ನೈ: ಚೆನ್ನೈ ಮೂಲದ ಬಾಲಕ ಆರ್. ಪ್ರಜ್ಞಾನಂದ ಈಗ ವಿಶ್ವದ ಎರಡನೇ ಅತಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎನ್ನುವ ಖ್ಯಾತಿ ಪಡೆದಿದ್ದಾನೆ.
ಇಟಲಿಯ ಆರ್ಟಿಸೆಯ್‌ನಲ್ಲಿ ನಡೆಯುತ್ತಿರುವ ಗ್ರೆಡೈನ್ ಚೆಸ್ ಓಪನ್‌ನಲ್ಲಿ ಪ್ರಜ್ಞಾನಂದ ಇರಾನ್‌ನ ಆರ್ಯನ್‌ನ ಘೋಲಾಮಿ ರನ್ನು ಸೋಲಿಸಿದ್ದಾನೆ.ಅಲ್ಲದೆ ಶನಿವಾರದಂದು ಇಟಾಲಿಯನ್ ಗ್ರ್ಯಾಂಡ್ ಮಾಸ್ಟರ್ ಲ್ಯೂಕಾ ಮೊರೋನಿ ಜೂನಿಯರ್ ವಿರುದ್ಧ 8ನೇ ಸುತ್ತಿನಲ್ಲೇ ಗೆಲುವು ಸಾಧಿಸಿದ್ದಾನೆ ಎನ್ನಲಾಗಿದೆ.
ಆದರೆ, ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಲು ಪ್ರಜ್ಞಾನಂದ 2482 ರೇಟಿಂಗ್ ಗಿಂತ ಅಧಿಕ ಅಂಕವಿರುವ ಆಟಗಾರನ ಜೊತೆ 9ನೇ ಸುತ್ತಿನಲ್ಲಿ ಆಡಬೇಕಿತ್ತು. ಆದರೆ 2514 ಅಂಕಗಳನ್ನು ಒಳಗೊಂಡಿರುವ ನೆದರ್‌ಲೆಂಡ್ಸ್‌ನ ರೋಲ್ಯಾಂಡ್ ವಿರುದ್ಧ ಡ್ರಾನಲ್ಲಿ ಮುಕ್ತಾಯಗೊಂಡ ಕಾರಣ ಪ್ರಜ್ಞಾನಂದ 13 ವರ್ಷಕ್ಕೂ ಮೊದಲೇ ವಿಶ್ವದ ಎರಡನೇ ಅತಿ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಖ್ಯಾತಿಗೆ ಒಳಗಾಗಿದ್ದಾನೆ. ಈಗ ಪ್ರಜ್ನಾನಂದನಿಗೆ ಕೇವಲ 12 ವರ್ಷ 10 ತಿಂಗಳು ಹಾಗೂ 13 ದಿನಗಳಲ್ಲಿ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗುವ ಮೂಲಕ ಭಾರತದ ಪರ ನೂತನ ದಾಖಲೆ ಬರೆದಿದ್ದಾನೆ.
ಪ್ರಜ್ಞಾನಂದ ಅವರ ಸಾಧನೆಗೆ ಟ್ವೀಟ್ ಮಾಡಿರುವ 5 ಬಾರಿ ವಿಶ್ವ ಚಾಂಪಿಯನ್ ಆಗಿರುವ ವಿಶ್ವನಾಥ್ ಆನಂದ್ " ಕ್ಲಬ್ ಗೆ ಸ್ವಾಗತ ಹಾಗೂ ಧನ್ಯವಾದಗಳು ಪ್ರಜ್ನಾನಂದ್ ಸಧ್ಯದಲ್ಲೇ ಚೆನ್ನೈನಲ್ಲಿ ಸಿಗೋಣ " ಎಂದು ಪ್ರತಿಕ್ರಿಯಿಸಿದ್ದಾರೆ.
ಇದಕ್ಕೂ ಮೊದಲು ಉಕ್ರೇನಿನ ಸರ್ಗೆಟ್ ಕರ್ಜಾಕಿನ್ ಅವರು 12 ವರ್ಷ 7 ತಿಂಗಳಲ್ಲಿ ಈ ಸಾಧನೆಯನ್ನು 2002 ರಲ್ಲಿ ಮಾಡಿದ್ದರು.