CSK vs GT, IPL 2024: IPLನ ಏಳನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿವೆ. ಉಭಯ ತಂಡಗಳ ನಡುವೆ ಇದು ಋತುವಿನ ಎರಡನೇ ಪಂದ್ಯವಾಗಿದೆ. ಚೆನ್ನೈ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಸೋಲಿಸಿದೆ. ಇನ್ನೊಂದೆಡೆ ಗುಜರಾತ್ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:ಚೆಪಾಕ್’ನಲ್ಲಿ ಶಿವಂ ದುಬೆ ಸಿಕ್ಸರ್ ಸುರಿಮಳೆ: 22 ಎಸೆತಕ್ಕೆ ಧೋನಿ ಅಪ್ಪಟ ಶಿಷ್ಯನ ಅಬ್ಬರದ ಅರ್ಧಶತಕ


ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದ ರಚಿನ್ ರವೀಂದ್ರ ಮತ್ತು ನಾಯಕ ರುತುರಾಜ್ ಗಾಯಕ್ವಾಡ್ ಉತ್ತಮ ಆರಂಭ ನೀಡಿದರು. ಇವರಿಬ್ಬರೂ ಕೇವಲ 4.3 ಓವರ್‌’ಗಳಲ್ಲಿ ತಂಡವನ್ನು 50 ರನ್‌’ಗಳಿಗೆ ಕೊಂಡೊಯ್ದರು. ಇನ್ನು ರಚಿನ್ ರವೀಂದ್ರ ಕೇವಲ 20 ಎಸೆತಗಳಲ್ಲಿ 46 ರನ್ ಗಳಿಸಿ ಔಟಾದರು. ಈ ಇನ್ನಿಂಗ್ಸ್‌’ನಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌’ಗಳು ಒಳಗೊಂಡಿದ್ದು, ಇವರ ಆಟ ಕಂಡ ಫ್ಯಾನ್ಸ್, ರಚಿನ್ ಅಲ್ಲ ಚಚ್ಚಿನ್ ರವೀಂದ್ರ ಅಂತಾ ಕೊಂಡಾಡುತ್ತಿದ್ದಾರೆ. ಅಂದಹಾಗೆ ರಚಿನ್ ಸ್ಟ್ರೈಕ್ ರೇಟ್ 230 ಆಗಿತ್ತು.


ಗುಜರಾತ್‌ ಪರ ಬೌಲಿಂಗ್ ಮಾಡಲು ಐದನೇ ಓವರ್‌’ನಲ್ಲಿ ಓಮರ್ಜಾಯ್ ಆಗಮಿಸಿದರು. ಇವರ ಮೊದಲ ಎಸೆತದಲ್ಲಿ ನಾಯಕ ಋತುರಾಜ್ ಬೌಂಡರಿ ಬಾರಿಸಿದರು. ನಂತರದ ಎಸೆತದಲ್ಲಿ 1 ರನ್ ಪಡೆದ ಅವರು, ರಚಿನ್’ಗೆ ಸ್ಟ್ರೈಕ್ ನೀಡಿದರು. ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ರಚಿನ್ ಚೆನ್ನೈ’ನ ಸ್ಕೋರ್ 50 ರನ್ ದಾಟಿಸಿದರು. ಅಲ್ಲದೆ ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಇದಾದ ಬಳಿಕ ಆರನೇ ಓವರ್‌ನ ಮೊದಲ ಎಸೆತದಲ್ಲಿ ರಶೀದ್ ಖಾನ್‌ ಎಸೆತಕ್ಕೆ ಬೌಂಡರಿ ಬಾರಿಸಿದರು, ಆದರೆ ನಂತರದ ಎಸೆತದಲ್ಲಿ ವಿಕೆಟ್ ಒಪ್ಪಿಸಿ, ಅರ್ಧಶತಕ ಸಮೀಪದಲ್ಲಿರುವಾಗಲೇ ಪೆವಿಲಿಯನ್’ಗೆ ಮರಳಿದರು.


ಇದನ್ನೂ ಓದಿ: ಪ್ರೀತಿಗಾಗಿ ಮುಸ್ಲಿಂ ಯುವತಿಯನ್ನ 2 ಬಾರಿ ಮದುವೆಯಾದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ! ಧರ್ಮವನ್ನೇ ಮೀರಿದ ಅಪರೂಪದ ಪ್ರೇಮವಿದು!


ಈ ಋತುವಿನಲ್ಲಿ ಇದುವರೆಗೆ ರಚಿನ್ ಅವರ ಪ್ರದರ್ಶನ ಅದ್ಭುತವಾಗಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 15 ಎಸೆತಗಳಲ್ಲಿ 37 ರನ್ ಗಳಿಸಿದ್ದರು. ಆ ಬಳಿಕ ಎರಡನೇ ಪಂದ್ಯದಲ್ಲಿ 20 ಎಸೆತಗಳಲ್ಲಿ 46 ರನ್‌ಗಳ ಇನಿಂಗ್ಸ್‌ ಆಡಿದರು. ಚೆನ್ನೈನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ರಚಿನ್ ಅವರನ್ನು ಕೇವಲ 1.8 ಕೋಟಿ ರೂ.ಗೆ ಖರೀದಿಸಲಾಗಿತ್ತು. ಏಕದಿನ ವಿಶ್ವಕಪ್‌’ನಲ್ಲಿ ಅಮೋಘ ಪ್ರದರ್ಶನ ನೀಡಿದ ಈ ಆಟಗಾರ ಹೆಚ್ಚಿನ ಬೆಲೆಗೆ ಮಾರಾಟವಾಗಿದ್ದರು, ಇದೀಗ ಇವರ ಪ್ರದರ್ಶನ ನೋಡುತ್ತಿದ್ದರೆ, ಪಕ್ಕಾ ಪೈಸಾ ವಸೂಲ್ ಅನ್ನೋದು ಖಂಡಿತ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ