ನವದೆಹಲಿ: ಕ್ರಿಕೆಟ್ ಆಡಲು ಫಿಟ್ನೇಸ್ ತುಂಬಾ ಮುಖ್ಯ. ಫಿಟ್ನೇಸ್ ಇಲ್ಲದೆ ಕ್ರಿಕೆಟ್ ಆಡುವುದು ಸುಲಭದ ಮಾತಲ್ಲ. ದೈತ್ಯ ಕ್ರಿಕೆಟಿಗರಿಗೆ ಮೈದಾನದಲ್ಲಿ ಓಡುವುದು ಒಂದು ಸವಾಲೇ ಸರಿ. ಹೀಗಾಗಿ ಅವರು ನಿಂತಲ್ಲೇ ನಿಂತು ಸಿಕ್ಸರ್, ಬೌಂಡರಿ ಬಾರಿಸುತ್ತಾ ಮನರಂಜಿಸುತ್ತಾರೆ. ಅದೇ ರೀತಿ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ವಿಶೇಷ ಘಟನೆಯೊಂದು ನಡೆದಿದೆ.


COMMERCIAL BREAK
SCROLL TO CONTINUE READING

ವಿಶ್ವದ ಅತ್ಯಂತ ದೈತ್ಯ ದೇಹದ ಕ್ರಿಕಟಿಗರಲ್ಲಿ ಒಬ್ಬರಾದ ರಹಕೀಮ್ ಕಾರ್ನ್‍ವಾಲ್ ಸ್ಫೋಟಕ ಬ್ಯಾಟಿಂಗ್‍ಗೆ ಹೆಸರುವಾಸಿ. ಈ ಆಟಗಾರ ಸಿಂಗಲ್ ಮತ್ತು ಡಬಲ್ ರನ್‍ಗಳಿಗಿಂತ ಬೌಂಡರಿ, ಸಿಕ್ಸರ್ ಬಾರಿಸಲು ಖ್ಯಾತಿಯಾಗಿದ್ದಾರೆ. ಬರೋಬ್ಬರಿ 150 ಕೆಜಿ ತೂಗುವ ಕಾರ್ನ್‍ವಾಲ್‍ಗೆ ರನ್‍ ಗಳಿಸುವಾಗ ಓಡುವುದು ತುಂಬಾ ತ್ರಾಸದಾಯಕ. ದೈತ್ಯ ದೇಹದ ಹೊರತಾಗಿಯೂ ತನ್ನ ಸ್ಫೋಟಕ ಆಟದ ಮೂಲಕ ಗಮನ ಸೆಳೆದ ಕಾರ್ನ್‍ವಾಲ್ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ತನಗೆ ಫಿಟ್ನೇಸ್ ಇಲ್ಲದಿದ್ರೆ ಕ್ರಿಕಟ್ ಆಡುವ ಉತ್ಸಾಹ ಉಳಿಸಿಕೊಂಡಿದ್ದಾರೆ. ಆದರೆ ರನ್ ಕದಿಯಲು ಕ್ರೀಸ್​ನಲ್ಲಿ ಓಡಲು ಹರಸಾಸಹ ಪಡುತ್ತಾರೆ.


ಇದನ್ನೂ ಓದಿ: ರ್ಲೆಂಡ್ ವಿರುದ್ಧದ ಮೊದಲ ಟಿ20ಗೆ ಟೀಂ ಇಂಡಿಯಾ Playing 11 ಪ್ರಕಟ: ಕನ್ನಡಿಗ ಸೇರಿ 4 ಕ್ರಿಕೆಟಿಗರಿಗಿಲ್ಲ ಸ್ಥಾನ!


ಸೇಂಟ್ ಲೂಸಿಯಾ 6 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತ್ತು. ಬೃಹತ್ ಗುರಿ ಬೆನ್ನಟ್ಟಿದ ಬಾರ್ಬಡೋಸ್ ತಂಡಕ್ಕೆ ಮೊದಲ ಎಸೆತದಲ್ಲಿಯೇ ಆಘಾತವಾಗಿತ್ತು. ಕಾರಣ ಆರಂಭಿಕರಾಗಿ ಕಣಕ್ಕಿಳಿದಿದ್ದ ಕಾರ್ನ್‍ವಾಲ್ ಮೊದಲ ಎಸೆತದಲ್ಲಿಯೇ ಸಿಂಗಲ್ ರನ್‍ ಕದಿಯಲು ಹೋಗಿ ವಿಚಿತ್ರ ರನೌಟ್‍ಗೆ ಬಲಿಯಾಗಿದ್ದಾರೆ. ಕಾರ್ನ್‍ವಾಲ್ ಓಡುವ ಬದಲು ಜಾಗಿಂಗ್ ಮಾಡಿದ್ದಾರೆ. ಹೀಗಾಗಿಯೇ ಅವರು ರನೌಟ್‍ ಆಗಿದ್ದಾರೆ ಅಂತಾ ಅವರನ್ನು ಟ್ರೋಲ್ ಮಾಡಲಾಗಿದೆ.


ಇದನ್ನೂ ಓದಿ: ಅನಿಲ್ ಕುಂಬ್ಳೆ ಬಳಿಕ 13 ವರ್ಷ ಖಾಲಿಯಿದ್ದ ಆಫ್ ಸ್ಪಿನ್ನರ್ ಸ್ಥಾನಕ್ಕೆ 23ರ ಹರೆಯದ ಈ ಡೆಡ್ಲಿ ಮ್ಯಾಚ್ ವಿನ್ನರ್ ಫಿಕ್ಸ್!


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.