Rahul Dravid’s Son Anvay Dravid to lead Karnataka U-14 Team: ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಅವರನ್ನು ಕರ್ನಾಟಕ ಅಂಡರ್-14 ತಂಡದ ನಾಯಕರನ್ನಾಗಿ ಮಾಡಲಾಗಿದೆ. ಅನ್ವಯ್ ಅವರು ಕರ್ನಾಟಕ ತಂಡದಲ್ಲಿ ನಾಯಕನಾಗಿ ಜೊತೆಗೆ ವಿಕೆಟ್ ಕೀಪರ್ ಆಗಿ ಕ್ರಿಕೆಟ್ ಆಡುತ್ತಾರೆ. ಅವರ ಸ್ಥಿರ ಉತ್ತಮ ಪ್ರದರ್ಶನಕ್ಕಾಗಿ ಅನ್ವಯ್ ಅನೇಕ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.


COMMERCIAL BREAK
SCROLL TO CONTINUE READING

ಇನ್ನು ರಾಹುಲ್ ದ್ರಾವಿಡ್ ಅವರ ಹಿರಿಯ ಮಗ ಸಮಿತ್ ಕೂಡ ಕರ್ನಾಟಕ ಕ್ರಿಕೆಟ್‌ನಲ್ಲಿ ಉದಯೋನ್ಮುಖ ಕ್ರಿಕೆಟಿಗ. ಸಮಿತ್ ಬ್ಯಾಟಿಂಗ್‌ನಲ್ಲಿ ರಾಹುಲ್ ದ್ರಾವಿಡ್ ಅವರ ಝಲಕ್ ಕಾಣಿಸುತ್ತದೆ ಎಂದು ಅನೇಕ ಜನರು ಹೇಳಿದ್ದುಂಟು. ಇದೀಗ ಅನ್ವಯ್ ಕೂಡ ತಂದೆ-ಅಣ್ಣನ ಹಾದಿ ಹಿಡಿದಿದ್ದು, ಮುಂದೊಂದು ದಿನ ಟೀಂ ಇಂಡಿಯಾ ಕ್ಯಾಪ್ಟನ್ಸಿ ಹಿಡಿಯುವ ಸೂಚನೆಯೂ ಕಾಣಿಸುತ್ತದೆ.  


ಇದನ್ನೂ ಓದಿ: Shubman Gill Net Worth: 23 ವರ್ಷಕ್ಕೆ ಕೋಟ್ಯಾಧಿಪತಿಯಾದ ಶುಭ್ಮನ್: ರನ್ ಜೊತೆ ಏರುತ್ತಲೇ ಇದೆ ಗಿಲ್ ವಾರ್ಷಿಕ ಆದಾಯ!


ಇನ್ನು ಅನ್ವಯ್ ಸೇಮ್ ಟೀಂ ಇಂಡಿಯಾ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಥರಹ ವಿಕೆಟ್ ಕೀಪಿಂಗ್ ಮಾಡುತ್ತಾರಂತೆ. ಕೇವಲ 13 ವರ್ಷದಲ್ಲೇ ಇಷ್ಟೆಲ್ಲಾ ಸಾಧನೆ ಮಾಡುತ್ತಿರುವ ಅನ್ವಯ್ ಮುಂದೆ ಟೀಂ ಇಂಡಿಯಾ ಎಂಟ್ರಿ ಕೊಡುವುದರಲ್ಲಿ ಬೇರೆ ಮಾತಿಲ್ಲ.


ರಾಹುಲ್ ದ್ರಾವಿಡ್ ಒಂದು ಕಾಲದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಪೂರ್ಣ ಸಮಯದ ವಿಕೆಟ್ ಕೀಪರ್ ಕೂಡ ಆಗಿದ್ದರು. ಭಾರತವು ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್‌ಗಾಗಿ ಹೆಣಗಾಡುತ್ತಿರುವಾಗ ರಾಹುಲ್ ಈ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದರು. ಆದರೆ, ಮಹೇಂದ್ರ ಸಿಂಗ್ ಧೋನಿ ಬಂದ ನಂತರ ದ್ರಾವಿಡ್ ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್ ಆಗಿ ಆಡುತ್ತಿರುವುದು ಕಂಡುಬಂದಿತು.


ಹಿರಿಯ ಮಗ ಸಮಿತ್ ದ್ರಾವಿಡ್, ತನ್ನ ತಂದೆ ಐಪಿಎಲ್ ಸಮಯದಲ್ಲಿ ಕ್ರಿಕೆಟ್ ಆಡುವುದನ್ನು ನೋಡುತ್ತಾ ಬೆಳೆದವರು. ಮತ್ತೊಂದೆಡೆ, ಕಿರಿಯ ಮಗ ಅನ್ವಯ್ ಗೆ ತನ್ನ ತಂದೆಯ ಆಟವನ್ನು ವೀಕ್ಷಿಸಲು ಹೆಚ್ಚು ಅವಕಾಶ ಸಿಗಲಿಲ್ಲ. ಆದರೆ, ಇಬ್ಬರೂ ತಂದೆಯ ಕ್ರಿಕೆಟ್ ಕೌಶಲ್ಯ ಮತ್ತು ಬುದ್ಧಿಶಕ್ತಿಯ ಪ್ರಭಾವವು ಸ್ಪಷ್ಟವಾಗಿ ಅನುಸರಿಸಿಕೊಂಡು ಬರುತ್ತಿದ್ದಾರೆ.


ಇನ್ನು ಮನೆಯಲ್ಲಿ ತಂದೆಯಂತೆ ಕ್ರಿಕೆಟ್ ಆಟ ಕಲಿಸುವ ಗುರುಗಳಿದ್ದರೆ ಮಕ್ಕಳು ಈ ಆಟದಲ್ಲಿ ಪ್ರವೀಣರಾಗುವುದು ಖಂಡಿತ. ತಂದೆಯಿಂದಲೇ ಕ್ರಿಕೆಟ್‌ನ ಉತ್ತಮ ಅಂಶಗಳನ್ನು ಕಲಿತ ಅನ್ವಯ್ ದ್ರಾವಿಡ್, ಪ್ರಸ್ತುತ ಕರ್ನಾಟಕದ 14 ವರ್ಷದೊಳಗಿನವರ ತಂಡದ ನಾಯಕತ್ವ ವಹಿಸಿಕೊಳ್ಳುತ್ತಿದ್ದಾರೆ4. ಈಗ ಅವರನ್ನು 14 ವರ್ಷದೊಳಗಿನವರ ಅಂತರ ವಲಯ ಟೂರ್ನಿಯಲ್ಲಿ ಕರ್ನಾಟಕ ತಂಡದ ನಾಯಕರನ್ನಾಗಿ ಮಾಡಿರುವುದು ದೊಡ್ಡ ವಿಷಯ.


ಅನ್ವಯ್ ಅಣ್ಣ ಸಮಿತ್ ಕೂಡ ಕ್ರಿಕೆಟಿಗ. ಸಮಿತ್ 2019/20 ಋತುವಿನಲ್ಲಿ ಅಂಡರ್-14 ಮಟ್ಟದಲ್ಲಿ ಎರಡು ದ್ವಿಶತಕಗಳನ್ನು ಬಾರಿಸಿ ಸಖತ್ ಪ್ರಸಿದ್ಧಿ ಪಡೆದಿದ್ದರು. ಸಮಿತ್ ಈಗಾಗಲೇ U-14 ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅನ್ವಯ್ ಈಗ ಅದೇ ಪಂದ್ಯಾವಳಿಯಲ್ಲಿ ಆಟವಾಡಲಿದ್ದಾರೆ.


ಇದನ್ನೂ ಓದಿ: Shubman Gill : ಸಚಿನ್‌ ಪುತ್ರಿ ಜೊತೆ ಗಿಲ್‌ ಡೇಟಿಂಗ್‌ ಪಕ್ಕಾ...! ಸಾರಾ ʼಶುಭ್‌ʼ ಸಮಾಚಾರ


ಅನ್ವಯ್-ಸಮಿತ್ ಜೋಡಿ ಬ್ಯಾಟಿಂಗ್‌ನಲ್ಲಿ ಅದ್ಭುತ: ಎರಡು ವರ್ಷಗಳ ಹಿಂದೆ 14 ವರ್ಷದೊಳಗಿನವರ ಅಂತರ ವಲಯ ಟೂರ್ನಿಯಲ್ಲಿ ಕರ್ನಾಟಕ ತಂಡದ ನಾಯಕರಾಗಿದ್ದ ಅನ್ವಯ್ ತಮ್ಮ ಹಿರಿಯ ಸಹೋದರ ಸಮಿತ್ ಅವರೊಂದಿಗೆ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಪಂದ್ಯವು BTR ಶೀಲ್ಡ್ ಅಂಡರ್ 14 ಶಾಲೆಗಳ ಪಂದ್ಯಾವಳಿಯಾಗಿದ್ದು, ಇದು ಇಬ್ಬರು ಸಹೋದರರ ನಡುವಿನ ದ್ವಿಶತಕದ ಜೊತೆಯಾಟವನ್ನು ಒಳಗೊಂಡಿತ್ತು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅನ್ವಯ್ 90 ರನ್ ಗಳಿಸಿದ್ದರು. ಇಬ್ಬರೂ ಸಹೋದರರ ಪ್ರದರ್ಶನವು ಅವರ ಶಾಲೆಯು ಸ್ಪರ್ಧೆಯಲ್ಲಿ ಸೆಮಿಫೈನಲ್ ತಲುಪುವಂತೆ ಮಾಡಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.