Rahul Dravid Son Bating Viral Video: ಒಂದು ಕಾಲದಲ್ಲಿ ಪ್ರಸ್ತುತ ಭಾರತ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ 'ದಿ ವಾಲ್' ಎಂದೇ ಕರೆಯಲ್ಪಡುತ್ತಿದ್ದರು.  ಭಾರತ ತಂಡದ ಪ್ರಸಕ್ತ ಮುಖ್ಯ ಕೋಚ್  ರಾಹುಲ್ ದ್ರಾವಿಡ್ ಅವರು ಒಂದು ಕಾಲದಲ್ಲಿ ತನ್ನ ವಿಶಿಷ್ಟ್ಯ ಬ್ಯಾಟಿಂಗ್ ಸ್ಟೈಲ್ ನಿಂದ ಹಲವು ಎದುರಾಳಿ ತಂಡಗಳನ್ನು ಮಂಡಿಯೂರುವಂತೆ ಮಾಡುತ್ತಿದ್ದರು. ಇದೀಗ ಅವರ ಈ ವಿಶಿಷ್ಟ ಸ್ಟೈಲ್ ಅವರ ಮಗ ಸಮಿತ್ ಪಟೇಲ್‌ನಲ್ಲಿ (Samit Patel Viral Video) ನೋಡಲು ಸಿಗುತ್ತಿದೆ. ವಾಸ್ತವದಲ್ಲಿ, ಸಮಿತ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ, ಈ ವಿಡಿಯೋದಲ್ಲಿ  ಅವರು ಅದ್ಭುತವಾದ ಕಟ್ ಶಾಟ್‌ಗಳನ್ನು (Samit Patel Cut Shot Video Goes Viral On Social Media) ಹೊಡೆಯುತ್ತಿರುವುದನ್ನು ನೀವು ನೋಡಬಹುದು. ಎಲ್ಲೋ ಈ ಶಾಟ್ ಎಲ್ಲರಿಗೂ ರಾಹುಲ್ ದ್ರಾವಿಡ್ ಬ್ಯಾಟಿಂಗ್ ನೆನಪನ್ನು ಮರುಕಳಿಸುವಂತಿದೆ.


COMMERCIAL BREAK
SCROLL TO CONTINUE READING

ಕಟ್ ಶಾಟ್ ಗೆ ರಾಹುಲ್ ಖ್ಯಾತಿ ಹೊಂದಿದ್ದರು
ರಾಹುಲ್ ದ್ರಾವಿಡ್ (Rahul Dravid) ತನ್ನ ವಿಶಿಷ್ಟ ಶೈಲಿಯ ಕಟ್ ಶಾಟ್‌ಗಳಿಗೆ ಹೆಸರುವಾಸಿಯಾಗಿದ್ದರು. ಸಮಿತ್ ಪಟೇಲ್ ಕೂಡ ಅದೇ ರೀತಿ ಬೌಲರ್ ನನ್ನು ದಂಡಿಸುತ್ತಿದ್ದಾರೆ. ಸಮಿತ್ (Samit Patel) ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ​​(KSCA) ಗಾಗಿ ಆಡುತ್ತಾರೆ. ಲಂಕಾಶೈರ್ ಕೌಂಟಿ ಕ್ರಿಕೆಟ್ ಕ್ಲಬ್ (LCCC) ವಿರುದ್ಧ, KSCA ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 5 ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡ ನಂತರ ಚಹಾ ವಿರಾಮದವರೆಗೆ 230 ರನ್ ಗಳಿಸಿತ್ತು. ಸಮ್ರಾನ್ ರವಿ 85 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದಾರೆ. ಇದೇ ವೇಳೆ ಸಮಿತ್ ಪಟೇಲ್ 45 ಎಸೆತಗಳಲ್ಲಿ 25 ರನ್ ಗಳಿಸಿ ಇನ್ನಿಂಗ್ಸ್ ಆಡುತ್ತಿದ್ದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಭಾರಿಸಿದ್ದಾರೆ. ಅದರಲ್ಲಿ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ. ಅವರು ಈ ಕಟ್ ಶಾಟ್ ಅನ್ನು ಸೆರೆಹಿಡಿಯಲಾಗಿದೆ.


ಇದನ್ನೂ ಓದಿ-Viral Video: ತಡ ರಾತ್ರಿ ಬೈಕ್ ಮೇಲೆ ಔಟಿಂಗ್ ಮಾಡುತ್ತಿದ್ದ ವ್ಯಕ್ತಿ, ಮುಂದೆ ಆಗಿದ್ದು ಮಾತ್ರ ಎದೆ ಝಲ್ ಎನ್ನಿಸುವಂತಿದೆ!


ಮಗನಿಗೆ ರಾಹುಲ್ ಕೋಚ್ ನೀಡುವುದಿಲ್ಲ
ರಾಹುಲ್ ದ್ರಾವಿಡ್ ತಮ್ಮ ಮಗ ಸಮಿತ್‌ಗೆ ಕೋಚಿಂಗ್ ನೀಡುವುದಿಲ್ಲ. ಜಿಯೋ ಸಿನಿಮಾಗೆ ನೀಡಿದ ಸಂದರ್ಶನದಲ್ಲಿ ಇದನ್ನು ಬನಿರಂಗ ಪಡಿಸಿದ್ದ ರಾಹುಲ್, 'ನನ್ನ ಮಗ ಸಮಿತ್‌ಗೆ ನಾನು ಕೋಚಿಂಗ್ ನೀಡುವುದಿಲ್ಲ. ನನ್ನ ಪ್ರಕಾರ ಪೋಷಕ ಮತ್ತು ತರಬೇತುದಾರನ ಪಾತ್ರವನ್ನು ಏಕಕಾಲದಲ್ಲಿ ನಿರ್ವಹಿಸುವುದು ತುಂಬಾ ಕಷ್ಟ. ನಾನು ತಂದೆಯಾಗಿರುವುದಕ್ಕೆ ಸಂತೋಷವಾಗಿದೆ, ಆದರೆ ಆ ಪಾತ್ರದಲ್ಲಿ ನಾನು ಏನು ಮಾಡುತ್ತಿದ್ದೇನೆ ಎಂಬುದು ನನಗೆ ತಿಳಿದಿಲ್ಲ ಎಂದಿದ್ದರು. 


ಇದನ್ನೂ ಓದಿ-Viral Video: ನೀವೂ ಮನೆಯಲ್ಲಿಯೇ ಎಲೆಕ್ಟ್ರಿಕ್ ಬೈಕ್ ಚಾರ್ಜ್ ಮಾಡುತ್ತೀರಾ? ಹಾಗಾದ್ರೆ ಮೊದಲು ಈ ವಿಡಿಯೋ ನೋಡಿ


ಸಮಿತ್ ಆಲ್ ರೌಂಡರ್
ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್ ಆಗಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು. ಆದರೆ ಅವರ ಮಗ ಸಮಿತ್ ಆಲ್ ರೌಂಡರ್ ಆಟಗಾರರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಲ್ಲದೆ, ಅವರು ವೇಗದ ಬೌಲರ್ ಕೂಡ ಹೌದು. ಸಮಿತ್ ಮಾತ್ರವಲ್ಲ, ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ ಭಾರತೀಯ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಕಳೆದ ವರ್ಷ ಅರ್ಜುನ್ ತೆಂಡೂಲ್ಕರ್ ಮುಂಬೈ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಈ ಋತುವಿನಲ್ಲಿಯೂ ಅರ್ಜುನ್ ಮುಂಬೈ ಪರ ಆಡುವುದನ್ನು ನೀವು ನೋಡಬಹುದು.


ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ