ನವದೆಹಲಿ: ಇಂಗ್ಲೆಂಡ್ ವಿರುದ್ದದ ಐದನೇ ಟೆಸ್ಟ್ ಪಂದ್ಯದಲ್ಲಿ ಪ್ರಾರಂಭದಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಈಗ ಕನ್ನಡಿಗ ಕೆಎಲ್ ರಾಹುಲ್ (142) ಹಾಗೂ ರಿಷಬ್ ಪಂತ್ ಅವರ ಅಜೇಯ (101) ನೆರವಿನಿಂದ ಭಾರತದ ಗೆಲುವಿಗೆ ಬಲ ಬಂದಿದೆ.


COMMERCIAL BREAK
SCROLL TO CONTINUE READING

ಇದೆ ಮೊದಲ ಬಾರಿಗೆ ರಿಶಬ್ ಪಂತ್ ಶತಕವನ್ನು ಗಳಿಸಿದ್ದಾರೆ.ವಿಶೇಷವೆಂದರೆ ರಿಶಬ್ ಅವರು ಶತಕವನ್ನು ಸಿಕ್ಸರ್ ಬಾರಿಸುವ ಮೂಲಕ ಶತಕವನ್ನು ಗಳಿಸಿರುವುದು ನಿಜಕ್ಕೂ ಮಹತ್ವದ್ದಾಗಿದೆ.



ಇಂಗ್ಲೆಂಡ್ ನೀಡಿದ 464 ರನ್ ಗಳ ಸವಾಲನ್ನು ಬೆನ್ನತ್ತಿರುವ ಭಾರತ ಐದು ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿದೆ. ಟೆಸ್ಟ್ ಪಂದ್ಯವನ್ನು ಗೆಲ್ಲಲು ಭಾರತಕ್ಕೆ ಇನ್ನು 166 ರನ್ ಗಳ ಅವಶ್ಯಕತೆ ಇದೆ.


ಈಗಾಗಲೇ ಇಂಗ್ಲೆಂಡ್ ತಂಡವು 3-1 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡು ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ.ಆದರೆ ಈಗ ಭಾರತ ಮಾನವನ್ನು ಉಳಿಸಿಕೊಳ್ಳಲು ಈ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.ಸದ್ಯ ಕ್ರಿಸ್ ನಲ್ಲಿ ಕೆ.ಎಲ್ ರಾಹುಲ್ ಮತ್ತು ರಿಶಬ್ ಪಂತ್ ಬ್ಯಾಟಿಂಗ್ ಮಾಡುತ್ತಿದ್ದಾರೆ.