728 ಎಸೆತ, 17 ಗಂಟೆ ಬ್ಯಾಟಿಂಗ್... ಸುದೀರ್ಘ ಇನ್ನಿಂಗ್ ಆಡಿ ವಿಶ್ವದಾಖಲೆ ಬರೆದ ದಾಂಡಿಗ! ಪಾಕ್ ಕ್ರಿಕೆಟಿಗನ ಆ ದಾಖಲೆ ಮುರಿದೇಬಿಟ್ಟ ಭಾರತದ ಸೂಪರ್ ಬ್ಯಾಟ್ಸ್‌ಮನ್
Rajeev Nair Longest Innings: 1999 ರಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಹಿಮಾಚಲ ಪ್ರದೇಶಕ್ಕಾಗಿ ಆಡುವಾಗ, ರಾಜೀವ್ ನಾಯರ್ 17 ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ 249 ರನ್‌ಗಳಿಗೆ ಕುಸಿದಿತ್ತು.
Cricket Unique Records: ಪಂದ್ಯವೊಂದರಲ್ಲಿ ಗಂಟೆಗಟ್ಟಲೆ ಬ್ಯಾಟಿಂಗ್ ಮಾಡುವ ಮೂಲಕ ಸಾಕಷ್ಟು ರನ್ ಗಳಿಸಿದ ಕೆಲವೇ ಕೆಲವು ಬಲಿಷ್ಠ ಬ್ಯಾಟ್ಸ್‌ಮನ್‌ಗಳು ಕ್ರಿಕೆಟ್ ಜಗತ್ತಿನಲ್ಲಿ ಕಾಣಸಿಗುತ್ತಾರೆ. ಈ ಪಟ್ಟಿಯಲ್ಲಿ ಭಾರತದ ದಿಗ್ಗಜರ ಹೆಸರುಗಳಿವೆ. ಅಂದಹಾಗೆ, ನಾವಿಂದು ಈ ವರದಿಯಲ್ಲಿ, ಪಂದ್ಯವೊಂದರಲ್ಲಿ ಹೆಚ್ಚು ಸಮಯ ಕ್ರೀಸ್‌ನಲ್ಲಿ ಉಳಿದು ವಿಶ್ವ ದಾಖಲೆಯನ್ನು ಹೊಂದಿರುವ ಬ್ಯಾಟ್ಸ್‌ಮನ್ ಒಬ್ಬರ ಬಗ್ಗೆ ಮಾಹಿತಿ ನೀಡಲಿದ್ದೇವೆ.
17 ಗಂಟೆಗಳವರೆಗೆ ಬ್ಯಾಟಿಂಗ್ (1015 ನಿಮಿಷಗಳು)
1999 ರಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಹಿಮಾಚಲ ಪ್ರದೇಶಕ್ಕಾಗಿ ಆಡುವಾಗ, ರಾಜೀವ್ ನಾಯರ್ 17 ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ 249 ರನ್‌ಗಳಿಗೆ ಕುಸಿದಿತ್ತು. ಇದಕ್ಕೆ ಉತ್ತರವಾಗಿ ಹಿಮಾಚಲ ತಂಡ ರಾಜೀವ್ ನಾಯರ್ ಅವರ ಇನ್ನಿಂಗ್ಸ್ ಆಧಾರದ ಮೇಲೆ 567 ರನ್ ಗಳಿಸಿತ್ತು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ರಾಜೀವ್ ನಾಯರ್ 1015 ನಿಮಿಷಗಳ ಕಾಲ (ಸುಮಾರು 17 ಗಂಟೆಗಳ) ಕ್ರೀಸ್‌ನಲ್ಲಿ ಉಳಿದರು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಯಾವುದೇ ಬ್ಯಾಟ್ಸ್‌ಮನ್ ನಿಮಿಷಗಳ ಲೆಕ್ಕದಲ್ಲಿ ಆಡಿದ ಸುದೀರ್ಘ ಇನ್ನಿಂಗ್ಸ್‌ನ ವಿಶ್ವದಾಖಲೆಯಾಗಿದೆ.
ರಾಜೀವ್ ನಾಯರ್ ಅವರು ಪಾಕಿಸ್ತಾನದ ದಿಗ್ಗಜ ಬ್ಯಾಟ್ಸ್‌ಮನ್ ಹನೀಫ್ ಮೊಹಮ್ಮದ್ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಲ್ಲದೆ, ನಿಮಿಷಗಳ ಲೆಕ್ಕದಲ್ಲಿ ಅತಿದೊಡ್ಡ ಪ್ರಥಮ ದರ್ಜೆ ಇನ್ನಿಂಗ್ಸ್‌ಗಳನ್ನು ಆಡಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1957-58ರಲ್ಲಿ ನಡೆದ ಪಂದ್ಯದಲ್ಲಿ ಹನೀಫ್ ಮೊಹಮ್ಮದ್ 970 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ್ದರು. ಈ ಪಂದ್ಯ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದಿತ್ತು.
ಇದನ್ನೂ ಓದಿ: ನೋ ಎಂಟ್ರಿ.. ಈ ಮೂರು ಸ್ಟಾರ್ ಆಟಗಾರನ್ನು ಕೈ ಬಿಟ್ಟ ಟೀಂ ಇಂಡಿಯಾ! ದಿಗ್ಗಜರ ನಿವೃತ್ತಿ ಖಚಿತವೇ?!
ಜಮ್ಮು ಮತ್ತು ಕಾಶ್ಮೀರದ ಬೌಲರ್‌ಗಳನ್ನು ಧೈರ್ಯದಿಂದ ಎದುರಿಸಿದ ರಾಜೀವ್ ನಾಯರ್ 271 ರನ್ ಗಳಿಸಿದ್ದರು.ತಂಡದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಅವರು 728 ಎಸೆತಗಳನ್ನು ಎದುರಿಸಿದ್ದರು. ಇದರಲ್ಲಿ 26 ಬೌಂಡರಿ ಮತ್ತು 1 ಸಿಕ್ಸರ್ ಕೂಡ ಸೇರಿವೆ. ಈ ಇನ್ನಿಂಗ್ಸ್ ಆಧಾರದಲ್ಲಿ ಹಿಮಾಚಲ ತಂಡದ ಸ್ಕೋರ್ 500 ದಾಟಿತು. ಆದರೆ, ಪಂದ್ಯವು ಯಾವುದೇ ಫಲಿತಾಂಶವನ್ನು ನೀಡಲಿಲ್ಲ ಬದಲಾಗಿ ಡ್ರಾದಲ್ಲಿ ಕೊನೆಗೊಂಡಿತು. ಈ ಪಂದ್ಯದಲ್ಲಿ ಶತಕ ಗಳಿಸಿದ ಏಕೈಕ ಆಟಗಾರ ಅಂದರೆ ಅದು ರಾಜೀವ್ ನಾಯರ್.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ