ರಾಜಕೋಟ್: ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯವು ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ.ಆದ್ದರಿಂದ ಈ ಪಂದ್ಯದಲ್ಲಿ ಯಾವೆಲ್ಲಾ ದಾಖಲೆಗಳು ನಿರ್ಮಾಣವಾಗಿವೆ ಎನ್ನುವುದನ್ನು ತಿಳಿಯೋಣ ಬನ್ನಿ.


COMMERCIAL BREAK
SCROLL TO CONTINUE READING

1) ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಯಶಸ್ವಿ ಜೈಸ್ವಾಲ್ ಅವರ ಅಜೇಯ 214 ರನ್ ಗಳಲ್ಲಿ ಬರೋಬ್ಬರಿ ಸಿಕ್ಸರ್‌ಗಳ ಸಂಖ್ಯೆ 12,  ಆ ಮೂಲಕ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ವಾಸಿಂ ಅಕ್ರಂ ಸರಿಗಟ್ಟಿದರು.ಜೈಸ್ವಾಲ್ ತನ್ನ ಮೊದಲ ಮೂರು ಟೆಸ್ಟ್ ಶತಕಗಳನ್ನು 150 ಪ್ಲಸ್ ಸ್ಕೋರ್‌ಗಳಾಗಿ ಪರಿವರ್ತಿಸಿದ (171, 209 ಮತ್ತು 214*) ಮೊದಲ ಭಾರತೀಯ ಮತ್ತು ಒಟ್ಟಾರೆ ಏಳನೇ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು


2) ರಾಜ್‌ಕೋಟ್ ಟೆಸ್ಟ್‌ನ ಆರಂಭದಲ್ಲಿ ಜೈಸ್ವಾಲ್ (22 ವರ್ಷ 49 ದಿನಗಳು) ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ದ್ವಿಶತಕಗಳನ್ನು ಗಳಿಸಿದ ಮೂರನೇ ಕಿರಿಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ವಿನೋದ್ ಕಾಂಬ್ಳಿ ಅವರು 21 ವರ್ಷ 54 ದಿನ ವಯಸ್ಸಿನವರಾಗಿದ್ದಾಗ ಇದನ್ನು ಮಾಡಿದರು, ಆದರೆ ಡಾನ್ ಬ್ರಾಡ್ಮನ್ 21 ವರ್ಷ 318 ದಿನ ವಯಸ್ಸಿನವರಾಗಿದ್ದರು.


3) ಇಂಗ್ಲೆಂಡ್ ವಿರುದ್ಧ ಜೈಸ್ವಾಲ್ ಸೇರಿದಂತೆ ಸತತ ಟೆಸ್ಟ್‌ಗಳಲ್ಲಿ ಮೂವರು ಭಾರತೀಯ ಆಟಗಾರರು ದ್ವಿಶತಕವನ್ನು ಸಿಡಿಸಿದ್ದಾರೆ.ಕಾಂಬ್ಳಿ 1993 ರಲ್ಲಿ ಇಂಗ್ಲೆಂಡ್ ಮತ್ತು ಜಿಂಬಾಬ್ವೆ ವಿರುದ್ಧ ಸತತ ಟೆಸ್ಟ್‌ಗಳಲ್ಲಿ ದ್ವಿಶತಕಗಳನ್ನು ಗಳಿಸಿದರೆ, ವಿರಾಟ್ ಕೊಹ್ಲಿ 2017 ರಲ್ಲಿ ಶ್ರೀಲಂಕಾ ವಿರುದ್ಧ ಈ ದಾಖಲೆ ನಿರ್ಮಿಸಿದರು.


4) ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಬಾರಿಸಿದ ಸಿಕ್ಸರ್‌ಗಳ ಸಂಖ್ಯೆ 28, ಆ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ದಾಖಲೆಯಾಗಿದೆ.ಆ ಮೂಲಕ 2019 ರ ವೈಜಾಗ್ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 27 ಸಿಕ್ಸರ್‌ಗಳ ದಾಖಲೆಯನ್ನು ಮುರಿಯಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.