ನವದೆಹಲಿ: ಕೆಲವು ತಿಂಗಳ ಹಿಂದೆ ಕರ್ನಾಟಕದ  ಕೃಷ್ಣಪ್ಪಾ ಗೌತಮ್ ಭಾರತದ ಎ ಗುಂಪಿನ ತಂಡದಲ್ಲಿ ಶಿಸ್ತುಕ್ರಮದ ಆಧಾರದ ಮೇಲೆ ತಂಡದಿಂದ ಕೈಬಿಡಲಾಗಿತ್ತು .ಕಾರಣ ಕೆ.ಪಿಎಲ್ ಪಂದ್ಯವನ್ನು ಬಿಟ್ಟು ದುಲೀಪ ಟ್ರೋಪಿ ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಈ ಕ್ರಮವನ್ನು ಕೈಗೊಳ್ಳಲಾಗಿತ್ತು,ಆದರೆ ಈಗ ರೈಲ್ವೇಸ್ ವಿರುದ್ದದ  ರಣಜಿ ಪಂದ್ಯದಲ್ಲಿ ಕರ್ನಾಟಕವನ್ನು ಕ್ವಾರ್ಟರ್ ಫೈನಲ್ ಗೆ ಕೊಂಡ್ಯೂಯಲು ಯಶಸ್ವಿಯಾಗಿದ್ದಾರೆ. ಆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 


COMMERCIAL BREAK
SCROLL TO CONTINUE READING

ದೆಹಲಿಯ ಕರ್ನಾಲಿ ಸಿಂಗ್ ಸ್ಟೇಡಿಯಂನಲ್ಲಿ ರೈಲ್ವೇಸ್ ತಂಡದ ವಿರುದ್ಡ ನಡೆದ ನಿರ್ಣಾಯಕ ಪಂದ್ಯದಲ್ಲಿ ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ 434 ರನ್ ಗಳಿಗೆ ಆಲೌಟ್ ಆಗಿತ್ತು,ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಗೆ ಇಳಿದ ರೈಲ್ವೇಸ್ 333 ರನ್ ಗಳನ್ನೂ ಮಾತ್ರ ಗಳಿಸಲು ಶಕ್ತವಾಯಿತು. ಕೃಷ್ಣಪ್ಪಾ ಗೌತಮ್ ತಮ್ಮ ಪರಿಣಾಮಕಾರಿ ಬೌಲಿಂಗ ದಾಳಿಯಿಂದಾಗಿ ಮೊದಲ ಇನ್ನಿಂಗ್ ನಲ್ಲಿ  27 ಓವರ್ ಗಳಲ್ಲಿ 70 ರನ್ ಮೂಲಕ  3 ವಿಕೆಟ್ ಪಡೆದಿದ್ದರು, ನಂತರ ಎರಡನೆಯ ಇನ್ನಿಂಗ್ಸ್ ನಲ್ಲಿ  26 ಓವರ್ ಗಳಿಗೆ 7 ವಿಕೆಟ್ಗಳನ್ನೂ ಕಬಳಿಸಿ ಪಂದ್ಯವು ಕರ್ನಾಟಕದತ್ತ ತಿರುಗುವಂತೆ ನೋಡಿಕೊಂಡಿದ್ದರು, ಇನ್ನು ಮುಂದೆ ಕ್ವಾರ್ಟರ್ ಫೈನಲ್ ನಲ್ಲಿ ಬಲಿಷ್ಠ ಮುಂಬೈ ತಂಡವನ್ನು ಎದುರಿಸಲಿರುವ ಕರ್ನಾಟಕವು ಗೌತಮ್ ರ ಪ್ರದರ್ಶನದಿಂದಾಗಿ ಅದು ಈ ಬಾರಿ ರಣಜಿ ಗೆಲ್ಲುವ ತಂಡದ ಹುಮ್ಮಸ್ಸು ದ್ವಿಗುಣಗೊಂಡಿದೆ ಎಂದು ಹೇಳಬಹುದು.