Arjun Tendulkar: ಬುಧವಾರ ನಡೆದ ಚೊಚ್ಚಲ ರಣಜಿ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಶತಕ ಸಿಡಿಸಿದ್ದರು. ಅವರ ಸಹ ಆಟಗಾರ ಸುಯಶ್ ಪ್ರಭು ದೇಸಾಯಿ ಕೂಡ ಶತಕ ಬಾರಿಸಿದರೂ ಅರ್ಜುನ್ ಶತಕ ಸಿಡಿಸಿದ್ದು ವಿಶೇಷವಾಗಿತ್ತು. ತಂದೆ ಸಚಿನ್ ಕೂಡ 34 ವರ್ಷಗಳ ಹಿಂದೆ 1988ರಲ್ಲಿ ರಣಜಿಗೆ ಪದಾರ್ಪಣೆ ಮಾಡಿದ್ದರು. ಅವರು ಶತಕವನ್ನ ಗಳಿಸಿದ್ದು ಕೂಡ ಇದೇ ತಿಂಗಳು ಅಂದ್ರೆ  ಡಿಸೆಂಬರ್ ತಿಂಗಳಿನಲ್ಲಿಯೇ. ಈಗ 34ವರ್ಷಗಳ ಬಳಿಕ ಕ್ರಿಕೆಟ್ ದೇವರು ಸಚಿನ್ ಸಾಧನೆಯನ್ನು ಅವರ ಮಗ ಅರ್ಜುನ್ ತೆಂಡೂಲ್ಕರ್ ಪುನರಾವರ್ತಿಸಿದ್ದಾನೆ.


COMMERCIAL BREAK
SCROLL TO CONTINUE READING

207 ಎಸೆತಗಳಲ್ಲಿ 120 ರನ್ ಗಳಿಸಿದ ಅರ್ಜುನ್ ತೆಂಡೂಲ್ಕರ್:
ಅರ್ಜುನ್ ತೆಂಡೂಲ್ಕರ್ ರಾಜಸ್ಥಾನ ವಿರುದ್ಧ ರಣಜಿಗೆ ಪದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್‌ಗಳೊಂದಿಗೆ 207 ಎಸೆತಗಳಲ್ಲಿ  120 ರನ್ ಗಳಿಸಿದರು.  ಅರ್ಜುನ್ ಸುಯಶ್ ಪ್ರಭು ಅವರೊಂದಿಗೆ  221 ರನ್ ಗಳ ಜೊತೆಯಾಟ ನಡೆಸಿದರು. ಎರಡು ಬಾರಿಯ ರಣಜಿ ಚಾಂಪಿಯನ್ ರಾಜಸ್ಥಾನ ವಿರುದ್ಧ ಅವರು ಈ ಸಾಧನೆ ಮಾಡಿದ್ದಾರೆ. ಆ ತಂಡ ಕಮಲೇಶ್ ನಾಗರಕೋಟಿ ಮತ್ತು ಮಹಿಪಾಲ್ ಲೊಮ್ರೋರ್ ಅವರಂತಹ ಸ್ಟಾರ್ ಬೌಲರ್‌ಗಳನ್ನು ಹೊಂದಿದೆ. 


ಇದನ್ನೂ ಓದಿ- PKL 2022 Playoffs: ಗೂಳಿಗಳ ಆರ್ಭಟ.. ದಬಾಂಗ್ ಡೆಲ್ಲಿ ಮಣಿಸಿ ಬುಲ್ಸ್ ಸೆಮಿಫೈನಲ್ ಪ್ರವೇಶ


1988 ರ ಡಿಸೆಂಬರ್ 11 ರಂದು ಗುಜರಾತ್ ವಿರುದ್ಧ ಮುಂಬೈಗಾಗಿ ಸಚಿನ್ ತನ್ನ ಮೊದಲ ರಣಜಿ ಪಂದ್ಯವನ್ನು ಆಡಿದರು. ಆಗ ಅವರಿಗೆ 15 ವರ್ಷ. ಅವರು 100 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ನಂತರ ಸಚಿನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಭಾರತದಿಂದ ಶತಕ ಗಳಿಸಿದ ಅತ್ಯಂತ ಕಿರಿಯ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಸಚಿನ್ ನಂತರ ದುಲೀಪ್ ಟ್ರೋಫಿ ಮತ್ತು ಇರಾನಿ ಟ್ರೋಫಿಯಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲಿ ಶತಕ ಗಳಿಸಿದ್ದರು.


ಅರ್ಜುನ್ ತೆಂಡೂಲ್ಕರ್ ಆಲ್ ರೌಂಡರ್. ಅವರು ವೇಗದ ಬೌಲಿಂಗ್‌ನೊಂದಿಗೆ ಬ್ಯಾಟ್ ಮಾಡುತ್ತಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದಾರೆ. ಇದುವರೆಗೆ ಆಡಿರುವ 9 ಟಿ20 ಪಂದ್ಯಗಳಲ್ಲಿ 12 ವಿಕೆಟ್ಗಳನ್ನು ಪಡೆದಿದ್ದಾರೆ. 10 ರನ್‌ಗಳಿಗೆ 4 ವಿಕೆಟ್‌ ಕಬಳಿಸಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 7 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದಾರೆ. 32ಕ್ಕೆ 2 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.


ಇದನ್ನೂ ಓದಿ- R Ashwin Record: ಐತಿಹಾಸಿಕ ದಾಖಲೆ ಮುರಿಯುವ ಸನಿಹದಲ್ಲಿ ಅಶ್ವಿನ್: ಅನಿಲ್ ಕುಂಬ್ಳೆ ರೆಕಾರ್ಡ್ ಬ್ರೇಕ್ ಮಾಡ್ತಾರಾ!


ರಾಜಸ್ಥಾನ ತಂಡದ ಅರ್ಜುನ್ ತೆಂಡೂಲ್ಕರ್ ಯಾವುದೇ ಸಣ್ಣ ತಂಡದ ವಿರುದ್ಧ ಈ ಸಾಧನೆ ಮಾಡಿಲ್ಲ. ರಾಜಸ್ಥಾನ ತಂಡ ಎರಡು ಬಾರಿ ರಣಜಿ ಚಾಂಪಿಯನ್ ಆಗಿದೆ. ಅದೇ ಸಮಯದಲ್ಲಿ ಕಮಲೇಶ್ ನಾಗರಕೋಟಿ ಮಹಿಪಾಲ್ ಲೋಮ್ರೋರ್ ಅವರಂತಹ ಐಪಿಎಲ್ ಸ್ಟಾರ್ ಬೌಲರ್‌ಗಳು ತಂಡದಲ್ಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.