Ranji Trophy: ಕರ್ನಾಟಕದ ಮೊದಲ ರಣಜಿ ಟ್ರೋಫಿ ಗೆಲುವಿಗೆ ಸುವರ್ಣ ಸಂಭ್ರಮ..!
ಅದು 1958 ರ ಸಮಯ, ಬಲಿಷ್ಠ ಮುಂಬೈ ತಂಡ 1958ರಿಂದ 1973ರವರೆಗೆ ನಿರಂತರವಾಗಿ 15 ಬಾರಿ ರಣಜಿ ಟ್ರೋಫಿ ಗೆದ್ದು ಮೆರೆದಾದಿದ್ದಂತಹ ಕಾಲ,ಮುಂಬೈ ತಂಡವನ್ನು ಹೆಡಮುರಿ ಕಟ್ಟಿ ಹಾಕಲು ಬಂದವರೆಲ್ಲಾ ನಡು ಮುರಿದುಕೊಂಡು ಬಿದ್ದಿದ್ದ ಕಾಲಾವಧಿ ಅದಾಗಿತ್ತು... ಅಲ್ಲಿಯವರೆಗಿನ ಒಟ್ಟು 39 ರಣಜಿ ಟೂರ್ನಿಗಳಲ್ಲಿ 25 ಬಾರಿ ಫೈನಲ್ ತಲುಪಿ 24 ಬಾರಿ ಕಪ್ ಗೆದ್ದು ಬೀಗಿದ್ದ ಮುಂಬೈ ತಂಡವನ್ನು ಆ ಕಾಲ ಘಟ್ಟದಲ್ಲಿ ಸೋಲಿಸುವುದು ಅಸಾಧ್ಯದ ಮಾತಾಗಿತ್ತು.
ಅಂತಹ ಕಾಲದಲ್ಲಿಯೇ ದೈತ್ಯ ಮುಂಬೈಕರಗಳ ತಂಡವನ್ನು ಕಟ್ಟಿಹಾಕಿದ್ದು ಬೇರೆ ಯಾವುದೇ ತಂಡವಲ್ಲ, ಹೌದು, ಅದು ಸ್ಪಿನ್ ಮಾಂತ್ರಿಕ ಎರಪಳ್ಳಿ ಪ್ರಸನ್ನ ನೇತೃತ್ವದ ಕರ್ನಾಟಕ ತಂಡ, ಅದು 1973-74, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ವಿರುದ್ಧ ಕರ್ನಾಟಕ ತಂಡದ ಸೆಮಿಫೈನಲ್ ಪಂದ್ಯ ನಡೆಯುತ್ತಿತ್ತು, ಮುಂಬೈ ತಂಡದಲ್ಲಿ ಘಟಾನುಘಟಿಗಳಾದ ಸುನಿಲ್ ಗವಾಸ್ಕರ್, ಅಜೀತ್ ವಾಡೆಕರ್ ಏಕನಾಥ್ ಸೋಳ್ಕರ್ ರಂತಹ ಖ್ಯಾತನಾಮ ಆಟಗಾರರು ಇದ್ದಂತ ತಂಡವನ್ನು ಕರ್ನಾಟಕ ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.
ಲೋಕಸಭಾ ಚುನಾವಣೆ ಫಿಕ್ಸ್ ಆಗ್ತಿದ್ದಂತೆ BJP ಅಲರ್ಟ್
ಜೈಪುರದಲ್ಲಿ ರಾಜಸ್ಥಾನ ವಿರುದ್ಧ ಫೈನಲ್ ಪಂದ್ಯ.ಎ.ವಿ ಜಯಪ್ರಕಾಶ್ (ಎರಡೂ ಇನ್ನಿಂಗ್ಸ್’ಗಳಲ್ಲಿ ಅರ್ಧಶತಕ), ವಿ.ಎಸ್ ವಿಜಯ್ ಕುಮಾರ್ (ಪ್ರಥಮ ಇನ್ನಿಂಗ್ಸ್”ನಲ್ಲಿ 66 ರನ್), ಬಿ.ವಿಜಯಕೃಷ್ಣ (ಪ್ರಥಮ ಇನ್ನಿಂಗ್ಸ್”ನಲ್ಲಿ 71 ರನ್), ಸೈಯದ್ ಕಿರ್ಮಾನಿ (2ನೇ ಇನ್ನಿಂಗ್ಸ್’ನಲ್ಲಿ 60 ರನ್), ವಿಜಯ್ ಕುಮಾರ್ (5 ವಿಕೆಟ್), ಪ್ರಸನ್ನ (9 ವಿಕೆಟ್), ಚಂದ್ರಶೇಖರ್ (5 ವಿಕೆಟ್) ಅವರ ಅಮೋಘ ಆಟ ಕರ್ನಾಟಕಕ್ಕೆ ಮೊದಲ ರಣಜಿ ಟ್ರೋಫಿ ಗೆದ್ದು ಕೊಟ್ಟಿತ್ತು. ಫೈನಲ್’ನಲ್ಲಿ 185 ಭರ್ಜರಿ ಗೆಲುವನ್ನು ಸಾಧಿಸಿತ್ತು ರಣಜಿ ಫೈನಲ್ ಮ್ಯಾಚ್ ನೋಡಲು ಜೈಪುರಕ್ಕೆ ಹೋಗಿದ್ದ ಕನ್ನಡಿಗರ ಒಂದು ಗುಂಪು, ಪಂದ್ಯದ ಅಷ್ಟೂ ದಿನ ರಾತ್ರಿಯಿಡೀ ಮೈದಾನದಲ್ಲೇ ಮಲಗಿ ಪಿಚ್’ಗೆ ಕಾವಲು ಕೂತಿತ್ತು. ಕರ್ನಾಟಕದ ಗೆಲುವನ್ನು ತಡೆಯಲು ರಾತ್ರೋ ರಾತ್ರಿ ಪಿಚ್ ಸ್ವರೂಪವನ್ನು ಬದಲಿಸುವ ಅನುಮಾನ ಇದ್ದದ್ದರಿಂದ ಪಿಚ್’ನ ರಕ್ಷಣೆಗೆ ನಿಂತಿತ್ತು ಆ ತಂಡ.
ಜೈಪುರದಲ್ಲಿ ರಣಜಿ ಟ್ರೋಫಿ ಗೆದ್ದು ರೈಲಿನಲ್ಲಿ ಬೆಂಗಳೂರಿಗೆ ಬಂದಿಳಿದಿದ್ದ ಕರ್ನಾಟಕ ತಂಡದ ಆಟಗಾರರು ಮನೆಗೆ ಹೋಗಿದ್ದು ಮೂರು ದಿನಗಳ ನಂತರ. ಬೆಂಗಳೂರು, ಮೈಸೂರಿನಲ್ಲಿ ಸನ್ಮಾನ ಸಮಾರಂಭಗಳನ್ನು ಏರ್ಪಡಿಸಲಾಗಿತ್ತು. ರಣಜಿ ಟ್ರೋಫಿ ಆರಂಭವಾಗಿ 40 ವರ್ಷಗಳ ನಂತರ ಕರ್ನಾಟಕ ಮೊದಲ ಬಾರಿ ಕಪ್ ಗೆದ್ದಿದ್ದ ಕಾರಣ, ಕನ್ನಡಿಗರಿಗೆ ವಿಶ್ವಕಪ್ ಗೆದ್ದಷ್ಟೇ ಸಂಭ್ರಮದ ಕ್ಷಣ ಅದಾಗಿತ್ತು.
ಇದನ್ನೂ ಓದಿ: ಗ್ರಾಹಕರ ಹಣ ಜಮಾ ಮಾಡದೇ 26 ಲಕ್ಷ ಗುಳುಂ ಮಾಡಿದ ಬ್ಯಾಂಕ್ ಕ್ಯಾಷಿಯರ್!
ಅಲ್ಲಿಂದ ಇಲ್ಲಿಯ ತನಕ ಕರ್ನಾಟಕ ಒಟ್ಟು 8 ಬಾರಿ ರಣಜಿ ಟ್ರೋಫಿ ಗೆದ್ದಿದೆ. ಆದರೆ first is always best. ಕರ್ನಾಟಕದ ಮೊದಲ ರಣಜಿ ಟ್ರೋಫಿ ವಿಕ್ರಮಕ್ಕೆ 50 ವರ್ಷಗಳು ತುಂಬಿರುವ ಹೊತ್ತಲ್ಲಿ, ಆ ತಂಡದಲ್ಲಿದ್ದವರನ್ನು ಕರೆಸಿ ಗೌರವಿಸುವ ಕೆಲಸವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಾಡಿದರೆ, ಅದು ನಿಜವಾಗಿಯೂ ಕ್ರಿಕೆಟ್’ಗೆ ಸಲ್ಲಿಸುವ ಸ್ಮರಣೀಯ ಗೌರವ ಗೌರವ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ