22ರ ಹರೆಯದ ಈ ಕ್ರಿಕೆಟಿಗನಿಗೆ ಮರುಜೀವ ಕೊಟ್ಟ BCCI: ಕೊಹ್ಲಿ ಗೆಳೆಯನಿಗೆ Team Indiaದಲ್ಲಿ ಸಿಕ್ಕೇಬಿಡ್ತು ಸ್ಥಾನ!
Indian Cricket Team for Asian Games 2023: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ 19 ನೇ ಏಷ್ಯನ್ ಗೇಮ್ಸ್ (ಏಷ್ಯನ್ ಗೇಮ್ಸ್-2023) ಗಾಗಿ ಭಾರತೀಯ ಪುರುಷರ ಕ್ರಿಕೆಟ್ ತಂಡವನ್ನು ಶುಕ್ರವಾರ ತಡರಾತ್ರಿ ಪ್ರಕಟಿಸಿದೆ.
Indian Cricket Team for Asian Games 2023: ಭಾರತ ತಂಡವು ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಆರಂಭಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಡೊಮಿನಿಕಾದ ವಿಂಡ್ಸರ್ ಪಾರ್ಕ್‌ನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 141 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಇದೇ ವೇಳೆ ಒಬ್ಬ ಆಟಗಾರನ ವೃತ್ತಿ ಬದುಕಿಗೆ ಬಿಸಿಸಿಐ ಮರುಜೀವ ನೀಡಿದೆ.
ಇದನ್ನೂ ಓದಿ: “ಒಂದು ವರ್ಷದಿಂದ ಭಾರತ ತಂಡ ಈ ಆಟಗಾರನನ್ನು ಮಿಸ್ ಮಾಡಿಕೊಳ್ಳುತ್ತಿದೆ”: Team India ಕೋಚ್ ಹೇಳಿಕೆ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂಬರುವ 19 ನೇ ಏಷ್ಯನ್ ಗೇಮ್ಸ್ (ಏಷ್ಯನ್ ಗೇಮ್ಸ್-2023) ಗಾಗಿ ಭಾರತೀಯ ಪುರುಷರ ಕ್ರಿಕೆಟ್ ತಂಡವನ್ನು ಶುಕ್ರವಾರ ತಡರಾತ್ರಿ ಪ್ರಕಟಿಸಿದೆ. ಈ ಪಂದ್ಯಗಳಿಗೆ 15 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದ್ದು, 26ರ ಹರೆಯದ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ನಾಯಕತ್ವ ವಹಿಸಲಿದ್ದಾರೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್, ಕೆಕೆಆರ್‌ನ 'ಸಿಕ್ಸರ್ ಕಿಂಗ್' ರಿಂಕು ಸಿಂಗ್, ವಿಕೆಟ್‌ಕೀಪರ್ ಜಿತೇಶ್ ಶರ್ಮಾ, ಪ್ರಭ್‌ಸಿಮ್ರಾನ್ ಸಿಂಗ್ ಮತ್ತು ವೇಗಿ ಅರ್ಷ್‌ದೀಪ್ ಸಿಂಗ್ ಸೇರಿದಂತೆ ತಂಡವು ಹೆಚ್ಚಾಗಿ ಯುವ ಆಟಗಾರರನ್ನು ಹೊಂದಿದೆ.
ಇದೇ ವೇಳೆ ಅವಕಾಶಕ್ಕಾಗಿ ಹಾತೊರೆಯುತ್ತಿದ್ದ ಆಟಗಾರನೊಬ್ಬನ ವೃತ್ತಿ ಬದುಕಿಗೆ ಬಿಸಿಸಿಐ ‘ಲೈಫ್ ಲೈನ್’ ನೀಡಿದೆ. ಈ ಆಟಗಾರ ಬೇರೆ ಯಾರೂ ಅಲ್ಲ 22 ವರ್ಷದ ಸ್ಪಿನ್ನರ್ ರವಿ ಬಿಷ್ಣೋಯ್. ರವಿ ಬಿಷ್ಣೋಯ್ ಅವರನ್ನು ಏಷ್ಯನ್ ಗೇಮ್ಸ್ ಗೆ ಆಯ್ಕೆಯಾಗಿರುವ ತಂಡದ ಭಾಗವಾಗಿ ಮಾಡಲಾಗಿದೆ. ರವಿ ಈಗ ರಿತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಆಡಲಿದ್ದಾರೆ. ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಘಟನೆಗಳು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 8 ರವರೆಗೆ ನಡೆಯಲಿವೆ.
ಏಷ್ಯಾಕಪ್’ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯಗಳು:
ರಾಜಸ್ಥಾನದ ಜೋಧ್‌ಪುರದಲ್ಲಿ ಜನಿಸಿದ ರವಿ ಬಿಷ್ಣೋಯ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಒಂದು ODI ಮತ್ತು 10 T20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಕಳೆದ 9 ತಿಂಗಳಿಂದ ಟೀಂ ಇಂಡಿಯಾದಿಂದ ಹೊರಗಿದ್ದಾರೆ. ಕಳೆದ ವರ್ಷ ಆಡಿದ ಏಷ್ಯಾಕಪ್’ಗೆ ಅವರನ್ನು ತಂಡದಲ್ಲಿ ಸೇರಿಸಲಾಗಿತ್ತು. ನಂತರ ಅವರಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಲಕ್ನೋದಲ್ಲಿ ODI ನೀಡಲಾಯಿತು. ಅದರಲ್ಲಿ ಅವರು ಕೇವಲ ಒಂದು ವಿಕೆಟ್ ಪಡೆದರು. ಅಂದಿನಿಂದ ಅವರು ಟೀಂ ಇಂಡಿಯಾದಿಂದ ಹೊರಗಿದ್ದಾರೆ.
ಏಷ್ಯನ್ ಕ್ರೀಡಾಕೂಟಕ್ಕಾಗಿ ಭಾರತೀಯ ಪುರುಷರ ತಂಡ:
ರಿತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ ಮತ್ತು ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್).
ಇದನ್ನೂ ಓದಿ: ಮೊದಲ ಟೆಸ್ಟ್’ನಲ್ಲಿ ಗೆದ್ದರೂ Team India ಪ್ಲೇಯಿಂಗ್ 11ನಲ್ಲಿ ಆಗಲಿದೆ ಬದಲಾವಣೆ: ಇವರು ಇನ್… ಅವರು ಔಟ್!
ಸ್ಟ್ಯಾಂಡ್‌ಬೈ ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ ಮತ್ತು ಸಾಯಿ ಸುದರ್ಶನ್.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ