T20 worldcup 2024 : 9ನೇ ಆವೃತ್ತಿಯ ಪುರುಷರ T20 ವಿಶ್ವಕಪ್‌ 2024 ಜೂನ್‌ 4 ರಿಂದ ಆರಂಭಗೊಳ್ಳಿದೆ. ಇದನ್ನು ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಗಳು ಆಯೋಜಿಸಲು ಮುಂದಾಗಿವೆ. ಇದೇ ಮೊದಲ ಭಾರಿಗೆ  ಕೆನಡಾ, ಉಗಾಂಡಾ ಮತ್ತು ಯುನೈಟೆಡ್ ಸ್ಟೇಟ್ಸ್ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿವೆ. ಇನ್ನೂ ಟಿ20 ವಿಶ್ವಕಪ್‌ಗೆ ಆರು ತಿಂಗಳುಗಳು ಬಾಕಿಯಿರುವಾಗಲೇ ಭಾರತ ತಂಡದಲ್ಲಿ ಅನೇಕ ಚರ್ಚೆಗಳು ನಡೆಯುತ್ತಿವೆ. ತಂಡದಲ್ಲಿ ಯಾವೆಲ್ಲ ಆಟಗಾರರಿಗೆ ಅವಕಾಶ ಸಿಗುತ್ತದೆ ಎಂಬುದರ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ದೊರಕಿಲ್ಲ.
 
2024 ರ T20  ವಿಶ್ವಕಪ್‌ನಲ್ಲಿ ವಿರಾಟ್ ಮತ್ತು ರೋಹಿತ್ ಅವರ ಸಂಭವನೀಯತೆಯ  ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ.  ದಕ್ಷಿಣ ಆಫ್ರಿಕಾ ವಿರುದ್ದದ T20I ಮತ್ತು ODI ಎರಡರಿಂದಲು ಈ ಜೋಡಿ ಹೊರಗುಳಿದಿತ್ತು. ಇದು ಕೊಹ್ಲಿ ಮತ್ತು ರೋಹಿತ್  ಇನ್ನು ಮುಂದೆ ಭಾರತಕ್ಕಾಗಿ T20 ಆಡುವುದನ್ನು ಕೈ ಬಿಡುತ್ತಾರಾ ಎಂಬ ಊಹಾಪೋಹಗಳಿಗೆ ಕಾರಣವಾಯಿತು.


COMMERCIAL BREAK
SCROLL TO CONTINUE READING

ಇದನ್ನು ಓದಿ-ಟೀಮ್‌ ಇಂಡಿಯಾಕೆ ಇನ್ನೋದು ಬಿಗ್‌ ಶಾಕ್‌ ! ಟೆಸ್ಟ್‌ ಸರಣಿಯಿಂದ ಹೊರಗುಳಿದ "ಇಶಾನ್‌ ಕಿಶನ್‌"


ಇದೇ ತಿಂಗಳಿನಲ್ಲಿ ಬಿಸಿಸಿಐ ಒಂದು T20 ಪಟ್ಟಿಯನ್ನು ಹೊರಡಿಸಿದ್ದು, ಅದರಲ್ಲಿ ಭಾರತದ ತಂಡದ T20 ಕ್ರಿಕೆಟ್‌ನ ಕ್ರಮಸಂಖ್ಯೆ 3ರಲ್ಲಿ ಅಗ್ರೆಸ್ಸೀವ್‌ ಪ್ಲೇಯರ್‌ ಯಾರು ಎಂಬುದರ ಬಗ್ಗೆ ಮಾಹಿತಿ ನೀಡಿತ್ತು. ಆ ನಿಟ್ಟಿನಲ್ಲಿ ಇಶಾನ್‌ ಕಿಶನ್‌ ಹೆಸರು ಮೊದಲ ಸ್ಥಾನದಲ್ಲಿ ಕಂಡುಬಂದಿದೆ. ಆದರಿಂದ T20 ವಿಶ್ವಕಪ್‌ನಲ್ಲಿ  ಬ್ಯಾಟಿಂಗ್‌ ಕ್ರಮಸಂಖ್ಯೆ ಮೂರಕ್ಕೆ ಕಿಶನ್‌ ಅವರಿಗೆ ಮೊದಲ ಆಧ್ಯತೆ ನೀಡಲಾಗಿದೆ. ವಿರಾಟ್‌ ಅವರ ಸ್ಥಾನಕ್ಕೆ ಕಿಶನ್‌ ಹೆಸರು ಕೇಳಿಬಂದಿರುವುದು ಕ್ರಿಕೇಟ್‌ ಅಭಿಮಾನಿಗಳಲ್ಲಿ ವಿರಾಟ್‌ T20 ವಿಶ್ವಕಪ್‌ ಆಡುತ್ತಾರ ಎಂಬ ಶಂಕೆಯನ್ನು ಸೃಷ್ಠಿಸಿದೆ.


ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ರವಿ ಬೋಪಾರ  ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ಧಾರೆ. ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಉಪಸ್ಥಿತಿಯ ಅಗತ್ಯವಿದೆ ಎಂದಿದ್ಧಾರೆ. ವಿರಾಟ್  ಮತ್ತು ರೋಹಿತ್ ಇಬ್ಬರು ಭಾರತಕ್ಕೆ  T20 ವಿಶ್ವಕಪ್ ಗೆಲ್ಲುವ  ಭರವಸೆಯಾಗಿದ್ದಾರೆ ಎಂದರು.


ಇದನ್ನು ಓದಿ-ಐಸಿಸಿಯ ಆರ್ಮ್‌ಬ್ಯಾಂಡ್ ಚಾರ್ಜ್‌ಗೆ ಸಿಧ್ದಾ! " ಉಸ್ಮಾನ್ ಖವಾಜಾ" ಹೇಳಿಕೆ


 ರವಿ ಬೋಪಾರಾ ಇಂಗ್ಲೆಂಡ್‌ ತಂಡವನ್ನು ಪ್ರತಿನಿಧಿಸಿ 2007 ರಿಂದ  2015 ತನಕ ಅನೇಕ ಕ್ರಿಕೇಟ್‌ ಪಂದ್ಯಗಳನ್ನು ಆಡಿದ್ದಾರೆ.  ಇಂಗ್ಲೆಂಡ್‌ ತಂಡದ ಪರ  13 ಟೆಸ್ಟ್, 120 ಏಕದಿನ ಮತ್ತು 38 ಟಿ20 ಪಂದ್ಯಗಳನ್ನು ಆಡಿದ್ಧಾರೆ. ಟಿ20 ವಿಶ್ವಕಪ್‌ ಗೆಲ್ಲುವುದು ಇಂಗ್ಲೆಂಡ್‌ ತಂಡ ಮುಂದಿನ ಗುರಿಯಾಗಿದೆ ಎಂದರು. ಅಷ್ಟೆ ಅಲ್ಲದೇ  ಭಾರತ ತಂಡದ ಬಗ್ಗೆ ಮಾತನಾಡಿದ ಅವರು  ಟಿ20 ವಿಶ್ವಕಪ್ ಅಭಿಯಾನಕ್ಕಾಗಿ ಭಾರತಕ್ಕೆ  ಇಬ್ಬರು ಹಿರಿಯ ಆಟಗಾರರಾದ ವಿರಾಟ್ ಮತ್ತು ರೋಹಿತ್ ಅಗತ್ಯವಿದೆ ಎಂದು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.