R Ashwin New Record in IND vs WI Test : ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ನಡೆಯಿತು. ವೆಸ್ಟ್ ಇಂಡೀಸ್ ನಾಯಕ ಕ್ರೇಗ್ ಬ್ರಾಥ್‌ವೈಟ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಪಂದ್ಯದ ಮೊದಲ ಎರಡು ಅವಧಿಗಳಲ್ಲಿ, ಟೀಂ ಇಂಡಿಯಾದ ಸಕ್ರಿಯ ಆಟಗಾರರಲ್ಲಿ ಅತ್ಯಂತ ಯಶಸ್ವಿ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ಐಸಿಸಿ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೆ ಏಕೆ ಅರ್ಹರು ಎಂಬುದನ್ನು ತೋರಿಸಿದರು. ಮೊದಲ ಪಂದ್ಯದಲ್ಲಿ ದಾಖಲೆ ಬರೆಯುವ ಮೂಲಕ  ಎಲ್ಲಾ ಭಾರತೀಯ ಅನುಭವಿ ಬೌಲರ್‌ಗಳನ್ನು ಹಿಂದಿಕ್ಕಿದರು. 


COMMERCIAL BREAK
SCROLL TO CONTINUE READING

ಡೊಮಿನಿಕಾ ಟೆಸ್ಟ್‌ನಲ್ಲಿ ಅಶ್ವಿನ್ ಅಬ್ಬರ


ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಮೊದಲೆರಡು ಅವಧಿಗಳಲ್ಲಿ ಅದ್ಭುತ ಬೌಲಿಂಗ್ ಮಾಡಿ ಎದುರಾಳಿ ಬ್ಯಾಟ್ಸ್ ಮನ್ ಗಳನ್ನು ಕಾಡಿದ್ದರು. ಮೊದಲೆರಡು ಅವಧಿಗಳಲ್ಲಿ ಇಬ್ಬರೂ ಆರಂಭಿಕರನ್ನು ಒಳಗೊಂಡ ವಿಂಡೀಸ್ ತಂಡದ ನಾಲ್ವರು ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು. ಅಷ್ಟೇ ಅಲ್ಲ, ಭಾರತದ ಎಲ್ಲಾ ದಿಗ್ಗಜ ಬೌಲರ್‌ಗಳನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೆ ಬಂದಿದ್ದಾರೆ.


ಇದನ್ನೂ ಓದಿ: ವಿಂಡೀಸ್ ಸರಣಿಗೂ ಮುನ್ನ ಟೆಸ್ಟ್ ಕ್ರಿಕೆಟ್’ಗೆ ದಿಢೀರ್ ನಿವೃತ್ತಿ ಘೋಷಿಸಿದ ಕ್ರಿಕೆಟ್ ದಿಗ್ಗಜ!


ಭಾರತೀಯ ಕ್ರಿಕೆಟ್‌ನಲ್ಲಿ ಅಶ್ವಿನ್ ಸೂಪರ್ ದಾಖಲೆ


ಅಶ್ವಿನ್ ಇನ್ನಿಂಗ್ಸ್‌ನಲ್ಲಿ ಮೂರನೇ ವಿಕೆಟ್ ಪಡೆದ ತಕ್ಷಣ, ಅವರು ಭಾರತಕ್ಕಾಗಿ ಎಲ್ಲಾ ಸ್ವರೂಪಗಳಲ್ಲಿ 700 ವಿಕೆಟ್‌ಗಳನ್ನು ಪಡೆದ ಬೌಲರ್ ಆದರು. ಅಶ್ವಿನ್ 700 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಮೂರನೇ ಬೌಲರ್ ಆಗಿದ್ದಾರೆ. ಕಡಿಮೆ ಎಸೆತಗಳಲ್ಲಿ 700 ವಿಕೆಟ್‌ಗಳನ್ನು ತಲುಪಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 


ಅಶ್ವಿನ್ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಅವರು 701 ವಿಕೆಟ್‌ಗಳನ್ನು ಪಡೆದಿದ್ದಾರೆ. ಸ್ವಲ್ಪ ಸಮಯದಲ್ಲೇ ಅವರು ಈ ಪಟ್ಟಿಯಲ್ಲಿ ಹರ್ಭಜನ್ ಸಿಂಗ್ ಅವರನ್ನು ಹಿಂದಕ್ಕಿ ಎರಡನೇ ಸ್ಥಾನಕ್ಕೇರುತ್ತಾರೆ. ಅವರು ಕೇವಲ 7 ವಿಕೆಟ್‌ಗಳ ಅಂತರದಲ್ಲಿದ್ದಾರೆ. ಭಾರತದ ಪರ ಆಡುವಾಗ ಹರ್ಭಜನ್ ಸಿಂಗ್ 707 ವಿಕೆಟ್ ಪಡೆದರೆ, ಅನಿಲ್ ಕುಂಬ್ಳೆ 953 ವಿಕೆಟ್‌ಗಳನ್ನು ಕಬಳಿಸಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.


ಇದನ್ನೂ ಓದಿ: ತ್ರಿಶತಕ ಸಿಡಿಸಿದರೂ… ಬೊಜ್ಜು ಹೆಚ್ಚಾಗಿದೆ ಅಂತಾ ಈ ಆಟಗಾರನ ಭವಿಷ್ಯವನ್ನೇ ಕಿವುಚಿದ ಆಯ್ಕೆ ಸಮಿತಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.