ಅದೊಂದು ತಪ್ಪಿಗೆ ವಿಚಿತ್ರ ರೀತಿಯಲ್ಲಿ ರನ್ ಔಟ್ ಆದ ರವೀಂದ್ರ ಜಡೇಜಾ! ಈ ಬಗ್ಗೆ ICC ನಿಯಮಗಳು ಹೇಳೋದೇನು?
CSK vs RR Ravindra Jadeja out obstructing the field: ಜಡೇಜಾ ಅವೇಶ್ ಖಾನ್ ಎಸೆದ ಚೆಂಡನ್ನು ಥರ್ಡ್ ಮ್ಯಾನ್ ಕಡೆಗೆ ಆಡಿದರು. ಈ ಸಂದರ್ಭದಲ್ಲಿ ರುತುರಾಜ್ ಗಾಯಕ್ವಾಡ್ ಜತೆಗಿನ ಹೊಂದಾಣಿಕೆ ಸರಿಯಾಗಿ ನಡೆಯದೆ ಜಡೇಜಾ ಸಂಕಷ್ಟಕ್ಕೆ ಸಿಲುಕಿದರು. ಎರಡನೇ ರನ್ ತೆಗೆದುಕೊಳ್ಳಲು ಬಯಸಿದ್ದ ಜಡೇಜಾರನ್ನು ರುತುರಾಜ್ ಹಿಂದಕ್ಕೆ ಕಳುಹಿಸಿದರು.
Ravindra Jadeja out obstructing the field: IPL 2024ರ 61 ನೇ ಪಂದ್ಯದಲ್ಲಿ ವಿಚಿತ್ರ ಘಟನೆ ಕಂಡುಬಂದಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಅನುಭವಿ ಬ್ಯಾಟ್ಸ್ ಮನ್ ರವೀಂದ್ರ ಜಡೇಜಾ ವಿಚಿತ್ರ ರೀತಿಯಲ್ಲಿ ರನ್ ಔಟ್ ಆಗಿದ್ದಾರೆ.
ಇದನ್ನೂ ಓದಿ: ಬೆವರಿಳಿಯುವಂತೆ ವ್ಯಾಯಾಮ ಮಾಡಬೇಕಿಲ್ಲ: ಈ ಪುಟ್ಟ ಬೀಜವನ್ನು ಹಾಲಲ್ಲಿ ಬೆರೆಸಿ ಕುಡಿದರೆ ಸಾಕು ಹೀರೋಯಿನ್ ಥರ ಸ್ಲಿಮ್ ಆಗಬಹುದು
ಜಡೇಜಾ ಅವೇಶ್ ಖಾನ್ ಎಸೆದ ಚೆಂಡನ್ನು ಥರ್ಡ್ ಮ್ಯಾನ್ ಕಡೆಗೆ ಆಡಿದರು. ಈ ಸಂದರ್ಭದಲ್ಲಿ ರುತುರಾಜ್ ಗಾಯಕ್ವಾಡ್ ಜತೆಗಿನ ಹೊಂದಾಣಿಕೆ ಸರಿಯಾಗಿ ನಡೆಯದೆ ಜಡೇಜಾ ಸಂಕಷ್ಟಕ್ಕೆ ಸಿಲುಕಿದರು. ಎರಡನೇ ರನ್ ತೆಗೆದುಕೊಳ್ಳಲು ಬಯಸಿದ್ದ ಜಡೇಜಾರನ್ನು ರುತುರಾಜ್ ಹಿಂದಕ್ಕೆ ಕಳುಹಿಸಿದರು. ಈ ಸಂದರ್ಭದಲ್ಲಿ ಕ್ರೀಸ್’ನ ಮಧ್ಯಕ್ಕೆ ಜಡ್ಡು ಬಂದಿದ್ದರು. ಅದೇ ಸಂದರ್ಭದಲ್ಲಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ನಾನ್ ಸ್ಟ್ರೈಕರ್ ಎಂಡ್’ನಲ್ಲಿ ಥ್ರೋ ಮಾಡಿದರು. ಚೆಂಡು ವಿಕೆಟ್ ಬದಲು ಜಡೇಜಾ ಬೆನ್ನಿಗೆ ಬಡಿಯಿತು. ಜಡೇಜಾ ಸ್ಟಂಪ್’ಗೆ ಅಡ್ಡವಾಗಿ ಓಡುತ್ತಿದ್ದ ಕಾರಣ ಬಾಲ್ ಅವರಿಗೆ ಬಡಿದಿತ್ತು. ಅಂಪೈರ್’ಗಳು ಈ ನಡೆಯನ್ನು ತಪ್ಪು ಎಂದು ಹೇಳಿ ರನ್ ಔಟ್ ಘೋಷಿಸಿದ್ದಾರೆ. ಈ ಮೂಲಕ ಜಡೇಜಾ ‘obstructing the field’ ನಿಯಮದಡಿ ರನೌಟ್ ಆದರು.
ಇದನ್ನೂ ಓದಿ: RR ಬ್ಯಾಟರ್ ರಿಯಾನ್ ಪರಾಗ್ ತಂದೆ ಯಾರು ಗೊತ್ತಾ? ಇವರೂ ಸಹ ಸ್ಟಾರ್ ಕ್ರಿಕೆಟರ್, ಧೋನಿಯ ನೆಚ್ಚಿನ ಆಟಗಾರ
‘Obstructing the field’ ಎಂದರೇನು?
ಕ್ರಿಕೆಟ್‌ನ ನಿಯಮಗಳನ್ನು ರೂಪಿಸುವ ಸಂಸ್ಥೆಯಾದ ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್, ಮೈದಾನಕ್ಕೆ ಅಡ್ಡಿಪಡಿಸದಂತೆ ಹೊರಬರಲು ನಿಯಮಗಳನ್ನು ಮಾಡಿದೆ. ಇದನ್ನು ಲಾರ್ಡ್ಸ್ ಕ್ರಿಕೆಟ್ ವೆಬ್‌ಸೈಟ್’ನಲ್ಲಿ ನಿಯಮ 37 ರಲ್ಲಿ ಉಲ್ಲೇಖಿಸಲಾಗಿದೆ. ನಿಯಮ 37.1.1 ರ ಪ್ರಕಾರ, “ಯಾವುದೇ ಬ್ಯಾಟ್ಸ್‌ಮನ್ ಚೆಂಡನ್ನು ಆಡಿದ ನಂತರ, ಎದುರಾಳಿ ತಂಡದ ಫೀಲ್ಡರ್’ಗಳ ಕೆಲಸಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಬಾರದು. ಒಂದು ವೇಳೆ ಅಂತಹ ವರ್ತನೆ ಕಂಡುಬಂದರೆ ಅವನನ್ನು ಔಟ್ ಎಂದು ಘೋಷಿಸಲಾಗುತ್ತದೆ”.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.