ಸಿಎಸ್ಕೆಗೆ ಗುಡ್ಬೈ ಹೇಳಿದ್ರಾ ರವೀಂದ್ರ ಜಡೇಜಾ?
ಐಪಿಎಲ್ 2022 ರ ಪ್ರಾರಂಭದಲ್ಲಿ ರವೀಂದ್ರ ಜಡೇಜಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರನ್ನಾಗಿ ಮಾಡಲಾಯಿತು. ಆದರೆ ಅವರ ನಾಯಕತ್ವದಲ್ಲಿ ತಂಡವು 8 ಪಂದ್ಯಗಳಲ್ಲಿ 6 ರಲ್ಲಿ ಸೋಲು ಕಾಣುವಂತಾಯಿತು. ಇಷ್ಟು ಮಾತ್ರವಲ್ಲದೆ, ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ವಿಫಲತೆ ಕಂಡುಕೊಂಡರು. ಕಳಪೆ ಪ್ರದರ್ಶನದಿಂದ ನಿರಾಶೆಗೊಂಡ ಅವರು ನಾಯಕತ್ವವನ್ನು ಮಧ್ಯದಲ್ಲಿ ತೊರೆದು, ಎಂಎಸ್ ಧೋನಿಯವರಿಗೆ ಹಸ್ತಾಂತರಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಇದೀಗ ಚೆನ್ನೈನ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಒಂದು ದೊಡ್ಡ ಹೆಜ್ಜೆ ಇಟ್ಟಿದ್ದು, ಅದು ಐಪಿಎಲ್ 2023ರಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡದಿರಬಹುದು ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: Shah Rukh Khan Viral Video: ಶರ್ಟ್‌ಲೆಸ್ ಆಗಿ ಕಾಣಿಸಿಕೊಂಡ ಶಾರುಖ್ ಖಾನ್.!
ಐಪಿಎಲ್ 2022 ರ ಪ್ರಾರಂಭದಲ್ಲಿ ರವೀಂದ್ರ ಜಡೇಜಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರನ್ನಾಗಿ ಮಾಡಲಾಯಿತು. ಆದರೆ ಅವರ ನಾಯಕತ್ವದಲ್ಲಿ ತಂಡವು 8 ಪಂದ್ಯಗಳಲ್ಲಿ 6 ರಲ್ಲಿ ಸೋಲು ಕಾಣುವಂತಾಯಿತು. ಇಷ್ಟು ಮಾತ್ರವಲ್ಲದೆ, ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ವಿಫಲತೆ ಕಂಡುಕೊಂಡರು. ಕಳಪೆ ಪ್ರದರ್ಶನದಿಂದ ನಿರಾಶೆಗೊಂಡ ಅವರು ನಾಯಕತ್ವವನ್ನು ಮಧ್ಯದಲ್ಲಿ ತೊರೆದು, ಎಂಎಸ್ ಧೋನಿಯವರಿಗೆ ಹಸ್ತಾಂತರಿಸಿದರು.
ಸೋಶಿಯಲ್ ಮೀಡಿಯಾದಿಂದ ಪೋಸ್ಟರ್ ಡಿಲೀಟ್!
ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ರವೀಂದ್ರ ಜಡೇಜಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಿಂದ ತಂಡದ 2021 ಮತ್ತು 2022 ರ ಸೀಸನ್‌ಗಳಿಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ತೆಗೆದುಹಾಕಿದ್ದಾರೆ. ಈ ಕಾರಣದಿಂದಾಗಿ ಐಪಿಎಲ್ 2023 ರಲ್ಲಿ ಜಡೇಜಾ ಸಿಎಸ್‌ಕೆ ಪರ ಆಡುವುದಿಲ್ಲವೇ ಎಂಬ ಪ್ರಶ್ನೆ ಭುಗಿಲೆದ್ದಿದೆ. ಜಡೇಜಾ ಮತ್ತು ಸಿಎಸ್‌ಕೆ ಕೂಡ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದಾರೆ. ಇವಿಷ್ಟು ಮಾತ್ರವಲ್ಲದೆ, ಮಹೇಂದ್ರ ಸಿಂಗ್ ಧೋನಿ ಅವರ ಹುಟ್ಟುಹಬ್ಬಕ್ಕೂ ಜಡೇಜಾ ಶುಭಾಶಯ ತಿಳಿಸಲಿಲ್ಲ.
ಇದನ್ನೂ ಓದಿ: Astrology: ರಾಶಿಗಳಿಗೆ ಅನುಗುಣವಾಗಿ ನಮ್ಮ ಆತ್ಮವನ್ನು ಯಾವ ಪ್ರಾಣಿ ಪ್ರತಿನಿಧಿಸುತ್ತದೆ?
ಈ ಎಲ್ಲಾ ಕಾರಣಗಳು ಮುಂಬರುವ ಪಂದ್ಯಗಳಲ್ಲಿ ರವೀಂದ್ರ ಜಡೇಜಾ ಸಿಎಸ್‌ಕೆ ಪರವಾಗಿ ಆಡುವುದಿಲ್ಲ ಎಂದು ಹೇಳುತ್ತಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ