ನವದೆಹಲಿ: ವಿಶಾಖ್ ಪಟ್ಟಣದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ತಮ್ಮ 200 ನೇ ಟೆಸ್ಟ್ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ 10ನೇ ಭಾರತೀಯ ಬೌಲರ್ ಎನಿಸಿಕೊಂಡರು.



COMMERCIAL BREAK
SCROLL TO CONTINUE READING

ವಿಶೇಷವೆಂದರೆ ಅವರು ಈಗ ಎಡಗೈ ಆಟಗಾರರಲ್ಲಿ ವೇಗವಾಗಿ ಸಾಧನೆ ಮಾಡಿದ ಖ್ಯಾತಿಯನ್ನು ಹೊಂದಿರುವುದಲ್ಲದೆ 200 ಅಥವಾ ಅದಕ್ಕಿಂತ ಅಧಿಕ ವಿಕೆಟ್ ಗಳನ್ನು ಪಡೆದ ಭಾರತೀಯರಲ್ಲಿ ಅತ್ಯುತ್ತಮ ಬೌಲಿಂಗ್ ಸರಾಸರಿಯನ್ನು (24.20) ಹೊಂದಿದ್ದಾರೆ. ಈಗ ಭಾರತೀಯ ಸ್ಪಿನ್ನರ್‌ಗಳ ಪಟ್ಟಿಯಲ್ಲಿ ಜಡೇಜಾ ಈಗ 6 ನೇ ಸ್ಥಾನದಲ್ಲಿದ್ದಾರೆ. 



ಭಾರತಕ್ಕಾಗಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 10 ಜನರ ಪಟ್ಟಿ ಇಲ್ಲಿದೆ:


ಅನಿಲ್ ಕುಂಬ್ಳೆ - 619 (132)
ಕಪಿಲ್ ದೇವ್ - 434 (131)
ಹರ್ಭಜನ್ ಸಿಂಗ್ - 417 (103)
ಆರ್ ಅಶ್ವಿನ್ - 345 (66) *
ಜಹೀರ್ ಖಾನ್ - 311 (92)
ಇಶಾಂತ್ ಶರ್ಮಾ - 279 (93) *
ಬಿಎಸ್ ಬೇಡಿ - 266 (67)
ಬಿ.ಎಸ್.ಚಂದ್ರಶೇಖರ್ - 242 (58)
ಜವಾಗಲ್ ಶ್ರೀನಾಥ್ - 236 (67)
ರವೀಂದ್ರ ಜಡೇಜಾ - 200 (44) *


44 ನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಜಡೇಜಾ ಅವರು ಈಗ ಈ ಸಾಧನೆಯನ್ನು ವೇಗವಾಗಿ ಮಾಡಿದ ಎರಡನೇ ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ