IND vs AUS Fact Check: ಬಾಲ್ ಟ್ಯಾಂಪರಿಂಗ್ ಮಾಡಿದ್ರಾ ರವೀಂದ್ರ ಜಡೇಜಾ? ತಲ್ಲಣ ಸೃಷ್ಟಿಸಿದೆ ಈ ವಿಡಿಯೋ! ಅಸಲಿಗೆ ನಡೆದಿದ್ದೇ ಬೇರೆ...
Ravindra Jadeja Used Pain Relief Cream : ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ಅನ್ನು 177 ರನ್‌ಗಳಿಗೆ ಕಟ್ಟಿ ಹಾಕಲು ಜಡೇಜಾ ಅವರು ಅದ್ಭುತ ಐದು ವಿಕೆಟ್ ಗಳಿಸಿದರು. ಆದಾಗ್ಯೂ, ಜಡೇಜಾ ಮ್ಯಾಚ್ ಮಧ್ಯೆ ತಮ್ಮ ಕೈಗೆ ಏನನ್ನೋ ಹಚ್ಚಕೊಳ್ಳುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
India vs Australia 1st Test : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್‌ನ ಮೊದಲ ಪಂದ್ಯವು ಗುರುವಾರ (ಫೆಬ್ರವರಿ 9) ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ಎಂದೂ ಮರೆಯದ ದಿನದಂತಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ಅನ್ನು 177 ರನ್‌ಗಳಿಗೆ ಕಟ್ಟಿ ಹಾಕಲು ಜಡೇಜಾ ಅವರು ಅದ್ಭುತ ಐದು ವಿಕೆಟ್ ಗಳಿಸಿದರು. ಆದಾಗ್ಯೂ, ಜಡೇಜಾ ಮ್ಯಾಚ್ ಮಧ್ಯೆ ತಮ್ಮ ಕೈಗೆ ಏನನ್ನೋ ಹಚ್ಚಕೊಳ್ಳುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ವೈರಲ್ ಆದ ವಿಡಿಯೋ ತುಣುಕಿನಲ್ಲಿ, ಜಡೇಜಾ ತಮ್ಮ ಬಲಗೈಯಿಂದ ಮೊಹಮ್ಮದ್ ಸಿರಾಜ್ ಅವರ ಅಂಗೈಯ ಹಿಂಭಾಗದಿಂದ ವಸ್ತುವನ್ನು ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ. ಜಡೇಜಾ ಬೌಲ್ ಮಾಡುವ ಮೊದಲು ಈ ವಸ್ತುವನ್ನು ಅವರ ಎಡಗೈಯ ತೋರು ಬೆರಳಿಗೆ ಹಚ್ಚಿಕೊಂಡಿದ್ದಾರೆ. ಫೂಟೇಜ್‌ನಲ್ಲಿ ಜಡೇಜಾ ಚೆಂಡಿನ ಮೇಲೆ ಏನನ್ನೂ ಉಜ್ಜುವುದು ಕಾಣ ಸಿಗುವುದಿಲ್ಲ. ಆದರೂ ಆ ಸಮಯದಲ್ಲಿ ಅವರ ಕೈಯಲ್ಲಿ ಚೆಂಡು ಇತ್ತು. ಐಸಿಸಿ ಚೆಂಡನ್ನು ಹೊಳಪಿಸಲು ಯಾವುದೇ ವಸ್ತುವಿನ ಬಳಕೆಯನ್ನು ನಿರ್ಬಂಧಿಸಿದೆ, ಉಗುಳನ್ನು ಸಹ ಚೆಂಡಿಗೆ ಹಚ್ಚುವಂತಿಲ್ಲ.
Shubman Gillಗೆ ಮತ್ತೆ ನಾಮಕರಣ ಮಾಡಿದ Sunil Gavaskar: ಸಖತ್ ಆಗಿರೋ ಆ ಹೊಸ ಹೆಸರು ಏನು ಗೊತ್ತಾ?
ನಾಗ್ಪುರ ಟೆಸ್ಟ್‌ನ ಮೊದಲ ದಿನದ ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋ ತುಣುಕುಗಳಲ್ಲಿ ಜಡೇಜಾ ಬೌಲಿಂಗ್ ಕೈಯ ತೋರು ಬೆರಳಿಗೆ ಪೇನ್ ಕಿಲ್ಲರ್ ಕ್ರೀಮ್ ಬಳಸುತ್ತಿದ್ದಾರೆ ಎಂದು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಇದೀಗ ಐಸಿಸಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್‌ಗೆ ಮಾಹಿತಿ ನೀಡಿದೆ.
ಆಸ್ಟ್ರೇಲಿಯಾ ತಂಡ ಮ್ಯಾಚ್ ರೆಫರಿಯ ಗಮನಕ್ಕೆ ತಂದಿರಲಿಲ್ಲ. ಕೆಲವು ವರದಿಗಳ ಪ್ರಕಾರ, ಮ್ಯಾಚ್ ರೆಫರಿ ಅಂತಹ ಘಟನೆಗಳ ಬಗ್ಗೆ ದೂರು ನೀಡುವ ಅಗತ್ಯವಿಲ್ಲದೆ ಸ್ವತಂತ್ರವಾಗಿ ತನಿಖೆ ಮಾಡಬಹುದು. ಕ್ರಿಕೆಟ್ ಕಾನೂನಿನ ಪ್ರಕಾರ, ಚೆಂಡಿನ ಸ್ಥಿತಿಯು ಬಾಧಿತವಾಗದಿರುವುದನ್ನು ಖಚಿತಪಡಿಸಿಕೊಳ್ಳಲು ಬೌಲರ್‌ಗೆ ಯಾವುದೇ ರೀತಿಯ ವಸ್ತುವನ್ನು ತಮ್ಮ ಕೈಗಳ ಮೇಲೆ ಅನ್ವಯಿಸಲು ಅಂಪೈರ್‌ನ ಅನುಮತಿಯ ಅಗತ್ಯವಿದೆ.
ಇದನ್ನೂ ಓದಿ : IND vs AUS: ಆಸೀಸ್ ನ ಈ ವಿಕೆಟ್ ಉರುಳಿತ್ತಿದ್ದಂತೆ ಎದ್ದುಬಿದ್ದು ಕುಣಿದಾಡಿದ ರಾಹುಲ್ ದ್ರಾವಿಡ್! ವಿಡಿಯೋ ನೋಡಿ
ಟಿಮ್ ಪೈನ್ ಮತ್ತು ಮೈಕೆಲ್ ವಾನ್ ಭಾರತೀಯ ಕ್ರಿಕೆಟ್ ತಂಡ ಮೋಸ ಮಾಡುತ್ತಿದೆ. ಜಡೇಜಾ ಚೆಂಡನ್ನು ಉಜ್ಜುತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ಆರೋಪಿಸಿ ವರದಿ ಮಾಡಿವೆ. "ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಪ್ರಶ್ನಾರ್ಹ ಕ್ಷಣದ ಚರ್ಚೆಯೊಂದು ಎಲ್ಲೆಡೆ ಭುಗಿಲೆದ್ದಿದೆ" ಎಂದು ಫಾಕ್ಸ್ ಕ್ರಿಕೆಟ್ ಟ್ವೀಟ್ ಮಾಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.