ಫೀಲ್ಡಿಂಗ್ ಕೋಚ್ ಪ್ರಕಾರ ಭಾರತ ತಂಡದಲ್ಲಿ ಇವರು ಅತ್ಯುತ್ತಮ ಫೀಲ್ಡರ್ ಅಂತೆ..!
ಭಾರತ ತಂಡವು ಟೆಸ್ಟ್ ಕ್ರಿಕೆಟಿನಲ್ಲಿ ಪ್ರಾಬಲ್ಯ ಮೆರೆಯುವುದಕ್ಕೆ ಪ್ರಮುಖ ಕಾರಣ ಬೌಲರ್ಗಳು, ಇನ್ನು ಕೆಲವೊಮ್ಮೆ ಫೀಲ್ಡರ್ ಗಳ ಪ್ರಾಮುಖ್ಯತೆ ಮತ್ತು ದಕ್ಷತೆ ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ.
ನವದೆಹಲಿ: ಭಾರತ ತಂಡವು ಟೆಸ್ಟ್ ಕ್ರಿಕೆಟಿನಲ್ಲಿ ಪ್ರಾಬಲ್ಯ ಮೆರೆಯುವುದಕ್ಕೆ ಪ್ರಮುಖ ಕಾರಣ ಬೌಲರ್ಗಳು, ಇನ್ನು ಕೆಲವೊಮ್ಮೆ ಫೀಲ್ಡರ್ ಗಳ ಪ್ರಾಮುಖ್ಯತೆ ಮತ್ತು ದಕ್ಷತೆ ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ.
ಈಗ ಭಾರತದ ಫೀಲ್ಡರ್ ಕುರಿತಾಗಿ ಮಾತನಾಡಿರುವ ತಂಡದ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ 'ತಂಡದ ಫೀಲ್ಡಿಂಗ್ ಕ್ಷೇತ್ರದಲ್ಲಿನ ಮಾನದಂಡಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾ 'ರವೀಂದ್ರ ಜಡೇಜಾ ಬಹುಶಃ ದಶಕದ ಅತ್ಯುತ್ತಮ ಭಾರತೀಯ ಫೀಲ್ಡರ್ ಎಂದು ಹೇಳಿದ್ದಾರೆ.
'ಮೈದಾನದಲ್ಲಿ ಜಡ್ಡು ಅವರ ಉಪಸ್ಥಿತಿಯು ತಂಡದ ಉತ್ಸಾಹವನ್ನು ಹೆಚ್ಚಿಸುತ್ತದೆ. ಅವರು ತಮ್ಮ ಫೀಲ್ಡಿಂಗ್ ಮೂಲಕ ವಿರೋಧಿ ತಂಡವನ್ನು ಕಾಲ್ಬೆರಳುಗಳ ಮೇಲೆ ಇಟ್ಟುಕೊಳ್ಳಬಲ್ಲ ವ್ಯಕ್ತಿ. ಅವರು ಮೈದಾನದಲ್ಲಿ ಹೆದರಿಸುವಂತಹ ಉಪಸ್ಥಿತಿಯನ್ನು ಹೊಂದಿದ್ದಾರೆ 'ಎಂದು ಶ್ರೀಧರ್ ತಿಳಿಸಿದ್ದಾರೆ. ಇನ್ನು ಮುಂದುವರೆದು ಕಳೆದ ಒಂದು ದಶಕದಲ್ಲಿ ರವಿಂದ್ರ ಜಡೇಜಾ ಭಾರತ ಕಂಡಂತಹ ಅತ್ಯುತ್ತಮ ಫೀಲ್ಡರ್ ಎಂದು ಹೇಳಿದ್ದಾರೆ.
ಇದೇ ವೇಳೆ ತಂಡದಲ್ಲಿನ ಬದಲಾವಣೆಗಳ ಕುರಿತು ಮಾತನಾಡಿದ ಶ್ರೀಧರ್, ಮನಸ್ಥಿತಿ ಮತ್ತು ಸುಧಾರಿತ ಫಿಟ್‌ನೆಸ್ ಬಗ್ಗೆ ಮಾತನಾಡಿದ ಅವರು ಭಾರತೀಯ ಕ್ರಿಕೆಟ್ ಫೀಲ್ಡಿಂಗ್ ನಲ್ಲಿನ ಕ್ರಾಂತಿಗೆ ಎರಡು ಅಂಶಗಳು ಪ್ರಮುಖ ಪಾತ್ರ ವಹಿಸಿವೆ ಎಂದರು.