ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಹದಿನೈದನೇ ಆವೃತ್ತಿಯು ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಸೀಸನ್‌ನಲ್ಲಿ ಹಾರ್ದಿಕ್‌ ಪಾಂಡ್ಯ ನೇತೃತ್ವದ ಗುಜರಾತ್‌ ಟೈಟಾನ್ಸ್‌ ತಂಡವು ಗೆಲುವು ಸಾಧಿಸಿ ಚಾಂಪಿಯನ್‌ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ಇನ್ನು ಪ್ಲೇ ಆಫ್‌ವರೆಗೆ ಲಗ್ಗೆ ಇಟ್ಟಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಫೈನಲ್‌ ತಲುಪುವಲ್ಲಿ ಎಡವಿ, ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೋಲು ಕಂಡಿತ್ತು. ಆದರೆ ಐಪಿಎಲ್‌ ಮುಗಿದ್ರೂ ಸಹ ಬೆಂಗಳೂರು ತಂಡಕ್ಕಿರುವ ರಾಯಲ್‌ ಕ್ರೇಜ್‌ ಮಾತ್ರ ಕಮ್ಮಿಯಾಗುತ್ತಿಲ್ಲ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಜುಲೈ-ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾ; ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ


ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಜನಪ್ರಿಯ ತಂಡ ಎಂದೇ ಹೇಳಬಹುದು. ಅನೇಕ ಅಭಿಮಾನಿಗಳನ್ನು ಈ ತಂಡ ಹೊಂದಿದೆ. ಇನ್ನು ಟ್ವಿಟ್ಟರ್ ಇಂಡಿಯಾದ ಅಧಿಕೃತ ಹೇಳಿಕೆಯ ಪ್ರಕಾರ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2022ರಲ್ಲಿ ಬೆಂಗಳೂರು ತಂಡಕ್ಕೆ ಬೆಂಬಲವಾಗಿ ಅತೀ ಹೆಚ್ಚು ಟ್ವೀಟ್‌ ಮಾಡಲಾಗಿದೆಯಂತೆ. ಇದು ಆರ್‌ಸಿಬಿಯ ಜನಪ್ರಿಯತೆ ಬಗ್ಗೆ ತಿಳಿಸಿಕೊಡುತ್ತದೆ. 


ಇನ್ನು ಆರ್‌ಸಿಬಿ ಬಳಿಕ ಕ್ಯಾಪ್ಟನ್‌ ಕೂಲ್‌ ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಎರಡನೇ ಸ್ಥಾನದಲ್ಲಿದೆ.  ಇದಾದ ಬಳಿಕ ಐದು ಬಾರಿ ಚಾಂಪಿಯನ್ ಪಟ್ಟ ಗೆದ್ದ ಮುಂಬೈ ಇಂಡಿಯನ್ಸ್  ತಂಡ ಮೂರನೇ ಸ್ಥಾನದಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಗಳಿಸಿವೆ. 


ಇದನ್ನು ಓದಿ: Ind vs SA : ದಕ್ಷಿಣ ಆಫ್ರಿಕಾಗೆ ಕಂಟಕವಾಗಲಿದ್ದಾರೆ ಟೀಂ ಇಂಡಿಯಾದ ಈ ವೇಗದ ಬೌಲರ್!


ಆಟಗಾರರ ಪಟ್ಟಿ ಇಂತಿದೆ: 
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಬಗ್ಗೆ ಟ್ವಿಟ್ಟರ್‌ನಲ್ಲಿ ಹೆಚ್ಚು ಚರ್ಚೆ ನಡೆಸಲಾಗಿದೆ. ಈ ಮೂಲಕ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಕೊಹ್ಲಿ ಬಳಿಕ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಎಂಎಸ್ ಧೋನಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲು ಚೆನ್ನೈ ತಂಡದ ನೇತೃತ್ವವನ್ನು ರವೀಂದ್ರ ಜಡೇಜಾ ವಹಿಸಿಕೊಂಡಿದ್ದರು. ಆ ಬಳಿಕ ನಿರ್ವಹಣೆ ಅಸಾಧ್ಯವಾದ ಕಾರಣ ಎಂಎಸ್‌ ಧೋನಿ ಮುಂದಾಳತ್ವ ಪಡೆದುಕೊಂಡರು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.