ಕೆಎಲ್ ರಾಹುಲ್ ಆರ್‌ಸಿಬಿ ಸೇರೋದು ಕನ್ಫರ್ಮ್! ಐಪಿಎಲ್ ಹರಾಜಿಗೆ 24 ಗಂಟೆ ಮೊದಲೇ ಫ್ರಾಂಚೈಸಿಯಿಂದ ಹೊರಬಿತ್ತು ಬಿಗ್ ಅಪ್ಡೇಟ್
ಕೆಎಲ್ ರಾಹುಲ್ ಕಳೆದ ಮೂರು ಸೀಸನ್‌ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ನ ನಾಯಕರಾಗಿದ್ದರು. ಆದರೆ ಮುಂಬರುವ ಹರಾಜಿಗೆ ಮೊದಲು, ಎಲ್‌ಎಸ್‌ಜಿ ಅವರನ್ನು ಉಳಿಸಿಕೊಳ್ಳದೆ ಬಿಡುಗಡೆ ಮಾಡಿತ್ತು. ಆ ನಂತರ ಹರಾಜಿಗೆ ಸೇರಿಕೊಂಡಿದ್ದರು.
Will RCB buy KL Rahul?: ಜೆಡ್ಡಾದಲ್ಲಿ ನಡೆಯಲಿರುವ ಮೆಗಾ ಐಪಿಎಲ್ ಹರಾಜಿಗೆ 24 ಗಂಟೆಯೂ ಇಲ್ಲ. ನವೆಂಬರ್ 24 ಮತ್ತು 25 ಎರಡು ದಿನಗಳ ಹರಾಜಿಗೆ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಈ ಮಧ್ಯೆ, ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಬಗ್ಗೆ ಪೋಸ್ಟ್ ಶೇರ್ ಮಾಡಿದೆ. ಇದನ್ನು ನೋಡಿದ ಅಭಿಮಾನಿಗಳು ಆರ್‌ಸಿಬಿಗೆ ರಾಹುಲ್ ಸೇರುವುದು ಕನ್ಫರ್ಮ್ ಅಂತಿದ್ದಾರೆ.
ಕೆಎಲ್ ರಾಹುಲ್ ಕಳೆದ ಮೂರು ಸೀಸನ್‌ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ನ ನಾಯಕರಾಗಿದ್ದರು. ಆದರೆ ಮುಂಬರುವ ಹರಾಜಿಗೆ ಮೊದಲು, ಎಲ್‌ಎಸ್‌ಜಿ ಅವರನ್ನು ಉಳಿಸಿಕೊಳ್ಳದೆ ಬಿಡುಗಡೆ ಮಾಡಿತ್ತು. ಆ ನಂತರ ಹರಾಜಿಗೆ ಸೇರಿಕೊಂಡಿದ್ದರು.
ಮೆಗಾ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆಯುವ ಪ್ರಬಲ ಸ್ಪರ್ಧಿಯಾಗಿರುವ ಆಟಗಾರರಲ್ಲಿ ಕೆಎಲ್ ರಾಹುಲ್ ಕೂಡ ಒಬ್ಬರು. ಈ ಬೆನ್ನಲ್ಲೇ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸೇರುತ್ತಾರೆ ಎಂಬ ವದಂತಿಗಳು ಜೋರಾಗಿವೆ. ಈಗ, ಹರಾಜಿಗೆ ಕೆಲವು ಗಂಟೆಗಳು ಬಾಕಿ ಇರುವಂತೆ, RCB ರಾಹುಲ್ ಅವರಿಗೆ ಸಂಬಂಧಪಟ್ಟ ವೀಡಿಯೊವನ್ನು ಪೋಸ್ಟ್ ಮಾಡಿದೆ. ಇದನ್ನು ನೋಡಿದ ನೆಟ್ಟಿಗರು, ರಾಹುಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಖರೀದಿಸಲಿದೆ ಎಂದುಊಹಿಸುತ್ತಿದ್ದಾರೆ.
RCB ತನ್ನ 'X' ಖಾತೆಯಲ್ಲಿ KL ರಾಹುಲ್ ಅವರ ಅದ್ಭುತ ಸ್ಟ್ರೈಟ್ ಡ್ರೈವ್‌ನ ವೀಡಿಯೊವನ್ನು ಹಂಚಿಕೊಂಡಿದೆ. "ನಮಗೆಲ್ಲ ತಿಳಿದಿರುವ ಕ್ಲಾಸಿ ರಾಹುಲ್' ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್ ಮಾಡಿದೆ.
ಇನ್ನೊಂದೆಡೆ ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ, ಕೆಎಲ್ ರಾಹುಲ್ ಅವರು ಆರ್‌ಸಿಬಿ ಸೇರುವ ಬಗ್ಗೆ ಹೇಳಿಕೆ ಕೂಡ ನೀಡಿದ್ದರು. "ಆರ್‌ಸಿಬಿಯಲ್ಲಿ ಆಡುವುದು ನನಗೆ ತುಂಬಾ ಇಷ್ಟವಾಗಿತ್ತು. ಇದು ತವರಿನಂತೆ. ತವರಿನಲ್ಲಿ ಹೆಚ್ಚು ಸಮಯ ಕಳೆಯುವ ಅವಕಾಶ ಸಿಗುತ್ತದೆ. ಚಿನ್ನಸ್ವಾಮಿ ನನಗೆ ಚೆನ್ನಾಗಿ ಗೊತ್ತು. ನಾನು ಅಲ್ಲಿ ಆಡುತ್ತಾ ಬೆಳೆದೆ. RCB ನಲ್ಲಿ ಆಡುವುದನ್ನು ನಿಜವಾಗಿಯೂ ಇಷ್ಟಪಟ್ಟೆ" ಎಂದಿದ್ದಾರೆ.
ಇದನ್ನೂ ಓದಿ: ಮನೆಯ ದಕ್ಷಿಣ ದಿಕ್ಕಿನಲ್ಲಿ ಈ ವಸ್ತುಗಳನ್ನು ತಪ್ಪಿಯೂ ಇಡಬೇಡಿ, ಬಡತನ ವಕ್ಕರಿಸುವುದು; ಕಷ್ಟ ತಪ್ಪಿದ್ದೇ ಅಲ್ಲ !
ಕೆಎಲ್ ರಾಹುಲ್ ಪ್ರಸ್ತುತ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಭಾಗವಾಗಿದ್ದಾರೆ. ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಡುತ್ತಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡ ಅವರು, ಎರಡನೇ ದಿನದಲ್ಲಿ ಅಜೇಯರಾಗಿ ಮರಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.