RCB ಪ್ಯಾನ್ಸ್ಗೆ ಬ್ಯಾಡ್ ನ್ಯೂಸ್..! ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯಗಳು ಸ್ಥಳಾಂತರ?
RCB latest news : ಬೆಂಗಳೂರು ನಗರವು ಕಳೆದ 40 ವರ್ಷಗಳಲ್ಲಿ ಅತ್ಯಂತ ಭೀಕರ ಬರವನ್ನು ಎದುರಿಸುತ್ತಿದೆ. ಇದರ ಪರಿಣಾಮ ಇದೀಗ IPL 2024 ಪಂದ್ಯಾವಳಿಗಳ ಮೇಲೆ ಬೀರಿದೆ. ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಾವಳಿ ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.. ಈ ಸ್ಪಷ್ಟ ಮಾಹಿತಿ ಇಲ್ಲಿದೆ..
RCB mathes in Bangaluru : ತವರು ಮೈದಾನದಲ್ಲಿ ನಡೆಯಬೇಕಿದ್ದ, IPL 2024 ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB matches date) ಪಂದ್ಯಗಳ ಸ್ಥಳ ಬದಲಾವಣೆ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಕುರಿತು ಕರ್ನಾಟಕ ಕ್ರಿಕೆಟ್ ಸಂಸ್ಥೆ ಜತೆ ಶೀಘ್ರದಲ್ಲೇ ಚರ್ಚೆ ನಡೆಸುವುದಾಗಿ ಜಲ ಪ್ರಾಧಿಕಾರ ತಿಳಿಸಿದೆ.
ಹೌದು.. ಈ ಬಾರಿ ರಾಜಧಾನಿ ಅತ್ಯಂತ ಕೆಟ್ಟ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಬೆಂಗಳೂರು ಮುನ್ಸಿಪಲ್ ಕೌನ್ಸಿಲ್‌ನಿಂದ ಕುಡಿಯುವ ನೀರಿಗೂ ಸಹ ನಿಯಂತ್ರಣ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಆರ್‌ಸಿಬಿ ಪಂದ್ಯಗಳ (RCB matches dates ) ಸ್ಥಳ ಬದಲಾವಣೆ ನಡೆಯುತ್ತವೆ ಎಂಬ ವಂದತಿ ಜೋರಾಗಿ ಹಬ್ಬಿದೆ. ಇದೇ ವೇಳೆ ಚಿನ್ನಸ್ವಾಮಿಯಲ್ಲಿಯೇ ಐಪಿಎಲ್ ಪಂದ್ಯ ನಡೆಯಲಿವೆ ಎಂದು ಕೆಎಸ್‌ಸಿಎ (KSCA) ಆರ್‌ಸಿಬಿ ಅಭಿಮಾನಿಗಳಿಗೆ ಮಾಹಿತಿ ನೀಡಿದೆ.
ಐಪಿಎಲ್ ಪ್ರಕಟಿಸಿರುವ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿಯಂತೆ ಚಿನ್ನಸ್ವಾಮಿ ಸ್ಟೇಡಿಯಂ ಆರ್‌ಸಿಬಿಯ ಮೂರು ಪಂದ್ಯಗಳಿಗೆ ವೇದಿಕೆಯಾಗಲಿದೆ. ಮಾರ್ಚ್ 25 ರಂದು ಪಂಜಾಬ್ ಕಿಂಗ್ಸ್ ವಿರುದ್ಧ RCB ಯ ಮೊದಲ ಹೋಮ್ ಪಂದ್ಯ ನಡೆಯಲಿದೆ. RCB ಯ IPL 2024 ರ ಸೀಸನ್ ಮಾರ್ಚ್ 22 ರಂದು ಚೆನ್ನೈ ಸೂಪರ್ ಕಿಂಗ್ಸ್ (CSK vs RCB ) ವಿರುದ್ಧದ ಆರಂಭಿಕ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ.
IPL 2024 RCB team list : ಫಾಫ್ ಡು ಪ್ಲೆಸಿಸ್, ರಜತ್ ಪತಿಧರ್, ಸೌರವ್ ಚೌಹಾಣ್, ಸುಯಶ್ ಪ್ರಭುದೇಸಾಯಿ, ವಿರಾಟ್ ಕೊಹ್ಲಿ, ವಿಲ್ ಜಾಕ್ಸ್, ಕ್ಯಾಮೆರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮಾರೋರ್, ಮನೋಜ್ ಭಂಡಾಕೆ, ಮಯಾಂಕ್ ದಗ್ಗರ್, ಸ್ವಪ್ನಿಲ್ ಸಿಂಗ್, ಟಾಮ್ ಕರ್ರಾನ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಆಕಾಶ್ ದೀಪ್, ಅಲ್ಸಾರಿ ದೀಪ್ ಜೋಸೆಫ್, ಹಿಮಾಂಶು ಶರ್ಮಾ, ಕರಣ್ ಶರ್ಮಾ, ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್, ರಾಜನ್ ಕುಮಾರ್, ರೀಸ್ ಟೋಪ್ಲಿ, ವೈಶಾಖ್ ವಿಜಯ್ ಕುಮಾರ್ ಮತ್ತು ಯಶ್ ದಯಾಳ್.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.