RCB Playing XI : ಬಹುನಿರೀಕ್ಷಿತ IPL 2024 ರ ಸೀಸನ್ ಮಾರ್ಚ್ 22 ರಂದು ಪ್ರಾರಂಭವಾಗಲಿದೆ. ಮೊದಲ ಪಂದ್ಯ ಚೆನ್ನೈ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವೆ ಚನೈನಲ್ಲಿ ನಡೆಯಲಿದೆ. ಈ ಮೊದಲ ಪಂದ್ಯವನ್ನು ನೋಡಲು ಎರಡು ತಂಡದ ಅಭಿಮಾನಿಗಳು ಕಾತುರರಾಗಿದ್ದಾರೆ. ಇನ್ನು ಇದುವರೆಗೂ ಕಪ್ ಗೆಲ್ಲದ ಆರ್‌ಸಿಬಿ ಈ ಬಾರಿ ಜಯಭೇರಿ ಭಾರಿಸಲು ಸಕಲ ಸಿದ್ಧತೆ ನಡೆಸುತ್ತಿದೆ.


COMMERCIAL BREAK
SCROLL TO CONTINUE READING

ಫಾಫ್ ಡು ಪ್ಲೆಸಿಸ್ ನಾಯಕತ್ವ, ಅದ್ಬುತ ಆಟಗಾರರ ಸೇರ್ಪಡೆಯಿಂದಾಗಿ ತಂಡ ಬಲಿಷ್ಠವಾಗಿದೆ. ಅಲ್ಲದೆ, ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್‌ ರಂತಹ ದಿಗ್ಗಜ ಆಟಗಾರರ ಸಮ್ಮುಖದಲ್ಲಿ ಆಟವಾಡಲು ಯುವ ಆಟಗಾರರು ಉತ್ಸಾಹ ಭರಿತರಾಗಿದ್ದು, ಕಪ್‌ ಗೆಲ್ಲುವ ಭರವಸೆ ಹೊರಹಾಕಿದ್ದಾರೆ. ಇನ್ನು ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಮೊಹಮ್ಮದ್ ಸಿರಾಜ್, ಅಲ್ಜಾರಿ ಜೋಸೆಫ್ ಅನುಜ್ ರಾವತ್ ಫೀಲ್ಡಿಂಗ್‌ನಲ್ಲಿರುವುದು ಖಚಿತವಾಗಿದೆ.


ಇದನ್ನೂ ಓದಿ:IPL 2024: 'ಇಲ್ಲಿ ಯಾರೂ ಸಿನಿಯರ್... ಜೂನಿಯರ್ ಇಲ್ಲ...; ಹೀಗಂತ ಗೌತಮ್ ಗಂಭೀರವಾಗಿ ಹೇಳಿದ್ಯಾರಿಗೆ!


ಆಕಾಶ್ ದೀಪ್, ಟಾಮ್ ಕರ್ರಾನ್, ಮಹಿಪಾಲ್ ಲೊಮ್ರೋರ್, ವಿಲ್ ಜಾಕ್ಸ್, ಸುಯಶ್ ಪ್ರಭುದೇಸಾಯಿ, ಕರ್ಣ್ ಶರ್ಮಾ, ಲಕ್ಕಿ ಫರ್ಗುಸನ್,  ಸ್ವಪ್ನಿಲ್ ಸಿಂಗ್, ರೀಸ್ ಟೋಪ್ಲಿ, ವಿಜಯ್‌ಕುಮಾರ್ ವೈಶಾಕ್, ಯಶ್ ದಯಾಳ್‌ ತಂಡದಲ್ಲಿ ಉಳಿಯುವ ಅವಕಾಶಕ್ಕಾಗಿ ಕಾಯುತ್ತಿದ್ದರೆ, ಸೌರವ್ ಚೌಹಾಣ್, ಮಯಾಂಕ್ ದಾಗರ್, ಮನೋಜ್ ಭಾಂಡಗೆ, ಹಿಮಾಂಶು ಶರ್ಮಾ, ರಾಜನ್ ಕುಮಾರ್ ಅವರಿಗೆ ಸೀಮಿತ ಅವಕಾಶಗಳಿವೆ ಎನ್ನಲಾಗಿದೆ.


RCB ಬ್ಯಾಟಿಂಗ್ ಲೈನ್ ಅಪ್ ಹೀಗಿದೆ : ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಆರಂಭಿಕ ಆಟಗಾರರು ಎನ್ನಲಾಗಿದೆ. ಇವರ ನಂತರ ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ ಮತ್ತು ಕ್ಯಾಮರೂನ್ ಗ್ರೀನ್ ಆಡುವ ಸಾಧ್ಯತೆ ಹೆಚ್ಚಿದೆ. ಲೊಮ್ರೋರ್ ಉತ್ತಮ ಬ್ಯಾಟ್ಸ್‌ಮನ್ ಆಗಿರುವುದರಿಂದ ತಂಡವು ಮಯಾಂಕ್ ದಾಗರ್ ಬದಲಿಗೆ ಮಹಿಪಾಲ್ ಲೊಮ್ರೋರ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. 


ಇದನ್ನೂ ಓದಿ:Virat Kohli: ಅನುಷ್ಕಾಗೂ ಮುನ್ನ ಈ ನಟಿಯನ್ನೇ ಮದುವೆಯಾಗಲು ಬಯಸಿದ್ದರಂತೆ ವಿರಾಟ್! ಯಾರು ಗೊತ್ತಾ ಆ ಬ್ಯೂಟಿ?


ಇನ್ನು ಬೌಲಿಂಗ್ ವಿಭಾಗವನ್ನು ನೋಡುವುದಾದರೆ, ಮೊಹಮ್ಮದ್ ಸಿರಾಜ್ ವೇಗದ ದಾಳಿಯನ್ನು ಮುಂದುವರೆಸಲಿದ್ದಾರೆ. ಆಕಾಶ್ ದೀಪ್ ಇಲ್ಲವೇ ವಿಜಯಕುಮಾರ್ ವೈಶಾಕ್ ಎರಡನೇ ಅಬ್ಬರಿಸುವ ನಿರೀಕ್ಷೆಯಿದೆ. ತಂಡದ ಪ್ರಮುಖ ಬೌಲರ್ ಎಂದು ಕರ್ಣ್ ಶರ್ಮಾ ಅವರನ್ನು ಪರಿಗಣಿಸಬಹುದು. ಅಲ್ಜಾರಿ ಜೋಸೆಫ್ ವಿದೇಶಿ ವೇಗದ ಬೌಲರ್ ಉತ್ತಮ ಪ್ರದರ್ಶನ ಸಾಧ್ಯತೆ. ಅಲ್ಲದೆ, ಸುಯಶ್ ಪ್ರಭುದೇಸಾಯಿ, ಯಶ್ ದಯಾಳ್, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ಇತರ ಯುವ ಭಾರತೀಯ ಆಟಗಾರರನ್ನು ಇತರ ಆಟಗಳ ವೇಳೆ ಬಳಸಬಹುದು.


RCB ಟೀಂ ಹೀಗಿದ್ರೆ ಸೋಲು ಸಾಧ್ಯವೇ ಇಲ್ಲ : ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅನುಜ್ ರಾವತ್, ಕರ್ಣ್ ಶರ್ಮಾ, ಅಲ್ಜಾರಿ ಜೋಸೆಫ್, ಮೊಹಮ್ಮದ್ ಸಿರಾಜ್ ಒಳಗೊಂಡ ತಂಡ ಬಲಿಷ್ಠವಾಗಿರಲಿದ್ದು, ಉತ್ತಮ ಗೆಲುವು ಸಾಧಿಸಲು ಸಹಾಯಕವಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.