RCB vs CSK, IPL 2024: ಪ್ಲೇ ಆಫ್‌ಗೆ RCB, ಚೆನ್ನೈ ಸೂಪರ್ ಕಿಂಗ್ಸ್ ಸೋಲಿಗೆ ಇವೇ ಕಾರಣಗಳು
IPL 2024 playoffs: ಶನಿವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಚೆನ್ನೈ ವಿರುದ್ಧ 27 ರನ್‌ಗಳ ರೋಚಕ ಗೆಲುವು ಸಾಧಿಸಿದ ಆರ್‌ಸಿಬಿ 4ನೇ ತಂಡವಾಗಿ ಪ್ಲೇ ಆಫ್‌ಗೆ ಪ್ರವೇಶ ಪಡೆಯಿತು.
Indian Premier League 2024: 2024ರ ಐಪಿಎಲ್ ಟೂರ್ನಿಯ ಆರಂಭಿಕ ೮ ಪಂದ್ಯಗಳ ಪೈಕಿ ಸತತ 7 ಸೋಲು ಕಾಣುವ ಮೂಲಕ ಆರ್‌ಸಿಬಿ ಕೋಟ್ಯಂತರ ಅಭಿಮಾನಿಗಳಿಗೆ ಬಹುದೊಡ್ಡ ನಿರಾಸೆ ಮೂಡಿಸಿತ್ತು. ಇನ್ನೇನು ಬಹುತೇಕ ಟೂರ್ನಿಯಿಂದ ಹೊರಬೀಳಲಿದೆ ಅನ್ನೋ ಹಂತದಲ್ಲಿದ್ದ ಆರ್‌ಸಿಬಿ ಫೀನಿಕ್ಸ್‌ನಂತೆ ಮೇಲೇದ್ದು ಸತತ 6 ಗೆಲುವು ಸಾಧಿಸಿದೆ. ಸತತ ಸೋಲುಗಳಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್‌ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಣರೋಚಕ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್‌ಗೆ ಗ್ರ್ಯಾಂಡ್ ಎಂಟ್ರಿ ನೀಡಿದೆ.
ಶನಿವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಚೆನ್ನೈ ವಿರುದ್ಧ 27 ರನ್‌ಗಳ ರೋಚಕ ಗೆಲುವು ಸಾಧಿಸಿದ ಆರ್‌ಸಿಬಿ 4ನೇ ತಂಡವಾಗಿ ಪ್ಲೇ ಆಫ್‌ಗೆ ಪ್ರವೇಶ ಪಡೆಯಿತು. ಇತ್ತ ಸೋಲಿನ ಆಘಾತದೊಂದಿಗೆ ಸಿಎಸ್‌ಕೆ ಟೂರ್ನಿಯಿಂದ ನಿರ್ಗಮಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಮಳೆಯ ಅಡಚಣೆಯ ನಡುವೆಯೂ ಅದ್ಭುತ ಬ್ಯಾಟಿಂಗ್ ನಡೆಸಿತು. ನಾಯಕ ಫಾಫ್ ಡುಪ್ಲೆಸಿಸ್(54), ವಿರಾಟ್ ಕೊಹ್ಲಿ(47), ರಜತ್ ಪಾಟಿದಾರ್(41), ಕ್ಯಾಮರೂನ್ ಗ್ರೀನ್(38), ಗ್ಲೆನ್ ಮ್ಯಾಕ್ಸ್‌ವೆಲ್(16) ಮತ್ತು ದಿನೇಶ್ ಕಾರ್ತಿಕ್ (14) ರನ್ ಗಳಿಸಿದರು.
IPL 2024: ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಆರ್ಸಿಬಿ..!
ಆರ್‌ಸಿಬಿ ನೀಡಿದ ಬೃಹತ್ ಮೊತ್ತದ ಟಾರ್ಗೆಟ್ ಚೇಸ್ ಮಾಡಿದ ಸಿಎಸ್‌ಕೆ ಗೆಲುವಿನ ಹತ್ತಿರ ಬಂದು 27 ರನ್‌ಗಳಿಂದ ರೋಚಕ ಸೋಲು ಅನುಭವಿಸಿತು. ಸಿಎಸ್‌ಕೆ ಪರ ರಚಿನ್ ರವೀಂದ್ರ(61), ಅಜಿಂಕ್ಯ ರಹಾನೆ(33), ರವೀಂದ್ರ ಜಡೇಜಾ(ಅಜೇಯ 42) ಮತ್ತು ಎಂ.ಎಸ್.ಧೋನಿ(25) ರನ್ ಗಳಿಸಿದರು.
ಚೆನ್ನೈ ಸೋಲಿಗೆ ಕಾರಣಗಳು
ಬೃಹತ್ ಮತ್ತದ ಟಾರ್ಗೆಟ್ ಚೇಸ್ ಮಾಡಿದ ಚೆನ್ನೈ ಸೋಲಿಗೆ ಹಲವು ಕಾರಣಗಳಿವೆ. ಮೊದಲನೆಯದಾಗಿ ನಾಯಕ ಋತುರಾಜ್ ಗಾಯಕ್ವಾಡ್ ಶೂನ್ಯಕ್ಕೆ ನಿರ್ಗಮಿಸಿದ್ದು. ಗ್ಲೆನ್ ಮ್ಯಾಕ್ಸ್‌ವೆಲ್ ಎಸೆದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಗಾಯಕ್ವಾಡ್ ಯಶ್ ದಯಾಳ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದು ಸಿಎಸ್‌ಕೆಗೆ ದೊಡ್ಡ ಆಘಾತವನ್ನು ನೀಡಿತು. ಬಳಿಕ ಬಂದ ಡೆರಿಲ್ ಮಿಚೆಲ್ ಸಹ ಕೇವಲ 4 ರನ್ ಗಳಿಸಿ ಪೆವಿಲಿಯನ್ ಸೇರಿದ್ದು ಸಿಎಸ್‌ಕೆಗೆ 2ನೇ ಆಘಾತವುಂಟಾಯ್ತು. ಅರ್ಧಶತಕ ಸಿಡಿಸಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ರಚಿನ್ ರವೀಂದ್ರ(61) ರನೌಟ್ ಆಗಿದ್ದು ಸಿಎಸ್‌ಕೆಗೆ 3ನೇ ಆಘಾತವುಂಟಾಯ್ತು. ಮಿಚೆಲ್ ಸ್ಯಾಂಟ್ನರ್ ನೀಡಿದ ಕ್ಯಾಚ್‌ಅನ್ನು ಜಿಂಕೆಯಂತೆ ಹಾರಿ ಫಾಫ್ ಡುಪ್ಲೆಸಿಸ್ ಒಂದೇ ಕೈಲಿ ಕ್ಯಾಚ್ ಹಿಡಿದಿದ್ದು ಆರ್‌ಸಿಬಿಗೆ ಮತ್ತೊಂದು + ಪಾಯಿಂಟ್ ಆಗಿತ್ತು.
IPL 2024, RCB vs CSK: ಜೀರೋ To ಹೀರೋ, RCBಗೆ ಅದೃಷ್ಟದ ಗೆಲುವು ತಂದುಕೊಟ್ಟ ಯಶ್ ದಯಾಳ್!
219 ರನ್‌ಗಳ ಗೆಲುವಿನ ಗುರಿ ನೀಡಿದ್ದರು ಸಿಎಸ್‌ಕೆಯನ್ನು ಆರ್‌ಸಿಬಿ 200 ರನ್‌ಗೆ ಕಟ್ಟಿಹಾಕುವ ಅನಿವಾರ್ಯತೆಯಿತ್ತು. ಹೀಗಾಗಿ ಕೊನೆಯ ಓವರ್‌ನಲ್ಲಿ ಸಿಎಸ್‌ಕೆ ಗೆಲುವಿಗೆ 17 ರನ್‌ಗಳ ಅವಶ್ಯಕತೆ ಇತ್ತು. ಕ್ರೀಸ್‌ನಲ್ಲಿ ಎಂ.ಎಸ್.ಧೋನಿ ಮತ್ತು ರವೀಂದ್ರ ಜಡೇಜಾ ಇದ್ದರು. ಅದಾಗಲೇ ಜಡೇಜಾ ಬೌಂಡರಿ, ಸಿಕ್ಸರ್ ಮೂಲಕ ಅಪಾಯಕಾರಿಯಾಗಿದ್ದರು. ಯಶ್ ದಯಾಳ್ ಎಸೆದ ಅಂತಿಮ ಓವರ್‌ನ ಮೊದಲ ಎಸೆತವನ್ನು ಧೋನಿ ಸಿಕ್ಸರ್ ಬಾರಿಸುವ ಮೂಲಕ ಆರ್‌ಸಿಬಿಗೆ ನಡುಕ ಹುಟ್ಟಿಸಿದರು. ಆದರೆ 2ನೇ ಎಸೆತದಲ್ಲಿ ಧೋನಿ ಔಟಾದರು. ಇದು ಆರ್‌ಸಿಬಿಗೆ ದೊಡ್ಡ + ಪಾಯಿಂಟ್ ಆಯಿತು. 3ನೇ ಎಸೆತ ಡಾಟ್ ಬೌಲ್ ಆಗಿತ್ತು, ನಾಲ್ಕನೇ ಎಸೆತದಲ್ಲಿ ಕೇವಲ 1 ರನ್ ಬಂತು. ಈ ವೇಳೆಗೆ ಜಡೇಜಾ ಸಿಕ್ಸರ್ ಸಿಡಿಸಿ ಗೆಲಿವು ತಂದುಕೊಡುತ್ತಾರೆ ಅಂತಾನೇ ಎಲ್ಲರೂ ಭಾವಿಸಿದ್ದರು. ಆದರೆ ಯಶ್ ದಯಾಳ್ ಅದ್ಭುತ ಬೌಲಿಂಗ್ ಮಾಡುವ ಮೂಲಕ 5 ಮತ್ತು 6ನೇ ಎಸೆತಗಳನ್ನು ಡಾಟ್ ಮಾಡುವ ಮೂಲಕ ಆರ್‌ಸಿಬಿಗೆ ರಣರೋಚಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಚೆನ್ನೈ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಲಷ್ಟೇ ಶಕ್ತವಾಯಿತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.