RCB Win WPL 2024: ಐಪಿಎಲ್‌ನಲ್ಲಿ ಆರ್‌ಸಿಬಿ ಸಾಧಿಸಲಾಗದ್ದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರ ತಂಡ ಡಬ್ಲ್ಯುಪಿಎಲ್‌ನಲ್ಲಿ ಸಾಧಿಸಿದೆ. ನಿನ್ನೆ ರಾತ್ರಿ ನಡೆದ ಡಬ್ಲ್ಯುಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Womens Premier League 2024: ಖಡಕ್‌ ರೊಟ್ಟಿಯ ಹೊಡೆತಕ್ಕೆ ನಲುಗಿದ ಡೆಲ್ಲಿ ಕ್ಯಾಪಿಟಲ್ಸ್‌! ‌


ಡೆಲ್ಲಿ ನೀಡಿದ 114 ರನ್ ಗಳ ಗುರಿಯನ್ನು ಆರ್ ಸಿಬಿ 19.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಛಾಟಿ ಬೀಸಿ ಕಪ್ ಗೆದ್ದುಕೊಂಡಿತು. ಐಪಿಎಲ್‌ನಲ್ಲಿ ಇದುವರೆಗೂ ಆರ್‌ಸಿಬಿ (ಪುರುಷರ ತಂಡ) ಕಪ್ ಗೆದ್ದಿಲ್ಲ ಎಂಬುದು ಗೊತ್ತೇ ಇದೆ. ಆರ್‌ಸಿಬಿ ಮಹಿಳೆಯರ ತಂಡ ಡಬ್ಲ್ಯುಪಿಎಲ್ ಟ್ರೋಫಿ ಗೆದ್ದು 6 ಕೋಟಿ ರೂಪಾಯಿ ಬಹುಮಾನ ಪಡೆದುಕೊಂಡಿದೆ.


ಇದನ್ನೂ ಓದಿ-WPL 2024: ಐತಿಹಾಸಿಕ ಡಬ್ಲ್ಯೂಪಿಎಲ್ ಪ್ರಶಸ್ತಿ ಗೆದ್ದ ನಂತರ ಸ್ಮೃತಿ ಮಂಧಾನಾಗೆ ವಿರಾಟ್ ಕೊಹ್ಲಿಯಿಂದ ವೀಡಿಯೊ ಕರೆ


ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ರೂ.3 ಕೋಟಿ ಬಹುಮಾನವನ್ನು ಗೆದ್ದುಕೊಂಡಿತು. ಆರ್‌ಸಿಬಿ ಬ್ಯಾಟ್ಸ್‌ಮನ್ ಎಲ್ಲಿಸ್ ಪೆರ್ರಿ ಆರೆಂಜ್ ಕ್ಯಾಪ್ ಗೆದ್ದು 5 ಲಕ್ಷ ರೂಪಾಯಿ ಬಹುಮಾನ ಪಡೆದರು. ಇವರು ಫೈನಲ್ ಪಂದ್ಯದಲ್ಲಿ ಪೆರ್ರಿ 37 ಎಸೆತಗಳಲ್ಲಿ 35 ರನ್.. WPL ನ‌ ಒಂಬತ್ತು ಪಂದ್ಯಗಳಲ್ಲಿ 347 ರನ್ ಗಳಿಸಿ ಸರಾಸರಿ 69.40 ದಾಖಲಿಸಿದ್ದಾರೆ. ಅಂತಿಮ ಪಂದ್ಯದಲ್ಲಿ ಸ್ಮೃತಿ ಮಂಧಾನ 31 ರನ್, ಸೋಫಿ ಡಿವೈನ್ 32 ರನ್ ಮತ್ತು ರಿಚಾ ಘೋಷ್ 17 ರನ್ (ಔಟಾಗದೆ) ಗಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.