IPL 2024 ರ 6 ನೇ ಪಂದ್ಯ ಪಂಜಾಬ್ ಕಿಂಗ್ಸ್ ಹಾಗೂ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. 


COMMERCIAL BREAK
SCROLL TO CONTINUE READING

ಇಂಡಿಯನ್ ಪ್ರೀಮಿಯರ್ ಲೀಗ್ 6 ನೇ ಪಂದ್ಯದಲ್ಲಿ ಸೋಮವಾರ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫ್ಯಾಟ್ ಡು ಪ್ಲೆಸಿಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. 


ಮೊದಲ ಇನ್ನಿಂಗ್ಸ್ ನಲ್ಲಿ ಕಣಕ್ಕಿಳಿದ ಪಂಜಾಬ್ ಕಿಂಗ್ಸ್  ತಂಡ ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳಾಗಿ ಶಿಖರ್ ಧವನ್, ಜಾನಿ ಬೈಸ್ಟ್ರೋವ್ ಆಟವನ್ನು ಪ್ರಾರಂಭಿಸಿದರು. ಶಿಖರ್ ಧವನ್ 45(37), ಜಾನಿ ಬೈಸ್ಟ್ರೋವ್ 6(8), ಪ್ರಭಾಸಿಮ್ರಾನ್ ಸಿಂಗ್ 25(17), ಲಿಯಾಮ್ ಲಿವಿಂಗ್ಸ್ಟೋನ್17(13) , ಸ್ಯಾಮ್ ಕರ್ರಾನ್ 23(17), ಜಿತೇಶ್ ಶರ್ಮಾ 27 (20), ಶಶಾಂಕ್ ಸಿಂಗ್ 21(8), ಹರ್ಪ್ರೀತ್ ಬ್ರಾರ್  2(2) ರನ್ ಗಳಿಸಿದರು. 


ಇದನ್ನು ಓದಿ : ಲೂಸ್  ಮಾದಾ, ರಮ್ಯಾ ಜೋಡಿಯ ಸಿದ್ಲಿಂಗು ತೆರೆ ಕಂಡ 12  ವರ್ಷಗಳ ಬಳಿಕ, ಬರುತ್ತಿದೆ ಸಿದ್ಲಿಂಗು 2


ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಬೌಲಿಂಗ್ ಪ್ರಾರಂಭಿಸಿ ಗ್ಲೆನ್ ಮ್ಯಾಕ್ಸ್ವೆಲ್ 2 , ಅಲ್ಜಾರಿ ಜೋಸೆಫ್ 1, ಮೊಹಮ್ಮದ್ ಸಿರಾಜ್ 2 , ಯಶ್ ದಯಾಳ್  1 ವಿಕಟ್ ಗಳನ್ನು ಪಡೆದರು. 


IPL 2024 : ತವರಿನಲ್ಲಿ RCB ಮೊದಲ ಪಂದ್ಯ : ಪಂಜಾಬ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ


ವಿರಾಟ್ ಕೊಹ್ಲಿ ಫೋರ್ ಗಳ ಮೇಲೆ ಫೋರ್ ಬಾರಿಸುತ್ತಾ ತಮ್ಮ ಆಟವನ್ನು ಪ್ರಾರಂಭಿಸಿ, ಇಡೀ ಆಟದುದ್ದಕ್ಕೂ ತಮ್ಮ ತಾಳ್ಮೆಯುತ ಆಟವನ್ನು ತೋರ್ಪಡಿಸಿ, 49 ಎಸೆತಗಳಲ್ಲಿ 77 ರನ್ ಗಳನ್ನು ಹೊಡೆದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ 10 ಎಸೆತಗಳಲ್ಲಿ 28 ರನ್ ಗಳಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭರ್ಜರಿ ಗೆಲುವನ್ನು ತಂದುಕೊಟ್ಟರು. 


ತವರಿನಲ್ಲಿ ಮೊದಲ ಗೆಲುವನ್ನು ಪಡೆಯುವ ಮೂಲಕ ಬೆಂಗಳೂರು ತಂಡ ವಿಕ್ಟರಿ ಹೊಡೆದಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.