ರಿಲಯನ್ಸ್ ರಿಟೇಲ್ ನ `ಪರ್ಫಾರ್ಮ್ಯಾಕ್ಸ್` ಭಾರತೀಯ ಫುಟ್ಬಾಲ್ ತಂಡಕ್ಕೆ ಅಧಿಕೃತ ಕಿಟ್ ಪ್ರಾಯೋಜಕ
ರಿಲಯನ್ಸ್ ರಿಟೇಲ್‌ನ ವ್ಯಾಪಕ ಶ್ರೇಣಿಯ ಫ್ಯಾಷನ್ ಮತ್ತು ಜೀವನಶೈಲಿಯ ಪ್ರತೀಕವಾಗಿರುವ ಉನ್ನತ-ಕಾರ್ಯಕ್ಷಮತೆಯ ಮತ್ತು ತಾಂತ್ರಿಕವಾಗಿ ಸುಧಾರಿತ ಕ್ರೀಡಾ ಉಡುಪುಗಳ ಬ್ರ್ಯಾಂಡ್ ಆಗಿರುವ `ಪರ್ಫಾರ್ಮ್ಯಾಕ್ಸ್`, ಭಾರತೀಯ ಫುಟ್ಬಾಲ್ ತಂಡದ ಅಧಿಕೃತ ಕಿಟ್ ಮತ್ತು ಸರಕುಗಳ ಪ್ರಾಯೋಜಕರಾಗಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ನೊಂದಿಗೆ (ಎಐಎಫ್‌ಎಫ್) ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.
ಮುಂಬೈ, ಸೆಪ್ಟೆಂಬರ್ 07, 2023: ರಿಲಯನ್ಸ್ ರಿಟೇಲ್‌ನ ವ್ಯಾಪಕ ಶ್ರೇಣಿಯ ಫ್ಯಾಷನ್ ಮತ್ತು ಜೀವನಶೈಲಿಯ ಪ್ರತೀಕವಾಗಿರುವ ಉನ್ನತ-ಕಾರ್ಯಕ್ಷಮತೆಯ ಮತ್ತು ತಾಂತ್ರಿಕವಾಗಿ ಸುಧಾರಿತ ಕ್ರೀಡಾ ಉಡುಪುಗಳ ಬ್ರ್ಯಾಂಡ್ ಆಗಿರುವ 'ಪರ್ಫಾರ್ಮ್ಯಾಕ್ಸ್', ಭಾರತೀಯ ಫುಟ್ಬಾಲ್ ತಂಡದ ಅಧಿಕೃತ ಕಿಟ್ ಮತ್ತು ಸರಕುಗಳ ಪ್ರಾಯೋಜಕರಾಗಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ನೊಂದಿಗೆ (ಎಐಎಫ್‌ಎಫ್) ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.
ಬಹು-ವರ್ಷಗಳ ಈ ಪಾಲುದಾರಿಕೆಯು, ಪ್ರಮುಖ ಸ್ವದೇಶಿ ಕ್ರೀಡಾ ಬ್ರಾಂಡ್ ಆಗಿರುವ ಪರ್ಫಾರ್ಮ್ಯಾಕ್ಸ್‌ಗೆ ಆಟದ ಎಲ್ಲಾ ಸ್ವರೂಪಗಳಲ್ಲಿ ಕಿಟ್‌ಗಳನ್ನು ತಯಾರಿಸಲು ವಿಶೇಷ ಹಕ್ಕುಗಳನ್ನು ನೀಡಿದೆ. ಜತೆಗೆ ಎಐಎಫ್ಎಫ್ನ ಎಲ್ಲ ತಂಡಗಳ ಪಂದ್ಯ, ಪ್ರಯಾಣ ಮತ್ತು ಅಭ್ಯಾಸದ ಉಡುಗೆಗಳಿಗೆ ಏಕೈಕ ಪೂರೈಕೆದಾರರನ್ನಾಗಿ ಮಾಡಿದೆ. ಪುರುಷ, ಮಹಿಳಾ ಮತ್ತು ಯುವ ತಂಡಗಳು ಇದರಲ್ಲಿ ಒಳಗೊಂಡಿವೆ. ಇದರೊಂದಿಗೆ ಹೆಚ್ಚುವರಿಯಾಗಿ, ಮರ್ಚಂಡೈಸ್ ಪ್ರಾಯೋಜಕರಾಗಿ ಪರ್ಫಾರ್ಮ್ಯಾಕ್ಸ್, ಈ ಉತ್ಪನ್ನಗಳನ್ನು ತಯಾರಿಸುವ ಮತ್ತು ರಿಟೇಲ್ ಮಾರಾಟ ಮಾಡುವ ಹಕ್ಕುಗಳನ್ನು ಸಹ ಪಡೆದುಕೊಂಡಿದೆ.
ಸೆಪ್ಟೆಂಬರ್ 7 ಮತ್ತು 10ರ ನಡುವೆ ಥಾಯ್ಲೆಂಡ್ನಲ್ಲಿ ನಡೆಯಲಿರುವ 49ನೇ ಕಿಂಗ್ಸ್ ಕಪ್-2023ರ ಸಮಯದಲ್ಲಿ ಬ್ಲೂ ಟೈಗರ್ಸ್ ಖ್ಯಾತಿಯ ಭಾರತೀಯ ಫುಟ್ಬಾಲ್ ತಂಡ ಈ ಹೊಸ ಕಿಟ್ನೊಂದಿಗೆ ಮೊದಲ ಬಾರಿ ಕಣಕ್ಕಿಳಿಯಲಿದೆ. ಭಾರತ ಫುಟ್ಬಾಲ್ ತಂಡ ಇಂದು ಇರಾಕ್ ತಂಡವನ್ನು ಎದುರಿಸುವ ಮೂಲಕ ಪಂದ್ಯಾವಳಿಯಲ್ಲಿ ತನ್ನ ಅಭಿಯಾನ ಆರಂಭಿಸಲು ಸಜ್ಜಾಗಿದೆ.
ಇದನ್ನೂ ಓದಿ: ಕರ್ನಾಟಕ ಪ್ರಜ್ಞಾವಂತರ ನಾಡು: ಜಾತಿ ದೌರ್ಜನ್ಯಗಳಿಗೆ ಕಡಿವಾಣ ಅತ್ಯಗತ್ಯ: ಸಿಎಂ ಸಿದ್ದರಾಮಯ್ಯ
ಪಾಲುದಾರಿಕೆಯ ಕುರಿತು ಮಾತನಾಡಿದ ರಿಲಯನ್ಸ್ ರಿಟೇಲ್ - ಫ್ಯಾಶನ್ ಮತ್ತು ಲೈಫ್‌ಸ್ಟೈಲ್‌ನ ಅಧ್ಯಕ್ಷ ಹಾಗೂ ಸಿಇಒ ಅಖಿಲೇಶ್ ಪ್ರಸಾದ್, 'ಎಐಎಫ್‌ಎಫ್‌ನೊಂದಿಗೆ ನಮ್ಮ ಒಡನಾಟವನ್ನು ಘೋಷಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ. ಭಾರತದಲ್ಲಿ ಫುಟ್ಬಾಲ್ ಆಟ ಉತ್ತಮ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಮತ್ತು ಮುಂಬರುವ ವರ್ಷಗಳಲ್ಲಿ ಭಾರತೀಯ ಫುಟ್ಬಾಲ್ ತಂಡವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುವುದನ್ನು ನಾವು ನೋಡಲಿದ್ದೇವೆ. ಈ ಪಾಲುದಾರಿಕೆಯು, ಪರ್ಫಾರ್ಮ್ಯಾಕ್ಸ್ ಮೂಲಕ ಭಾರತದಲ್ಲಿ ಕ್ರೀಡೆಗಳನ್ನು ಎಲ್ಲರಿಗೂ ಸುಲಭಸಾಧ್ಯವಾಗಿಸುವ ನಮ್ಮ ಆಶಯಕ್ಕೆ ಅನುಗುಣವಾಗಿದೆ' ಎಂದರು.
ದೇಶದ ಎಲ್ಲಾ ಮೂಲೆಗಳಿಂದ ಕೋಟ್ಯಂತರ ಭಾವೋದ್ರಿಕ್ತ ಅಭಿಮಾನಿಗಳನ್ನು ಆಕರ್ಷಿಸಲು ಈ ಸುಂದರವಾದ ಆಟವು ಗಡಿಗಳು ಮತ್ತು ಜನಸಂಖ್ಯಾಶಾಸ್ತ್ರವನ್ನು ಮೀರಿ ಜನಸಾಮಾನ್ಯರ ಕ್ರೀಡೆಯಾಗಿದೆ. ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಮತ್ತು ರಿಲಯನ್ಸ್ ಫೌಂಡೇಶನ್ ಯಂಗ್ ಚಾಂಪ್ಸ್ (ಆರ್ಎಫ್ವೈಸಿ) ಅಕಾಡೆಮಿ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ-ಗುಣಮಟ್ಟದ ಟೂರ್ನಿಗಳು ಮತ್ತು ಸೌಲಭ್ಯಗಳು ಪ್ರಸ್ತುತ ಭಾರತದಲ್ಲಿ ಸಕ್ರಿಯವಾಗಿವೆ. ಫುಟ್‌ಬಾಲ್ ಹೆಚ್ಚು ಯುವಕರನ್ನು ಆಕರ್ಷಿಸಲು ಮತ್ತು ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲು ಸಿದ್ಧವಾಗಿದೆ. ಎಐಎಫ್ಎಫ್ ಮತ್ತು ಪರ್ಫಾರ್ಮ್ಯಾಕ್ಸ್ ನಡುವಿನ ಈ ಪಾಲುದಾರಿಕೆಯು ಭಾರತೀಯ ಕ್ರೀಡೆಗಳನ್ನು ಜಾಗತಿಕ ಪ್ರಾಮುಖ್ಯತೆಗೆ ಏರಿಸುವ ಬ್ರ್ಯಾಂಡ್‌ನ ಅಚಲವಾದ ಬದ್ಧತೆಗೆ ಸಾಕ್ಷಿಯಾಗಿದೆ.
'ನಮ್ಮ ಹೊಸ ಕಿಟ್ ಪಾಲುದಾರರಾದ ಪರ್ಫಾರ್ಮ್ಯಾಕ್ಸ್ಗೆ ಭಾರತೀಯ ಫುಟ್‌ಬಾಲ್ ಕುಟುಂಬಕ್ಕೆ ಸ್ವಾಗತ ಕೋರುತ್ತೇವೆ. ಆಟಗಾರರು ಮತ್ತು ತಂಡಗಳು ಹೊಸ ಕಿಟ್ ಅನ್ನು ಇಷ್ಟಪಡುತ್ತಾರೆ ಮತ್ತು ಮೈದಾನದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಸ್ಫೂರ್ತಿ ಪಡೆಯುತ್ತಾರೆ ಎಂದು ನನಗೆ ವಿಶ್ವಾಸವಿದೆ. ಎಐಎಫ್ಎಫ್ ಮತ್ತು ಪರ್ಫಾರ್ಮ್ಯಾಕ್ಸ್ ನಡುವಿನ ಈ ಹೊಸ ಪಾಲುದಾರಿಕೆಗೆ ಎಲ್ಲಾ ಯಶಸ್ಸನ್ನು ಹಾರೈಸುತ್ತೇನೆ' ಎಂದು ಎಐಎಫ್ಎಫ್‌ನ ಪ್ರಧಾನ ಕಾರ್ಯದರ್ಶಿ ಡಾ. ಶಾಜಿ ಪ್ರಭಾಕರನ್ ಹೇಳಿದರು.
ಜಾಗತಿಕವಾಗಿ ಸಂಚಲನವನ್ನು ಸೃಷ್ಟಿಸುವ ಮೊದಲ ಭಾರತೀಯ ಕ್ರೀಡಾ ಉಡುಪುಗಳ ಬ್ರ್ಯಾಂಡ್ ಆಗುವ ಗುರಿಯನ್ನು ಪರ್ಫಾರ್ಮ್ಯಾಕ್ಸ್ ಹೊಂದಿದೆ. ಓಟ, ತರಬೇತಿ, ರಾಕೆಟ್ ಕ್ರೀಡೆಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ಅನೇಕ ಕ್ರೀಡಾ ವಿಭಾಗಗಳಿಗೆ ಅನುಗುಣವಾಗಿ ಉಡುಪುಗಳು, ಶೂಗಳು ಮತ್ತು ಇತರ ಪರಿಕರಗಳನ್ನು ಸೇರಿದಂತೆ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಪರ್ಫಾರ್ಮ್ಯಾಕ್ಸ್ ನೀಡುತ್ತದೆ. ಕಳೆದ ಒಂದು ವರ್ಷದಲ್ಲಿ ಜಸ್ಪ್ರೀತ್ ಬುಮ್ರಾ, ರವಿ ದಹಿಯಾ, ಹರ್ಮಿಲನ್ ಕೌರ್, ಮನು ಭಾಕರ್, ರಿಧಿ ಫೋರ್, ಯೋಗೇಶ್ ಕಥುನಿಯಾ ಮತ್ತು ಪ್ರಮೋದ್ ಭಗತ್ ಅವರಂಥ ಹಲವಾರು ಕ್ರೀಡಾಪಟುಗಳೊಂದಿಗೆ ಪರ್ಫಾರ್ಮ್ಯಾಕ್ಸ್ ಪಾಲುದಾರಿಕೆ ಹೊಂದಿದೆ.
ಇದನ್ನೂ ಓದಿ: ನಟ ಪ್ರಕಾಶ್ ರಾಜ್ ಅಪ್ಪ-ಅಮ್ಮನಿಗೆ ಹುಟ್ಟಿದ್ದಾನಾ ಅನ್ನೋದಕ್ಕೆ ಗ್ಯಾರಂಟಿ ಏನು?- ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
ಪರ್ಫಾರ್ಮ್ಯಾಕ್ಸ್ ಮತ್ತು ಟ್ರೆಂಡ್ಸ್ ಪಾದರಕ್ಷೆಗಳ ಸಿಇಒ ನಿತೇಶ್ ಕುಮಾರ್, 'ನಮ್ಮ ಗ್ರಾಹಕರಿಗೆ ಆದ್ಯತೆಯ ಆಕ್ಟಿವ್ವೇರ್ ಬ್ರ್ಯಾಂಡ್ ಆಗಿ ಪರ್ಫಾರ್ಮ್ಯಾಕ್ಸ್ ಅನ್ನು ರೂಪಿಸಲು ನಾವು ಯೋಜಿಸುವ ಕೆಲವು ಉಪಕ್ರಮಗಳ ಸರಣಿಯಲ್ಲಿ ಈ ಪಾಲುದಾರಿಕೆಯೂ ಒಂದಾಗಿದೆ' ಎಂದು ಹೇಳಿದರು.
ಪರ್ಫಾರ್ಮ್ಯಾಕ್ಸ್ ಆಕ್ಟಿವ್‌ವೇರ್ ಭಾರತದಲ್ಲಿ ಪ್ರಸಕ್ತ 1,500ಕ್ಕೂ ಅಧಿಕ ಸ್ಟೋರ್‌ಗಳನ್ನು ಹೊಂದಿದೆ. ಜತೆಗೆ, ಬ್ರಾಂಡ್ ಡಿಜಿಟಲ್ ವಾಣಿಜ್ಯ ವೇದಿಕೆಗಳಾದ ಅಜಿಯೋ ಮತ್ತು ಜಿಯೋಮಾರ್ಟ್ನಲ್ಲೂ ಲಭ್ಯವಿದೆ. ಅಧಿಕೃತ ಮತ್ತು ಫ್ಯಾನ್ ಮರ್ಚಂಡೈಸ್ ಕೂಡ ಪರ್ಫಾರ್ಮ್ಯಾಕ್ಸ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳಲ್ಲಿ ಮತ್ತು ದೇಶಾದ್ಯಂತ ವಿವಿಧ ರಿಟೇಲ್ ಪಾಲುದಾರ ಅಂಗಡಿಗಳಲ್ಲಿ ಲಭ್ಯವಿರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.