Cricketer Retirement: ನಿರಂತರ ಟೀಕೆ, ಸಮಿತಿಯಿಂದ ನಿರ್ಲಕ್ಷ್ಯ: ಬೇಸರಗೊಂಡು ನಿವೃತ್ತಿಗೆ ಮುಂದಾದ ವಿರಾಟ್ ನೆಚ್ಚಿನ ಕ್ರಿಕೆಟಿಗ!
Pakistan Cricketer Haris Rauf Retirement: ಏಕದಿನ ವಿಶ್ವಕಪ್ ಮುಗಿದ ಕೆಲವೇ ದಿನಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಬೇಕಿತ್ತು. ವೇಗಿ ಹ್ಯಾರಿಸ್ ರೌಫ್ ಈ ಸರಣಿಯಲ್ಲಿ ಆಡಲು ನಿರಾಕರಿಸಿದ್ದರು. ಇದರ ನಂತರ ಆಸ್ಟ್ರೇಲಿಯಾದ T20 ಲೀಗ್ BBLನಲ್ಲಿ ಆಡಲು ಪ್ರಾರಂಭಿಸಿದ್ದರು.
Pakistan Cricketer Haris Rauf Retirement: ಪಾಕಿಸ್ತಾನಿ ಕ್ರಿಕೆಟ್ ತಂಡವು ಇತ್ತೀಚೆಗೆ ಬದಲಾವಣೆಗಳ ಅವಧಿಯನ್ನು ಅನುಭವಿಸುತ್ತಿದೆ. ಭಾರತದಲ್ಲಿ ಆಯೋಜನೆಗೊಂಡಿದ್ದ ODI ವಿಶ್ವಕಪ್-2023ರಲ್ಲಿ ಕಳಪೆ ಪ್ರದರ್ಶನದ ನಂತರ, ಬಾಬರ್ ಅಜಮ್ ಎಲ್ಲಾ ಸ್ವರೂಪಗಳ ನಾಯಕತ್ವವನ್ನು ತೊರೆದರು. ಅದಾದ ಬಳಿಕ ಟಿ20 ತಂಡದ ನಾಯಕತ್ವವನ್ನು ಶಾಹೀನ್ ಶಾ ಆಫ್ರಿದಿಗೆ ನೀಡಲಾಯಿತು. ಇದೀಗ ಪಾಕ್ ತಂಡದ ಮತ್ತೋರ್ವ ಆಟಗಾರ ಹ್ಯಾರಿಸ್ ರೌಫ್ ನಿವೃತ್ತಿ ಘೋಷಿಸುತ್ತಾರೆ ಎಂದು ವರದಿಗಳು ಹೇಳುತ್ತಿವೆ.
ಇದನ್ನೂ ಓದಿ: ಭವ್ಯ ಶ್ರೀರಾಮ ಮಂದಿರದ ಗರ್ಭಗುಡಿಯ ಚಿನ್ನದ ಬಾಗಿಲು ಪೂರ್ಣ: ಎಷ್ಟೊಂದು ಅದ್ಭುತವಾಗಿದೆ ನೋಡಿ
ಏಕದಿನ ವಿಶ್ವಕಪ್ ಮುಗಿದ ಕೆಲವೇ ದಿನಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಬೇಕಿತ್ತು. ವೇಗಿ ಹ್ಯಾರಿಸ್ ರೌಫ್ ಈ ಸರಣಿಯಲ್ಲಿ ಆಡಲು ನಿರಾಕರಿಸಿದ್ದರು. ಇದರ ನಂತರ ಆಸ್ಟ್ರೇಲಿಯಾದ T20 ಲೀಗ್ BBLನಲ್ಲಿ ಆಡಲು ಪ್ರಾರಂಭಿಸಿದ್ದರು. ಇದೀಗ ರವೂಫ್ ನಿರಂತರ ಟೀಕೆಗಳಿಂದ ಅಸಮಾಧಾನಗೊಂಡಿದ್ದು, ಶೀಘ್ರದಲ್ಲೇ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ ಎಂದು ಕೆಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ.
ಪಾಕಿಸ್ತಾನ ತಂಡದ ನಿರ್ದೇಶಕ ಮೊಹಮ್ಮದ್ ಹಫೀಜ್ ಮತ್ತು ಮುಖ್ಯ ಆಯ್ಕೆಗಾರ ವಹಾಬ್ ರಿಯಾಜ್ ಕೆಲವು ದಿನಗಳ ಹಿಂದೆ ಹ್ಯಾರಿಸ್ ರೌಫ್’ಗೆ ಛೀಮಾರಿ ಹಾಕಿದ್ದರು. ಇನ್ನೊಂದೆಡೆ, ರೌಫ್ ಟಿ20ಯಲ್ಲಿ ಆಡಲು ಸಿದ್ಧರಾಗಿದ್ದರೂ ಸಹ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಅಧಿಕಾರಿಗಳು ಅವರನ್ನು ಪರಿಗಣಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅಯೋಧ್ಯೆ ಹೋಗ್ತಾರ ಧೋನಿ..? ‘ರಾಮಲಲ್ಲಾ ಪಟ್ಟಾಭಿಷೇಕ’ದ ಆಹ್ವಾನ ಬರುತ್ತಿದ್ದಂತೆ ಮಾಹಿ ಹೇಳಿದ್ದೇನು?
ಇದೆಲ್ಲದರಿಂದ ಬೇಸರಗೊಂಡಿರುವ 30 ವರ್ಷದ ಹ್ಯಾರಿಸ್ ರೌಫ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಬಹುದು ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಇತರ ದೇಶಗಳ ಟಿ20 ಲೀಗ್’ಗಳಲ್ಲಿ ಆಡುವುದನ್ನು ಮುಂದುವರಿಸಲಿದ್ದಾರಂತೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ