Ricky Ponting Video: ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತ ರಿಕಿ ಪಾಂಟಿಂಗ್
Ricky Ponting Video: ರಿಕಿ ಪಾಂಟಿಂಗ್ ಅವರು ಮಾನಸಿಕವಾಗಿ ತುಂಬಾ ಬಲಿಷ್ಠ ವ್ಯಕ್ತಿಯಾಗಿದ್ದಾರೆ ಮತ್ತು ಅವರ ಸಂಪೂರ್ಣ ವೃತ್ತಿಜೀವನದಲ್ಲಿ ಅವರು ಎಂದಿಗೂ ಭಾವನಾತ್ಮಕವಾಗಿ ಕಾಣಿಸಿಕೊಂಡಿಲ್ಲ. ಆಸ್ಟ್ರೇಲಿಯಾ ಪರ 1999, 2003, 2007ರಲ್ಲಿ ವಿಶ್ವಕಪ್ ಗೆದ್ದು ಬೀಗಿದ್ದ ರಿಕಿ ಪಾಂಟಿಂಗ್ ಅವರಂಥ ಬಲಿಷ್ಠ ವ್ಯಕ್ತಿ ಈ ರೀತಿ ಅಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
Ricky Ponting Video: ಆಸ್ಟ್ರೇಲಿಯಕ್ಕೆ ಮೂರು ಬಾರಿ ವಿಶ್ವಕಪ್ ಗೆದ್ದುಕೊಟ್ಟ ನಾಯಕ ರಿಕಿ ಪಾಂಟಿಂಗ್ (Ricky Ponting) ತಮ್ಮ 47ನೇ ವಯಸ್ಸಿನಲ್ಲಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ. ಆದರೆ, ರಿಕಿ ಪಾಂಟಿಂಗ್ ಅವರ ಈ ದುಃಖದ ಹಿಂದಿನ ಕಾರಣ ತಿಳಿದರೆ ಇಂತಹವರ ಹೃದಯವೂ ಭಾರವಾಗುತ್ತದೆ.
ರಿಕಿ ಪಾಂಟಿಂಗ್ ಅವರು ಮಾನಸಿಕವಾಗಿ ತುಂಬಾ ಬಲಿಷ್ಠ ವ್ಯಕ್ತಿಯಾಗಿದ್ದಾರೆ ಮತ್ತು ಅವರ ಸಂಪೂರ್ಣ ವೃತ್ತಿಜೀವನದಲ್ಲಿ ಅವರು ಎಂದಿಗೂ ಭಾವನಾತ್ಮಕವಾಗಿ ಕಾಣಿಸಿಕೊಂಡಿಲ್ಲ. ಆಸ್ಟ್ರೇಲಿಯಾ ಪರ 1999, 2003, 2007ರಲ್ಲಿ ವಿಶ್ವಕಪ್ ಗೆದ್ದು ಬೀಗಿದ್ದ ರಿಕಿ ಪಾಂಟಿಂಗ್ (Ricky Ponting) ಅವರಂಥ ಬಲಿಷ್ಠ ವ್ಯಕ್ತಿ ಮಗುವಿನಂತೆ ಅಳುತ್ತಿರುವುದನ್ನು ಕಂಡು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ.
ಇದನ್ನೂ ಓದಿ- Shane Warne: ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರ ದಾಖಲೆಗಳು ಮತ್ತು ಸಾಧನೆಗಳ ಸಣ್ಣ ಝಲಕ್
ರಿಕಿ ಪಾಂಟಿಂಗ್ ಕಂಬನಿಯ ಹಿಂದಿನ ಕಾರಣ:
ಇತ್ತೀಚೆಗಷ್ಟೇ ಲೆಜೆಂಡರಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ (Shane Warne) ಅವರ ಹಠಾತ್ ಸಾವಿನಿಂದಾಗಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಆಘಾತಕ್ಕೊಳಗಾಗಿದ್ದಾರೆ. ಕಳೆದ ವಾರ ಹೃದಯಾಘಾತದಿಂದ ಶೇನ್ ವಾರ್ನ್ ನಿಧನರಾಗಿದ್ದರು. ರಿಕಿ ಪಾಂಟಿಂಗ್ ಅವರು ಶೇನ್ ವಾರ್ನ್ ಅವರನ್ನು ಎಷ್ಟು ಪ್ರೀತಿಸುತ್ತಿದ್ದಾರೆಂದರೆ, ಅವರ ಧ್ವನಿಯನ್ನು ಕೇಳಿದ ನಂತರ ಅವರು ಟಿವಿಯನ್ನು ಆಫ್ ಮಾಡುತ್ತಾರೆ, ಏಕೆಂದರೆ ಅವರ ಸಹ ಆಟಗಾರರು ಇನ್ನಿಲ್ಲ ಎಂದು ಅವರು ಇನ್ನೂ ನಂಬುವುದಿಲ್ಲ. ಶೇನ್ ವಾರ್ನ್‌ಗೆ ಭಾವನಾತ್ಮಕ ವಿದಾಯ ಹೇಳಿದ ರಿಕಿ ಪಾಂಟಿಂಗ್ ಅವರು ತಮ್ಮ ಆತ್ಮೀಯ ಗೆಳೆಯನ ಅನಿರೀಕ್ಷಿತ ಸಾವಿನ ದುಃಖದಿಂದ ಇನ್ನೂ ಚೇತರಿಸಿಕೊಂಡಿಲ್ಲ ಎಂದು ಹೇಳಿದರು.
ಸಂದರ್ಶನವೊಂದರಲ್ಲಿ ರಿಕಿ ಪಾಂಟಿಂಗ್ ಇದ್ದಕ್ಕಿದ್ದಂತೆ ಮಗುವಿನಂತೆ ಅಳಲು ಪ್ರಾರಂಭಿಸಿದರು. ರಿಕಿ ಪಾಂಟಿಂಗ್ ಅವರು ಐಸಿಸಿ ರಿವ್ಯೂನಲ್ಲಿ, ತಾನು ಶೇನ್ ವಾರ್ನ್‌ಗೆ ಒಂದು ವಿಷಯವನ್ನು ಹೇಳಲು ಸಾಧ್ಯವೇ ಆಗಲಿಲ್ಲ. 'ನಾನು ಅವನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಹೇಳಲು ಸಾಧ್ಯವಾಗಲಿಲ್ಲ' ಎಂದರು. 'ನಾನು ಅವರ ಬಗ್ಗೆ ಮಾತನಾಡಬೇಕಾದಾಗ ಅಥವಾ ಅವರೊಂದಿಗೆ ನನ್ನ ಪ್ರಯಾಣದ ಅನುಭವವನ್ನು ಹಂಚಿಕೊಳ್ಳಲು ನನ್ನ ಬಳಿ ಪದಗಳಿಲ್ಲ. ಇಂದಿಗೂ ಟೀವಿಯಲ್ಲಿ ಶ್ರದ್ಧಾಂಜಲಿ ನೋಡುವಾಗ ಅವರ ಧ್ವನಿ ಕೇಳಿದಾಗ ಟಿವಿ ಆಫ್ ಮಾಡುತ್ತೇನೆ. ಕಳೆದ ಕೆಲವು ದಿನಗಳು ಕಠಿಣವಾಗಿದ್ದರೂ ಹೆಚ್ಚಿನ ಗಮನ ನೀಡಬೇಕಾದ ಬಗ್ಗೆ ಜಾಗೃತಿ ಮೂಡಿಸಿದೆ. ಇದು ನಮಗೆಲ್ಲ ಪಾಠ ಎಂದರು. Shane Warne ಮರಣೋತ್ತರ ಪರೀಕ್ಷೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ, ಸಾವಿಗೆ ನಿಜವಾದ ಕಾರಣ ಇದು!
ವಿಶೇಷ ವಿಷಯವೆಂದರೆ ಆಸಿಸ್ ಕ್ರಿಕೆಟ್ ದಿಗ್ಗಜರಾದ ರಿಕಿ ಪಾಂಟಿಂಗ್ ಮತ್ತು ಶೇನ್ ವಾರ್ನ್ ಮೆಲ್ಬೋರ್ನ್‌ನಲ್ಲಿ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದರು ಮತ್ತು ಸಾಂದರ್ಭಿಕವಾಗಿ ಒಟ್ಟಿಗೆ ಗಾಲ್ಫ್ ಆಡುತ್ತಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.