ನವದೆಹಲಿ: ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ಗೆ ತಂಡಗಳು ಸಜ್ಜಾಗುತ್ತಿರುವಾಗ ತಂಡವನ್ನು ಆಯ್ಕೆ ಮಾಡುವುದು ಆಯ್ಕೆ ಮಂಡಳಿಗೆ ನಿಜಕ್ಕೂ ತಲೆ ಬಿಸಿಯಾಗುತ್ತದೆ.


COMMERCIAL BREAK
SCROLL TO CONTINUE READING

ಇಂತಹ ಸಂದರ್ಭದಲ್ಲಿ ಈಗ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ತವಕದಲ್ಲಿರುವ ಆಸೀಸ್ ತಂಡವು ಈಗ ವಿಶ್ವಕಪ್ ಗೆ ತಂಡವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಯೋಚಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಆಸೀಸ್ ತಂಡದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.


ಇದನ್ನೂ ಓದಿ: Ind vs WI : ಇಂದು ಟೀಂ ಇಂಡಿಯಾಗೆ ಎಂಟ್ರಿ ನೀಡಲಿದ್ದಾನೆ ಈ ಮಾರಕ ಬ್ಯಾಟ್ಸ್‌ಮನ್!


ಗಮನಾರ್ಹವಾಗಿ, ಸಿಂಗಾಪುರ ಮೂಲದ ಕ್ರಿಕೆಟಿಗ ಟಿಮ್ ಡೇವಿಡ್, ಈ ವರ್ಷ T20 ಸ್ವರೂಪದಲ್ಲಿ 1002 ರನ್ ಗಳಿಸುವ ಮೂಲಕ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.183.51 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿರುವ ಈ ಆಟಗಾರ ಈ ವರ್ಷದ ಐಪಿಎಲ್ ನಲ್ಲಿ 200ಕ್ಕೂ ಅಧಿಕ ಸ್ಟ್ರೈಕ್ ರೇಟ್ ಹೊಂದಿದ್ದಾರೆ."ನಾನು ಆಯ್ಕೆಗಾರನಾಗಿದ್ದರೆ, ನನ್ನ ತಂಡದಲ್ಲಿ ಅಂತಹ ವ್ಯಕ್ತಿಯನ್ನು ಹೊಂದಲು ನಾನು ಇಷ್ಟಪಡುತ್ತೇನೆ.ಅವರು ಅಂತಹ ಮ್ಯಾಚ್-ವಿನ್ನರ್... ಅವರು ನಿಜವಾಗಿಯೂ ನಿಮಗೆ ವಿಶ್ವಕಪ್ ಗೆಲ್ಲುವ ಆಟಗಾರರಾಗಿದ್ದಾರೆ' ಎಂದು ಹೇಳಿದ್ದಾರೆ.


ಇದನ್ನೂ ಓದಿ: ​IND vs WI : ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಎಂಟ್ರಿ ನೀಡಿದ ಈ ಮಾರಣಾಂತಿಕ ಆಲ್‌ರೌಂಡರ್!


ಟೀಮ್ ಡೇವಿಡ್ ಆಸ್ಟ್ರೇಲಿಯದ ದಿವಂಗತ ಆಲ್‌ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಅವರ ಆಟವನ್ನು ನೆನಪಿಸುತ್ತಾರೆ, ಕಳೆದ ಎರಡು ವರ್ಷಗಳಲ್ಲಿ ಆಸೀಸ್ ಪರವಾಗಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.