Rinku Singh Viral Post: ರಿಂಕು ಸಿಂಗ್‌.. ಈ ಹೆಸರಿಗೆ ವಿಶೇಷ ಪರಿಚಯದ ಅಗತ್ಯವೇನು ಇಲ್ಲ. ಟೀಂ ಇಂಡಿಯಾದ ಸ್ಟಾರ್‌ ಆಟಗಾರರಲ್ಲಿ ರಿಂಕು ಸಿಂಗ್‌ ಕೂಡ ಒಬ್ಬರು. ಕಳೆದ ಭಾರಿ ಐಪಿಎಲ್‌ನಲ್ಲಿ 55 ಲಕ್ಷಕ್ಕೆ ಕೊಲ್ಕತ್ತಾ ತಂಡದ ಪಾಲಾಗಿದ್ದ ರಿಂಕು ಸಿಂಗ್‌ ಈ ಭಾರಿ ಯಾರೂ ಕೂಡ ಊಹಿಸಿಯೂ ಇರದ ಮೊತ್ತಕ್ಕೆ ಸೇಲ್‌ ಆಗಿದ್ದಾರೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ರಿಂಕು ಸಿಂಗ್‌ ಅವರನ್ನು 13 ಕೋಟಿ ರೂ. ನೀಡುವ ಮೂಲಕ ತಮ್ಮ ತಂಡದಲ್ಲಿ ಉಳಿಸಿಕೊಂಡಿದೆ. 


COMMERCIAL BREAK
SCROLL TO CONTINUE READING

ತಾವು ಕೊಲ್ಕತ್ತಾ ತಂಡದಲ್ಲಿ ಆಯ್ಕೆಯಾದ ವಿಷಯವನ್ನು ಸ್ವತಃ ರಿಂಕು ಸಿಂಗ್‌ ಅವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ, ಸಂತಸದ ಸುದ್ದಿಯೊಂದನ್ನು ರಿಂಕು ಸಿಂಗ್‌ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪೋಸ್ಟ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಇದನ್ನು ನೋಡಿದ ರಿಂಕು ಸಿಂಗ್‌ ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ. 


ಬಾಲಿವುಡ್ ಕಿಂಗ್ ಶಾರುಖ್ ಖಾನ್ ಇಂದು ತಮ್ಮ 59 ನೇ ಹುಟ್ಟುಹಬ್ಬವನ್ನು ಇತ್ತೀಚೆಗಷ್ಟೆ ಆಚರಿಸಿಕೊಂಡಿದ್ದಾರೆ. KKR ಸಹ-ಮಾಲೀಕ ಶಾರುಖ್ ಖಾನ್ ಅವರ ಜನ್ಮದಿನದಂದು ರಿಂಕು ಸಿಂಗ್ ಕೂಡ ಶುಭಾಶಯ ಕೋರಿದ್ದಾರೆ. "ನೀವು ಕೂಡ ಇವರನ್ನು ಪ್ರೀತಿಸುತ್ತೀರಾ..? ನಾನು ಮಾತ್ರ ತುಂಬಾ ಪ್ರೀತಿಸುತ್ತೇನೆ..." ಎಂದು ರಿಂಕು ಸಿಂಗ್‌ ಶಾರುಕ್‌ ಖಾನ್‌ ಅವರೊಂದಿಗಿನ ಫೋಟೋವನ್ನು ಪೋಸ್ಟ್‌ ಮಾಡಿದ್ದಾರೆ. ಸದ್ಯ ಇದೀಗ ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.


"ಪ್ರಪಂಚದಾದ್ಯಂತ ಯಾವಾಗಲೂ ಪ್ರೀತಿ ಮತ್ತು ಸಂತೋಷವನ್ನು ಹರಡಿದ್ದಕ್ಕಾಗಿ ತುಂಬಾ ಧನ್ಯವಾದಗಳು. ಲವ್ ಯು ಸರ್" ಎಂದು ರಿಂಕು ಸಿಂಗ್‌ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಐಪಿಎಲ್ 2024 ರಲ್ಲಿ ಕೆಕೆಆರ್ ಚಾಂಪಿಯನ್ ಆದ ನಂತರ ರಿಂಕು ಸಿಂಗ್ ಅವರ ಸಂಭಾವನೆ 55 ಲಕ್ಷದಿಂದ 13 ಕೋಟಿಗೆ ಏರಿಕೆಯಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್‌ನಿಂದ ಶ್ರೇಯಸ್ ಅಯ್ಯರ್ ನಿರ್ಗಮಿಸಿದ ನಂತರ ರಿಂಕು ಸಿಂಗ್ ಅವರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ