Rinku singh and Virat Kohli : ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಬಗ್ಗೆ ಹೆಚ್ಚಿಗೆ ಹೇಳಬೇಕಾದ ಅಗತ್ಯವಿಲ್ಲ. ಅದ್ಭುತ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ವಿರಾಟ್‌ನನ್ನು ಅವರ ಅಭಿಮಾನಿಗಳು ಕಿಂಗ್‌ ಕೊಹ್ಲಿ ಅಂತ ಕರೆಯುತ್ತಿದ್ದಾರೆ. ಕೊಹ್ಲಿಗೆ ಭಾರತ ಅಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ಸಾಕಷ್ಟು ಫಾನ್ಸ್ ಇದ್ದಾರೆ. ಅಲ್ಲದೆ, ವಿರಾಟ್ ಕೊಹ್ಲಿಯನ್ನು ಆದರ್ಶವಾಗಿ ತೆಗೆದುಕೊಂಡು ಕ್ರಿಕೆಟ್‌ಗರು ಸಹ ಇದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ವಿರಾಟ್‌ ಅದೇಷ್ಟೋ ಯುವ ಆಟಗಾರರಿಗೆ ಸ್ಪೂರ್ತಿಯಾಗಿದ್ದಾರೆ. ಕೊಹ್ಲಿಯನ್ನು ದೇವರಂತೆ ಕಾಣುವ ಅವರು ಜೀವನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಭೇಟಿಯಾಗಬೇಕೆಂದು ಬಯಸುತ್ತಾರೆ. ಈ ಪಟ್ಟಿಯಲ್ಲಿ ಕೊಲ್ಕತಾ ನೈಟ್ ರೈಡರ್ಸ್ ಸ್ಟಾರ್ ರಿಂಕು ಸಿಂಗ್ ಕೂಡ ಒಬ್ಬರು. ರಿಂಕು ಸಿಂಗ್‌ಗೆ ಕೊಹ್ಲಿ ಮೇಲೆ ಅಪಾರ ಗೌರವ ಇದೆ. ಇದಕ್ಕೆ ಸಾಕ್ಷಿ, ಐಪಿಎಲ್ 2023 ರ ಭಾಗವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಕೋಲ್ಕತಾ ನೈಟ್ ರೈಡರ್ಸ್ ನಡುವೆ ನಡೆದ ಪಂದ್ಯದ ಸಂದರ್ಭದಲ್ಲಿ ಕಿಂಕು ಕೊಹ್ಲಿ ಕಾಲು ಮುಗಿದು ಆರ್ಶೀವಾದ ಪಡೆದದ್ದು.


Team Indiaದ ಈ ಅಪರೂಪದ ಪ್ರತಿಭೆಗೆ WTCಯಲ್ಲಿ ಇಲ್ಲ ಅವಕಾಶ! ವೃತ್ತಿಜೀವನ ಕೊನೆಗೊಳಿಸಿತೇ BCCI?


ಬುಧವಾರ ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯ ನಡೆಯಿತು. ಈ ಪಂದ್ಯ ಮುಗಿದ ನಂತರ ಡಗೌಟ್‌ಗೆ ಹೋಗುವ ಸಮಯದಲ್ಲಿ ವಿರಾಟ್ ಕೊಹ್ಲಿ ಪಾದಗಳನ್ನು ರಿಂಕೂ ಸಿಂಗ್ ಟಚ್ ಮಾಡಿ ಆಶೀರ್ವಾದ ತೆಗೆದುಕೊಂಡರು. ತಕ್ಷಣ ಕೊಯ್ಲಿ ರಿಂಕೂನಿಯನ್ನು ತಡೆದು ಶೇಕ್ ಹ್ಯಾಂಡ್ ನೀಡಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ಫೋಟೋಸ್ ನೋಡಿ ಕೊಹ್ಲಿ ಫಾನ್ಸ್ ಎಲ್ಲರೂ ಖುಷಿಯಾಗಿದ್ದಾರೆ. 


ಇನ್ನು ಮೊನ್ನೆಯ ಪಂಧ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 21 ರನ್‌ಗಳ ವ್ಯತ್ಯಾಸದೊಂದಿಗೆ ಕೊಲ್ಕತಾ ನೈಟ್ ರೈಡರ್ಸ್‌ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತಾ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 200 ರನ್ ಗಳಿಸಿತು. ಆರ್‌ಸಿಬಿ ಬೌಲರ್‌ಗಳಲ್ಲಿ ಹಸರಂಗಾ, ವಿಜಯ್ ಕುಮಾರ್ ರೆಂಡೇಸಿ ವಿಕೆಟ್‌ಗಳನ್ನು ತೆಗೆದುಕೊಂಡರು. ಬೆಂಗಳೂರು ನಿರ್ಣಿತ ಓವರ್‌ಗಳಲ್ಲಿ 8 ವಿಕೆಟ್‌ ನಷ್ಟದೊಂದಿಗೆ 179 ರನ್‌ಗಳನ್ನು ಕಲೆಹಾಕಿತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.