Rishab pant: ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಇತಿಹಾಸದಲ್ಲಿ 2000 ರನ್‌ಗಳ ಮೈಲಿಗಲ್ಲನ್ನು ತಲುಪಿದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಶುಕ್ರವಾರ ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಐದು ಟೆಸ್ಟ್‌ಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ರಿಷಬ್ ಪಂತ್ ಈ ಸಾಧನೆ ಮಾಡಿದರು.


COMMERCIAL BREAK
SCROLL TO CONTINUE READING

ಈ ಪಂದ್ಯದಲ್ಲಿ ಪಂತ್ 78 ಎಸೆತಗಳಲ್ಲಿ 37 ರನ್ ಗಳಿಸಿದರು. ಇದರಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್‌ ಭಾರಿಸಿದ ಅವರು, ಈ ರನ್‌ಗಳನ್ನು ಒಳಗೊಂಡಂತೆ, WTC ನಲ್ಲಿ 2034 ರನ್‌ಗಳನ್ನು ಭಾರಿಸಿದ್ದಾರೆ. ಇದರೊಂದಿಗೆ ಡಬ್ಲ್ಯುಟಿಸಿ ಇತಿಹಾಸದಲ್ಲಿ 2000 ರನ್ ಗಳಿಸಿದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.


ಇಂಗ್ಲೆಂಡ್‌ನ ವಿಕೆಟ್ ಕೀಪರ್ ಒಲಿ ಪೋಪ್ ಮತ್ತು ನ್ಯೂಜಿಲೆಂಡ್‌ನ ಟಾಮ್ ಲ್ಯಾಥಮ್ ಈಗಾಗಲೇ 2000 ರನ್ ಪೂರೈಸಿದ್ದರೂ, ಅವರು ಹೆಚ್ಚು ವಿಕೆಟ್ ಕೀಪಿಂಗ್ ಮಾಡಿಲ್ಲ. 4 ಇನ್ನಿಂಗ್ಸ್‌ಗಳಲ್ಲಿ ಒಲಿಪಾಪ್.. ಟಾಮ್ ಲ್ಯಾಥಮ್ ಕೇವಲ ಒಂದು ಇನ್ನಿಂಗ್ಸ್‌ನಲ್ಲಿ ವಿಕೆಟ್ ಕೀಪಿಂಗ್‌ ಮಾಡಿದ್ದರು.


2019 ರಲ್ಲಿ ಪ್ರಾರಂಭವಾದ WTC ಇದುವರೆಗೆ ಎರಡು ಆವೃತ್ತಿಗಳನ್ನು (2019-21, 2021-23) ಯಶಸ್ವಿಯಾಗಿ ಪೂರ್ಣಗೊಳಿಸಿದೆ. 2023-25ರ ಮೂರನೇ ಆವೃತ್ತಿಯು ಅಂತಿಮ ಹಂತವನ್ನು ತಲುಪಿದೆ.


ರಿಷಬ್ ಪಂತ್ WTC ಇತಿಹಾಸದಲ್ಲಿ 2000 ರನ್ ಗಳಿಸಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. ರೋಹಿತ್ ಶರ್ಮಾ (2685), ವಿರಾಟ್ ಕೊಹ್ಲಿ (2432) ಮತ್ತು ರಿಷಬ್ ಪಂತ್ (2034) ಈ ಪಟ್ಟಿಯಲ್ಲಿ ಮುಂದಿದ್ದಾರೆ. ಶುಭಮನ್ ಗಿಲ್ (1800) ಮತ್ತು ಚಟೇಶ್ವರ ಪೂಜಾರ (1769) ನಂತರದ ಸ್ಥಾನಗಳಲ್ಲಿದ್ದಾರೆ.


ಈ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಮೊದಲು ಬ್ಯಾಟಿಂಗ್ ನಲ್ಲಿ ವಿಫಲರಾದರೂ ಬೌಲಿಂಗ್ ನಲ್ಲಿ ಮಿಂಚಿದ್ದರು. ನಾಯಕ ಜಸ್ಪ್ರೀತ್ ಬುಮ್ರಾ (4/17), ಮೊಹಮ್ಮದ್ ಸಿರಾಜ್ (2/17) ಮತ್ತು ಹರ್ಷಿತ್ ರಾಣಾ (1/33) ಅಬ್ಬರಿಸಿದ ಕಾರಣ ಮೊದಲ ದಿನದಾಟದ ಅಂತ್ಯಕ್ಕೆ ಆಸೀಸ್ 27 ಓವರ್‌ಗಳಲ್ಲಿ 7 ವಿಕೆಟ್‌ಗೆ 67 ರನ್ ಗಳಿಸಿದೆ. ಮಿಚೆಲ್ ಸ್ಟಾರ್ಕ್ (6 ಬ್ಯಾಟಿಂಗ್) ಜೊತೆಗೆ ಅಲೆಕ್ಸ್ ಕ್ಯಾರಿ (19 ಬ್ಯಾಟಿಂಗ್) ಕ್ರೀಸ್‌ನಲ್ಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.