ನವದೆಹಲಿ: ವಿಶ್ವಕಪ್ ತಂಡಕ್ಕೆ ರಿಷಬ್ ಪಂತ್ ಆಯ್ಕೆ ಅಗತ್ಯ ಎಂದು ಆಶಿಶ್ ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು "ತಂಡದಲ್ಲಿ ಯಾವಾಗಲೂ ಉತ್ತಮ ಆಟಗಾರರಿತ್ತಾರೆ,ಆದರೆ ವಿಶ್ವಕಪ್ ನಂತಹ ಟೂರ್ನಿಗೆ ಯಾವಾಗಲೂ ವಿಶೇಷ ಪರಿಣಿತಿ ಹಾಗೂ ಪ್ರತಿಭೆಯನ್ನು ಹೊಂದಿರುವ ಆಟಗಾರರು ಬೇಕಾಗುತ್ತದೆ.ರಿಷಬ್ ಪಂತ್ ಕೇವಲ ಉತ್ತಮವಾಗಿ ಆಡುವವರಲ್ಲದೆ ನಿಜವಾದ ಮ್ಯಾಚ್ ವಿನ್ನರ್ ಕೂಡ ಹೌದು. ಆದ್ದರಿಂದ ಅವರನ್ನು ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಬೇಕು ಎಂದು ಅವರು ತಿಳಿಸಿದರು.


ಭಾರತದ ಬ್ಯಾಟಿಂಗ್ ಲೈನ್ ಅನ್ನು ನೀವು ನೋಡಿದರೆ, ಶಿಖರ್ (ಧವನ್) ಅವರನ್ನು ಬಿಟ್ಟರೆ ಉಳಿದ ಏಳು ಆಟಗಾರರಲ್ಲಿ ಯಾವುದೇ ಎಡಗೈ ಆಟಗಾರರಲ್ಲ.ನೀವು ಎಡ-ಬಲ ಸಂಯೋಜನೆಯನ್ನು ಹೊಂದಿರಬೇಕು ಅಲ್ಲಿ ರಿಷಬ್ ಸರಿಹೊಂದುತ್ತಾರೆ ಎಂದು ತಿಳಿಸಿದರು. ಆಶಿಸ್ ನೆಹ್ರಾ 2011 ರಲ್ಲಿ ವಿಶ್ವಕಪ್ ಗೆದ್ದ ಭಾರತದ ತಂಡದ ಸದಸ್ಯರಾಗಿದ್ದರು.