IND vs SL: ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ತಮ್ಮ ಪ್ರಯಾಣವನ್ನು ಅದ್ಧೂರಿಯಾಗಿ ಆರಂಭಿಸಿದ್ದಾರೆ. ಶ್ರೀಲಂಕಾ ಪ್ರವಾಸದೊಂದಿಗೆ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗಂಭೀರ್ ಮೊದಲ ಸರಣಿಯಲ್ಲಿ ಯಶಸ್ಸು ಪಡೆದಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರು ಟಿ20ಐ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಟೀಂ ಇಂಡಿಯಾ ವಶಪಡಿಸಿಕೊಂಡಿದೆ.


COMMERCIAL BREAK
SCROLL TO CONTINUE READING

ಶನಿವಾರ ಮತ್ತು ಭಾನುವಾರ ನಡೆದ ಎರಡು ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಸುಂದರ್ ಬದಲಿಗೆ ಯುವ ಸ್ಪಿನ್ ಆಲ್ ರೌಂಡರ್ ರಿಯಾನ್ ಪರಾಗ್ ಅವರನ್ನು ಆಯ್ಕೆ ಮಾಡುವ ಮೂಲಕ ಗಂಭೀರ್‌ ತನ್ನ ಯೋಜನೆಗಳನ್ನು ಸ್ಪಷ್ಟಪಡಿಸಿದ್ದಾರೆ.


ಟೀಂ ಇಂಡಿಯಾಗೆ ಮತ್ತೊಬ್ಬ ಯುವರಾಜ್ ಸಿಂಗ್ ತಯಾರಿ ಮಾಡುವ ಉದ್ದೇಶದಿಂದ ರಿಯಾನ್ ಪರಾಗ್ ಅವರನ್ನು ಈ ಪ್ರವಾಸಕ್ಕೆ ಆಯ್ಕೆ ಮಾಡಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲಿ ವಿಫಲರಾಗಿದ್ದ  ರಿಯಾನ್  ಪರಾಗ್ ಅವರನ್ನು ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಆಯ್ಕೆ ಮಾಡಿದ್ದಕ್ಕಾಗಿ ಗಂಭೀರ್‌ ಟೀಕೆಗೆ ಗುರಿಯಾಗಿದ್ದರು. ಆದರೆ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ  ರಿಯಾನ್  ಪರಾಗ್ ವಿಚಾರದಲ್ಲಿ ಗಂಭೀರ್ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಯಿತು.


ಇದನ್ನೂ ಓದಿ: ನಾಯಕತ್ವ ಕೈ ತಪ್ಪಿದ ಕೋಪ..ಗಂಭೀರ್‌ ಮೇಲೆ ಕೊನೆಗೂ ಸೇಡು ತೀರಿಸಿಕೊಂಡೇ ಬಿಟ್ರು ಹಾರ್ದಿಕ್‌ ಪಾಂಡ್ಯ..!


ಟೀಂ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಸಾಮರ್ಥ್ಯದ ಕೊರತೆಯಿದೆ. ಆದ್ದರಿಂದಲೇ ಗಂಭೀರ್ ರಿಯಾನ್ ಪರಾಗ್‌ಗೆ ಅವಕಾಶ ನೀಡಿದ್ದರು. ಮೊದಲ ಟಿ20ಯಲ್ಲಿ ಕೇವಲ 8 ಎಸೆತಗಳನ್ನು ಎಸೆದ ರಿಯಾನ್ ಪರಾಗ್ ಮೂರು ವಿಕೆಟ್ ಕಬಳಿಸಿ ಗಂಭೀರ್ ಅವರ ಮೇಲಿ ಇಟ್ಟ ನಂಬಿಕೆ ಉಳಿಸಿಕೊಂಡಿದ್ದಾರೆ.


ತಂಡದಲ್ಲಿ ಹೆಚ್ಚುವರಿ ಬೌಲಿಂಗ್ ಆಯ್ಕೆ ಇದ್ದರೆ ಒಳ್ಳೆಯದು ಎಂದು ರೋಹಿತ್ ಪದೇ ಪದೇ ಹೇಳುತ್ತಿದ್ದರು. ಭಾರತದ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಸಿಂಗ್ ಆಲ್ ರೌಂಡರ್ ಪಾತ್ರದ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಭವಿಷ್ಯದಲ್ಲಿ ರಿಯಾನ್ ಪರಾಗ್ ಅವರನ್ನು ಮತ್ತೊಬ್ಬ ಯುವರಾಜ್ ಸಿಂಗ್ ಆಗಿ ಪರಿವರ್ತಿಸುವ ಗುರಿಯೊಂದಿಗೆ ಗಂಭೀರ್ ಮುನ್ನಡೆಯುತ್ತಿದ್ದಾರೆ.


ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಕೂಡ ಗಂಭೀರ್ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಪರಾಗ್ ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಿರುವುದು ಸರಿಯಾದ ನಿರ್ಧಾರ ಎಂದು  ರಿಯಾನ್ ಟ್ವೀಟ್ ಮಾಡಿದ್ದಾರೆ.  ರಿಯಾನ್  ಪರಾಗ್ ಆಲ್ ರೌಂಡರ್ ಆಗಿ ಮಿಂಚಿದರೆ ಹಾರ್ದಿಕ್ ಪಾಂಡ್ಯ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂಬುದು ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ