ಮೆಲ್ಬೋರ್ನ್: ಆಸ್ಟ್ರೇಲಿಯಾ ಓಪನ್ ಪಂದ್ಯಾವಳಿಯಿಂದ ಭಾರತದ ಟೆನ್ನಿಸ್ ಏಸ್ ರೋಹನ್ ಬೋಪಣ್ಣ ಮತ್ತು  ಎಡ್ವರ್ಡ್ ರೋಜರ್-ವಾಸೆಲಿನ್ ಜೋಡಿಯು ಆಸ್ಟ್ರೇಲಿಯಾದ ಜೋಡಿ ಮೇಟ್ ಪಾವಿಕ್ ಮತ್ತು ಆಲಿವರ್ ಮಾರ್ಚ್ ವಿರುದ್ದ ಸೋಮವಾದಂದು ನಡೆದ ಫ್ರೀ ಕ್ವಾರ್ಟರ್ಫೈನಲ್ನಲ್ಲಿ ಸೋಲನ್ನು ಅನುಭವಿಸುವುದರ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ,


COMMERCIAL BREAK
SCROLL TO CONTINUE READING

ಮೊದಲ ಸೆಟ್ನಲ್ಲಿ ಸೋತ ನಂತರ, ಇಂಡೋ-ಫ್ರೆಂಚ್ ಜೋಡಿಯು ಎರಡನೆಯ ಸೆಟ್ ನಲ್ಲಿ ಪ್ರತಿರೋಧ ನೀಡಿದರು ಸಹಿತ ಅಂತಿಮ ಸುತ್ತಿನಲ್ಲಿ ಮುನ್ನಡೆ ಸಾಧಿಸಲು ವಿಫಲರಾದರು. ಅಂತಿಮವಾಗಿ 4-6, 7-6 (7-5), 3-6 ಅಂತರದಿಂದ ಸೋಲನುಭವಿಸಿದರು. 


ಭಾರತದ ಇನ್ನೊಬ್ಬ ಸ್ಪರ್ಧಿ ದಿವಾಜ್ ಶರಣ್ ರವರು ಮತ್ತು ಅವರ ಸಹ ಆಟಗಾರ ಅಮೇರಿಕದ ರಾಜೀವ್ ರಾಮ್ ಕೂಡಾ ಪಂದ್ಯವನ್ನು ಗೆಲ್ಲಲು ವಿಫಲರಾದರು. ಈ ಮೂಲಕ ಆಸ್ಟ್ರೇಲಿಯನ್ ಓಪನ್ ನ ಡಬಲ್ಸ್ ವಿಭಾಗಲ್ಲಿ ಭಾರತ  ಕೊನೆಗೊಂಡಿದೆ. ಶರನ್ ಮತ್ತು ರಾಮ್ ಪಂದ್ಯದ ಉತ್ತಮ ಆರಂಭದಲಾಭವನ್ನು ಪಡೆಯಲು ವಿಫಲರಾಗಿ ಮತ್ತು ಲುಕ್ಯಾಜ್ ಕುಬೊಟ್ ಮತ್ತು ಮಾರ್ಸೆಲೊ ಮೆಲೊ ವಿರುದ್ಧ 6-3, 6-7 (4-7), 4-6 ಅಂತರದ ಸೋಲನ್ನನುಭವಿಸಿದರು.


 


with ANI inputs