Rohit sharma-ritika: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಎರಡನೇ ಬಾರಿಗೆ ತಂದೆಯಾಗಿದ್ದಾರೆ. ರೋಹಿತ್‌ ಅವರ ಪತ್ನಿ ರಿತಿಕಾ ಸಜ್ದೆ ಗಂಡು ಮಗುವಿಗೆ ಜನ್ಮ ನೀಡಿದ್ದಾರಂತೆ. ಆದರೆ ರೋಹಿತ್ ಶರ್ಮಾ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಈ ಕುರಿತ ಚರ್ಚೆ ಜೋರಾಗಿದೆ.


COMMERCIAL BREAK
SCROLL TO CONTINUE READING

ರೋಹಿತ್ ಶರ್ಮಾ ಅಭಿಮಾನಿಗಳು ಈ ವಿಷಯದ  ಕುರಿತಾಗಿ ಟೀಂ ಇಂಡಿಯಾದ ಸ್ಟಾರ್ ಆಟಗಾರನನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸುತ್ತಿದ್ದಾರೆ. ರೋಹಿತ್‌ ಶರ್ಮಾ ಅವರು ತಮ್ಮ ಪತ್ನಿ ರಿತಿಕಾ ಅವರನ್ನು ಆಸ್ಟ್ರೇಲಿಯಾಗೆ ತಲುಪಿಸಲು ಹೋಗಿದ್ದರು, ಎಲ್ಲರೂ ಕೂಡ ವಿಶ್ರಾಂತಿ ಪಡೆಯಲು ಈ ಜೋಡಿ ವಿದೇಶಿ ಪ್ರವಾಸ ಕೈಗೊಂಡಿದ್ದಾರೆ ಎಂದುಕೊಂಡಿದ್ದರು, ಆದರೆ ತಮ್ಮ ಗರ್ಭಿಣಿ ಪತ್ನಿಯ ಹೆರಿಗೆಗಾಗಿ ರೋಹಿತ್‌ ಶರ್ಮಾ ತಮ್ಮ ಪತ್ನಿಯನ್ನು ಆಸ್ಟ್ರೇಲಿಯಾಗೆ ಸಾಗಿಸಿದ್ದರು ಎನ್ನುವ ಚರ್ಚೆ ಇದೀಗ ನಡೆಯುತ್ತಿದೆ. ಈ ಕುರಿತು ರೋಹಿತ್‌ ಶರ್ಮಾ ಯಾವುದೇ ಅಧಿಕೃತ ಮಾಹಿತಿ ನೀಡಲ್ಲವಾದರೂ, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾದ ಚರ್ಚೆಗಳು ಜೋರಾಗಿಯೇ ನಡೆಯುತ್ತಿದೆ.


ರೋಹಿತ್ ಶರ್ಮಾ ರಿತಿಕಾ ಸಜ್ದೆಯನ್ನು ಡಿಸೆಂಬರ್ 13, 2015 ಪ್ರೀತಿಸಿ ಮದುವೆಯಾಗಿದ್ದರು, ಸಮೈರಾ ಡಿಸೆಂಬರ್ 30, 2018 ರಂದು ಜನಿಸಿದರು.ಟೀಂ ಇಂಡಿಯಾದ ದಿಗ್ಗಜ, ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರು ತಮ್ಮ ಸಹೋದರಿಯಾಗಿದ್ದ ರಿತಿಕಾ ಅವರನ್ನು ರೋಹಿತ್‌ ಅವರಿಗೆ ಪರಿಚಯಿಸಿದ್ದರು, ಈ ಪರಿಚಯ ನಂತರ ಪ್ರೀತಿಗೆ ತಿರುಗಿತ್ತು. ನಂತರ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. 


ಯುವರಾಜ್ ಸಿಂಗ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುವಾಗ ರಿತಿಕಾ ಸಜ್ಡೆ ರೋಹಿತ್ ಶರ್ಮಾ ಪರಿಚಯವಾಯಿತು. ಆ ನಂತರ ರಿತಿಕಾ ರೋಹಿತ್ ಶರ್ಮಾ ಅವರ ಮ್ಯಾನೇಜರ್ ಆಗಿಯೂ ಕೆಲಸ ಮಾಡಿದರು. ವಿರಾಟ್ ಕೊಹ್ಲಿ ಅವರ ಮ್ಯಾನೇಜರ್ ಆಗಿಯೂ ರಿತಿಕಾ ಕೆಲಸ ಮಾಡಿದ್ದರು. ರೋಹಿತ್ ಜೊತೆ ಮದುವೆಯಾದ ನಂತರ ರಿತಿಕಾ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಭಾರತದಲ್ಲಿ ರೋಹಿತ್ ಶರ್ಮಾ ಆಡುವ ಪ್ರತಿಯೊಂದು ಪಂದ್ಯಕ್ಕೂ ಹಾಜರಾಗುವ ರಿತಿಕಾ ಇತ್ತೀಚೆಗೆ ಕ್ರಿಕೆಟ್ ನಿಂದ ದೂರ ಉಳಿದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.